ಅಂತರ್ಜಲ ಅಭಿವೃದ್ಧಿಗೆ ಸರಕಾರದಿಂದ ಅನುದಾನ 25 ಗ್ರಾ.ಪಂ.ಗಳಲ್ಲಿ ಜಲಮರುಪೂರಣ-ಮಳೆಕೊಯ್ಲು ಯೋಜನೆ

Advt_NewsUnder_1
Advt_NewsUnder_1
Advt_NewsUnder_1

Jala marupooranaಜಲಮರುಪೂರಣ

Male koyluಮಳೆಕೊಯ್ಲು

ಬೆಳ್ತಂಗಡಿ: ದಿನದಿಂದ ದಿನಕ್ಕೆ ಕುಸಿಯುತ್ತಿರುವ ಅಂತರ್ಜಲ ಅಭಿವೃದ್ಧಿ ಯೋಜನೆಗೆ ಸರಕಾರದ ಆದೇಶದಂತೆ ಗ್ರಾಮ ಪಂಚಾಯತು ಮೂಲಕ ವಿವಿಧ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನ 25 ಗ್ರಾ.ಪಂಗಳಲ್ಲಿ ಕೊಳವೆ ಬಾವಿಗೆ ಜಲಮರುಪೂರಣ ಹಾಗೂ ಮಳೆಕೊಯ್ಲು ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ನೀರು ಇಲ್ಲದ ಕೊಳವೆ ಬಾವಿಗಳನ್ನು ಗುರುತಿಸಿ ಅದಕ್ಕೆ ಜಲಮರುಪೂರಣ ಮಾಡಿದಾಗ ಭೂಮಿಯಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗುವುದರ ಜೊತೆಗೆ ಕೊಳವೆ ಬಾವಿಯನ್ನು ಮರು ಬಳಕೆ ಮಾಡುವುದು ಇದರ ಉದ್ದೇಶವಾಗಿದೆ. ಸರಕಾರ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಲ ಸಂರಕ್ಷಣೆ ಕಾರ್ಯಕ್ರಮವನ್ನು ಮಾಡಲು ಅವಕಾಶ ನೀಡಿದ್ದು, ಈ ಯೋಜನೆಯಲ್ಲಿ ಈ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ಅಲ್ಲದೆ ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ಸಂಗ್ರಹಿಸುವ ಮಳೆ ನೀರು ಕೊಯ್ಲು ಕಾರ್ಯಕ್ರಮವನ್ನು ವಿವಿಧ ಗ್ರಾ.ಪಂಗಳಲ್ಲಿ ಮಾಡಲಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಕೊಳೆವೆ ಬಾವಿ ಜಲಮರುಪೂರಣ ಮಾಡಿದ ಗ್ರಾ.ಪಂಗಳಲ್ಲಿ ಇಂದಬೆಟ್ಟು 1 ಘಟಕ, ಕಳೆಂಜ 1 ಘಟಕ, ಕುವೆಟ್ಟು 1 ಘಟಕ, ಮಾಲಾಡಿ 2 ಘಟಕ, ಮಲವಂತಿಗೆ 2 ಘಟಕ, ಮುಂಡಾಜೆ 1 ಘಟಕ, ನಾರಾವಿ 2 ಘಟಕ, ನೆರಿಯ 1 ಘಟಕ , ತೆಕ್ಕಾರು 1 ಘಟಕ, ಉಜಿರೆ 1 ಘಟಕ, ವೇಣೂರು 2 ಘಟಕ ಸೇರಿದಂತೆ 15 ಕಡೆಗಳಲ್ಲಿ ಯೋಜನೆಯನ್ನು ಮಾಡಲಾಗಿದೆ.
ಮಳೆ ನೀರನ್ನು ಸಂಗ್ರಹಿಸುವ ಮಳೆ ಕೊಯ್ಲು ಯೋಜನೆಯನ್ನು ಬಂದಾರು 1 ಘಟಕ, ಚಾರ್ಮಾಡಿ 1 ಘಟಕ, ಮಡಂತ್ಯಾರು 1 ಘಟಕ, ಮೇಲಂತಬೆಟ್ಟು 1 ಘಟಕ, ಮುಂಡಾಜೆ 1 ಘಟಕ, ನೆರಿಯ 1 ಘಟಕ, ಪಡಂಗಡಿ 1 ಘಟಕ, ಪಟ್ರಮೆ 1 ಘಟಕ, ಉಜಿರೆ 1 ಘಟಕ, ವೇಣೂರು 1 ಘಟಕ ಸೇರಿದಂತೆ ಈ ವರ್ಷ 10 ಗ್ರಾಮ ಪಂಚಾಯತುಗಳಲ್ಲಿ ಅನುಷ್ಠಾನ ಮಾಡಲಾಗಿದೆ.
ಕಳೆದ ಬೇಸಿಗೆಯಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭೀಕರ ಬರಗಾಲ ಹಾಗೂ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ತಾತ್ವರ ಕಂಡು ಬಂದಿತ್ತು. ಅಲ್ಲದೆ ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿದು ಹೋಗಿದ್ದು, ಹಿಂದೆ 300ರಿಂದ 400 ಫೀಟಿನಲ್ಲಿ ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿದ್ದರೆ, ಈಗ 700ರಿಂದ 900 ಫೀಟು ಆಳಕ್ಕೆ ಕೊರೆದರೂ ನೀರು ಸಿಗುತ್ತಿಲ್ಲ. ಈ ಎಲ್ಲಾ ಹಿನ್ನಲೆಯಲ್ಲಿ ಅಂತರ್ಜಲ ಮಟ್ಟ ಏರಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಭೂಮಿಗೆ ನೀರನ್ನು ಇಂಗಿಸಬೇಕು. ಇದಕ್ಕಾಗಿ ಸರಕಾರ ಹೆಚ್ಚಿನ ಆದ್ಯತೆಯನ್ನು ವಿವಿಧ ಯೋಜನೆಗಳ ಮೂಲಕ ನೀಡುತ್ತಿದೆ.
ಅಲ್ಲಲ್ಲಿ ಕಿಂಡಿಅಣೆಕಟ್ಟುಗಳ ನಿರ್ಮಾಣ, ಕೊಳವೆ ಬಾವಿಗಳಿಗೆ ಜಲಮರುಪೂರಣ, ಮಳೆಕೊಯ್ಲು, ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಾಣ, ಜಲನಯನ ಅಭಿವೃದ್ಧಿ ಯೋಜನೆಗಳು, ಸಾರ್ವಜನಿಕ ಕೆರೆಗಳ ಹೂಳೆತ್ತುವ ಕಾರ್ಯಕ್ರಮ, ಕೊಳವೆ ಬಾವಿ ಬದಲು ತೆರೆದ ಬಾವಿ ರಚನೆ, ಪರಿಸರ ಜಾಗೃತಿ ಮೊದಲಾದ ಕಾರ್ಯಕ್ರಮಗಳಿಗೆ ಸರಕಾರ ವಿವಿಧ ಯೋಜನೆಗಳ ಮೂಲಕ ಅನುದಾನ ಒದಗಿಸುತ್ತದೆ. ಸಂಘ-ಸಂಸ್ಥೆಗಳು ಕೂಡ ತಮ್ಮದೇ ಆದ ನಿಟ್ಟಿನಲ್ಲಿ ಯೋಜನೆಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಜನರಲ್ಲಿ ಪರಿಸರ ಸಂರಕ್ಷಣೆ, ಅಂತರ್ಜಲ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.