ಹರೀಶ್ ಪೂಂಜರ ಮೇಲೆ ಹಾಕಿದ ಸುಳ್ಳು ಕೇಸು ಹಿಂಪಡೆಯುವಂತೆ ವಿವಿಧ ಸಂಘಟನೆಗಳ ಮನವಿ

Advt_NewsUnder_1
Advt_NewsUnder_1
Advt_NewsUnder_1

harish manaviಬೆಳ್ತಂಗಡಿ : ಬಂಟ್ವಾಳದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಅವರ ಮೇಲೆ ದಾಖಲಿಸಿದ ಸುಳ್ಳು ಮೊಕದ್ದಮೆಯನ್ನು ಹಿಂಪಡೆ ಯುವಂತೆ ವಿವಿಧ ಸಂಘ-ಸಂಸ್ಥೆಯವರು, ಸಂಘಟನೆಯವರು ಬೆಳ್ತಂಗಡಿ ತಾಲೂಕು ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕ ಶರತ್ ಹತ್ಯೆಯ ನಂತರ ನಡೆದ ಶವ ಯಾತ್ರೆಯ ಸಮಯ ಕೆಲವು ಮುಸ್ಲಿಂ ಸಂಘಟನೆಗಳಿಗೆ ಸೇರಿದ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಗಲಭೆ ಉಂಟು ಮಾಡಿದ್ದು, ಇದನ್ನು ನಿಯಂತ್ರಿಸಬೇಕಾದ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸುವುದನ್ನು ಬಿಟ್ಟು, ವಿವಿಧ ಹಿಂದೂ ಪರ ಸಂಘಟನೆಗಳ ಮುಖಂಡರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಅನಾವಶ್ಯಕವಾಗಿ ತೊಂದರೆ ನೀಡುವುದನ್ನು ಖಂಡಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಹರೀಶ್ ಪೂಂಜ ಮತ್ತಿತರ ನಾಯಕರ ಮೇಲೆ ದಾಖಲಿಸಲಾದ ಸುಳ್ಳು ಕೇಸನ್ನು ವಾಪಸು ಪಡೆದುಕೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡುವಂತೆ ಶ್ರೀ ವೀರಾಂಜನೇಯ ಸೇವಾ ಸಮಿತಿ ಬೆಳ್ತಂಗಡಿ, ಓಂ ಫ್ರೆಂಡ್ಸ್ ಕಟ್ಟದಬೈಲು, ಯುವ ಶಕ್ತಿ ಫ್ರೆಂಡ್ಸ್ ಭದ್ರಕಜೆ, ಪಾಂಡೇಶ್ವರ ಫ್ರೆಂಡ್ಸ್ ಜಿ.ಕೆರೆ, ಹರೀಶ್ ಪೂಂಜ ಅಭಿಮಾನಿಗಳ ಬಳಗ ಜಿ.ಕೆರೆ, ಬೆಳ್ತಂಗಡಿ, ಚರ್ಚ್‌ರೋಡು ಬೆಳ್ತಂಗಡಿ, ಕೃಷ್ಣೋತ್ಸವ ಸಮಿತಿ ಬೆಳ್ತಂಗಡಿ, ಜಿ.ಕೆರೆ, ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಜಿ.ಕೆರೆ, ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ, ವಿ.ಹಿಂ.ಪ, ಭಜರಂಗದಳ ಬೆಳ್ತಂಡಿ-ಗುರುವಾಯನಕೆರೆ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಲಾಲ, ಜೈ ಶ್ರೀರಾಮ್ ಫ್ರೆಂಡ್ಸ್ ಪಡಂಗಡಿ ಸೇರಿದಂತೆ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.