ಡಾ| ಯು.ಆರ್. ರಾವ್ ನಿಧನಕ್ಕೆ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Advt_NewsUnder_1
Advt_NewsUnder_1
Advt_NewsUnder_1

ಡಾ. ಯು.ಆರ್. ರಾವ್ ಅವರು ಖ್ಯಾತ ವಿಜ್ಞಾನಿಯಾಗಿ ತಮ್ಮ ಸಂಶೋಧನೆಯಿಂದ ನಮ್ಮ ದೇಶಕ್ಕೆ ವಿಶೇಷ ಗೌರವ ತಂದು ಕೊಟ್ಟಿದ್ದಾರೆ. ಅವರು ಉಡುಪಿಯಲ್ಲಿ ಹುಟ್ಟಿ ಬೆಳೆದವರು ಅನ್ನುವುದು ನಮಗೆಲ್ಲ ಹೆಮ್ಮೆಯ ವಿಚಾರವಾಗಿದೆ.
ನಾನು ಕಂಡಂತೆ ಅವರು ನಿರಹಂಕಾರಿ ವ್ಯಕ್ತಿತ್ವ ಹೊಂದಿರುವ ಶ್ರೇಷ್ಠ ಮಾನವತಾವಾದಿ. ವಿಜ್ಞಾನವು ರಾಷ್ಟ್ರದ ಮತ್ತು ಸಮಾಜದ ಏಳಿಗೆಗಾಗಿ ಬಳಕೆಯಾಗಬೇಕೆಂದು ಅವರು ಅಭಿಪ್ರಾಯಪಟ್ಟವರು.
ನಮ್ಮ ದೇಶದ ವಿದ್ಯಾರ್ಥಿಗಳು ಅವರ ಆದರ್ಶದಲ್ಲಿ ಅಧ್ಯಯನ ಮತ್ತು ಸಂಶೋಧನೆಯ ರಂಗಕ್ಕಿಳಿದು ದೇಶದ ಪ್ರಗತಿಗಾಗಿ ಸೇವೆ ಮಾಡಬೇಕೆಂದು ಆಶಿಸುತ್ತೇನೆ.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ, ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.