HomePage_Banner_
HomePage_Banner_
HomePage_Banner_

ನಡ : ಭತ್ತದ ಕೃಷಿಯಲ್ಲಿ ಯಾಂತ್ರಿಕೃತ ನಾಟಿ ಹಾಗೂ ಪ್ರಾತ್ಯಕ್ಷತೆ ಕಾರ್ಯಕ್ರಮ ಮಕ್ಕಳಿಗೆ ಎಳೆವೆಯಲ್ಲಿಯೇ ಕೃಷಿ ಸಂಸ್ಕೃತಿಯ ಪರಿಚಯ ಅಗತ್ಯ

2

ನಡ : ಭತ್ತದ ಬಗ್ಗೆ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ಇಲ್ಲ. ಅದಕ್ಕೆ ಎಳವೆಯಲ್ಲಿಯೇ ಕೃಷಿ ಸಂಸ್ಕೃತಿಯ ಪರಿಚಯ ಮಾಡಿಸುವುದು ಅಗತ್ಯ ಎಂದು ಬೆಳ್ತಂಗಡಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಅಭಿಪ್ರಾಯಪಟ್ಟರು. ಅವರು ನಡ ಹೈಸ್ಕೂಲ್‌ನಲ್ಲಿ ಜು-೧೮ ರಂದು ಕೃಷಿ ಇಲಾಖೆ ಬೆಳ್ತಂಗಡಿ ಸ.ಪ್ರೌ.ಶಾಲೆ ನಡ, ಜೇಸಿಐ ಬೆಳ್ತಂಗಡಿ ಮಂಜುಶ್ರೀ, ರೋಟರಿ ಕ್ಲಬ್ ಬೆಳ್ತಂಗಡಿ, ಸ.ಪ.ಪೂ ಕಾಲೇಜು ನಡ ಇದರ ಆಶ್ರಯದಲ್ಲಿ ನಡೆದ ಭತ್ತದ ಕೃಷಿಯಲ್ಲಿ ಯಾಂತ್ರಿಕೃತ ನಾಟಿ ಹಾಗೂ ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ.ಪ.ಪೂ.ಕಾಲೇಜು ನಡ ಇಲ್ಲಿನ ಪ್ರಾಂಶುಪಾಲರಾದ ಲಿಲ್ಲಿ ವಹಿಸಿ ಇಂದಿನ ಯುವ ಜನತೆ ಕೃಷಿಯಿಂದ ದೂರ ಸರಿಯುತ್ತಿದ್ದು ಪಟ್ಟಣ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಅರಿವು ಹಾಗೂ ಅದರ ಮಹತ್ವದ ಬಗ್ಗೆ ತಿಳಿಯಪಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಬೆಳ್ತಂಗಡಿ ಇದರ ಕಾರ್ಯದರ್ಶಿ ಡಾ| ಪ್ರದೀಪ್ ನಾವೂರು ದೀಪ ಬೆಳಗುವುದರ ಮೂಲಕ ನೆರವೇರಿಸಿ ಭತ್ತದ ಕೃಷಿಯಿಂದ ದೂರ ಸರಿಯುವ ಇಂದಿನ ಕಾಲದ ವಿದ್ಯಾರ್ಥಿಗಳಿಗೂ ಹಾಗೂ ಯುವ ಜನತೆಗೆ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು. ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್.ಪಿ. ಕೋಟ್ಯಾನ್ ಬಳಂಜ, ಸ.ಪ್ರೌ. ಶಾಲಾ ಮುಖ್ಯೋ ಪಧ್ಯಾಯಿನಿ ಶರ್ಮಿಳಾ.ಡಿ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ನಿಕಟಪೂರ್ವಧ್ಯಕ್ಷ, ವಲಯಾಧಿಕಾರಿ ವಸಂತ ಶೆಟ್ಟಿ, ಬೆಳ್ತಂಗಡಿ ಆತ್ಮಯೋಜನೆಯ ರಾಮಕೃಷ್ಣ, ಪ್ರಗತಿಪರ ಕೃಷಿಕರಾದ ಅಜಿತ್ ಕುಮಾರ್ ಅರಿಗ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯಂತ್ ಗೌಡ ಸ್ವಾಗತಿಸಿ, ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಧ್ಯಕ್ಷ ಶ್ರೀನಾಥ್.ಕೆ.ಎಂ ಕಾರ್ಯಕ್ರಮ ನಿರೂಪಿಸಿ, ಅಜಿತ್ ಕುಮಾರ್ ಅರಿಗ ಧನ್ಯವಾದ ವಿತ್ತರು. ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಕಿರಣ್ ಕುಮಾರ್ ಶೆಟ್ಟಿ, ವಿಶಾಲ್ ಅಗಸ್ಟಿನ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.