ಗುಂಡೂರಿ ಭಜನಾ ಮಂದಿರದಿಂದ ಬೆಳ್ಳಿಯ ದೇವರ ಫೋಟೊ ಕಳವು

Advt_NewsUnder_1
Advt_NewsUnder_1
Advt_NewsUnder_1

venur gundooriವೇಣೂರು : ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡೂರಿ ಶ್ರೀ ಸತ್ಯನಾರಾಯಣ ಭಜನಾ ಮಂದಿರದಿಂದ ರೂ. 2.80 ಲಕ್ಷ ಬೆಳ್ಳಿಯ ದೇವರ ಫೋಟೊವನ್ನು ಜು.25ರಾತ್ರಿ ಕಳವುಗೈದಿದ್ದಾರೆ. ಜು. 26ರಂದು ಬೆಳಿಗ್ಗೆ ಸ್ಥಳೀಯ ನಿವಾಸಿ ವಿಠಲ ದೇವಾಡಿಗ ಅವರು ಪ್ರಾರ್ಥನೆ ಮಾಡಲೆಂದು ಮಂದಿರಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಟೀಲ್‌ನ ಬಾಗಿಲು ಮುರಿದು ಕಳ್ಳರು ಒಳಪ್ರವೇಶಿಸಿ ಈ ಕೃತ್ಯ ಎಸಗಿದ್ದಾರೆ. ಕಳೆದ 2 ವರ್ಷದ ಹಿಂದೆ ಮಂದಿರದ ಬೆಳ್ಳಿಹಬ್ಬದ ಹಿನ್ನೆಲೆಯಲ್ಲಿ ದೇವರ ಮೂರ್ತಿಯನ್ನು ಬೆಳ್ಳಿಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ವೇಣೂರು ಪೊಲೀಸರು ಸ್ಥಳಕ್ಕೆ ದಾವಿಸಿ ತನಿಖೆ ನಡೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.