ಕಸ್ತೂರಿರಂಗನ್ ವರದಿ ಜಾರಿಯನ್ನು ತಡೆಯುವುದೇ ನಮ್ಮ ಬದುಕಿನ ರಕ್ಷಣೆ : ಡಾ. ದುರ್ಗಾಪ್ರಸಾದ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

cpm thotathady kasturi rangan varadi virodaತೋಟತ್ತಾಡಿ : ಕಸ್ತೂರಿ ರಂಗನ್ ವರದಿ ಜಾರಿ ಮಾಡಿಯೇ ಸಿದ್ದ ಎಂದು ನರೇಂದ್ರ ಮೋದಿ ಸರಕಾರ ಸುಪ್ರೀಂಕೋರ್ಟುಗೆ ಅಫಿದಾವಿಟ್ ಸಲ್ಲಿಸಿ, ದೇಶದ ಜನರಿಗೆ ಮಹಾ ದ್ರೋಹ ಬಗೆದಿದ್ದಾರೆ ಎಂದು ಕೊಡಗಿನ ಹಿರಿಯರೈತ ಮುಖಂಡ ಡಾ. ದುರ್ಗಾಪ್ರಸಾದ್ ಹೇಳಿದರು.
ಅವರು ಜು.9 ರಂದು ತೋಟತ್ತಾಡಿಯ ಕುತ್ರಿಜಾಲು ಎಂಬಲ್ಲಿ ಎಕೆಜಿ ಸಂಗಾತಿ ಗುಂಪು ಕಾಂಚರಿ ಖಂಡಾ ಮತ್ತು ದ್ವಿಗ್ವಿಜಯ ಯುವಕ ಮಂಡಲ ಕುತ್ರಿಜಾಲು ಜಂಟಿಯಾಗಿ ನಡೆಸಿದ ಡಾ.ಕನ್ ವರದಿ ಜಾರಿ ವಿರೋದಿ ರೈತ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು. ನಿಜವಾಗಿ ಪರಿಸರವನ್ನು ನಾಶ ಮಾಡುತ್ತಿರುವ ಅಮೇರಿಕಾ ಮೊದಲಾದ ಶ್ರೀಮಂತ ರಾಷ್ಟ್ರಗಳನ್ನು ಎದುರಿಸಲಾಗದ ನಮ್ಮಂತಹ ದೇಶಗಳು ಅವರಿಗೆ ಶರಣಾಗಿ ಜನರನ್ನು ಬೀದಿಪಾಲು ಮಾಡಲು ಮುಂದಾಗಿವೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡುವುದಕ್ಕೂ ಪರಿಸರ ರಕ್ಷಣಾ ಸಮಿತಿಯ ಅನುಮತಿ ಪಡಕೊಳ್ಳಬೇಕು. ಆದ್ದರಿಂದ ಈ ಜನವಿರೋದಿ ವರದಿಯ ವಿರುದ್ದ ಜನಾಂದೋಲನ ಮಾಡಲು ನಾವು ಸಿದ್ದರಾಗಬೇಕು ಎಂದರು. ಕಾಂಗ್ರೆಸ್ ಸರಕಾರ ಈ ಸಮಿತಿಗಳನ್ನು ರಚಿಸಿ ಪಡೆದ ವರದಿಯನ್ನು ಇಂದು ಬಿಜೆಪಿ ಸರಕಾರ ಜಾರಿ ಮಾಡಲು ಮುಂದಾಗಿದೆ. ನಮ್ಮ ಈ ಬಾಗದ 8 ಎಂ.ಪಿ.ಗಳೂ ಮೌನವಾಗಿದ್ದುಕೊಂಡು ಕೇಂದ್ರ ಸರಕಾರದ ನಿರ್ಧಾರವನ್ನು ವಿರೋದಿಸಲೂ ಸಾದ್ಯವಾಗದವ ರಾಗಿದ್ದಾರೆ. ರಾಜ್ಯ ಸರಕಾರ ಮಾತ್ರ ಜನವಸತಿ ಪ್ರದೇಶ ಬಿಡಲು ವಿನಂತಿಸಿ ಆಕ್ಷೇಪ ಸಲ್ಲಿಸಿದ್ದರೂ ಕೇಂದ್ರ ಅದನ್ನು ಗಣನೆಗೆ ತೆಗೆದುಕೊಂಡಿಲ್ಲ. ಆದರೆ ರಾಜ್ಯ ಸರಕಾರ ಕೂಡಾ ಅರಣ್ಯವಾಸಿಗಳ ಪ್ರದೇಶದ ಬಗ್ಗೆ ಯಾವುದೇ ಆಕ್ಷೇಪ ಸಲ್ಲಿಸಿಲ್ಲ ಎಂದವರು ಆರೋಪಿಸಿದರು. ಕಸ್ತೂರಿರಂಗನ್ ವರದಿ ಜಾರಿಯನ್ನು ತಡೆಯುವುದೇ ನಮ್ಮ ಬದುಕಿನ ರಕ್ಷಣೆಗಿರುವ ದಾರಿ ಎಂದವರು ಕರೆ ನೀಡಿದರು.
ರಬ್ಬರ್ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರೂ ಕಸ್ತೂರಿರಂಗನ್ ವರದಿ ಜಾರಿ ವಿರೋದಿ ಹೋರಾಟ ಸಮಿತಿಯ ಗೌರವಾದ್ಯಕ್ಷರೂ ಆದ ಶ್ರೀಧರ ಭಿಢೆ ಅವರು ಮಾತನಾಡಿ ನಮಗರಿವಿಲ್ಲದೇಯೇ ಕೇಂದ್ರ ಸರಕಾರ ನಮ್ಮನ್ನು ಮುಖ್ಯವಾಗಿ ಕೃಷಿಕರನ್ನು ಅತಂತ್ರರನ್ನಾಗಿಸುತ್ತದೆ. ನೋಟಿನ ಅಮಾನ್ಯ ಮಾಡುವ ವಿಚಾರ ಕಾರ್ಪರೇಟ್‌ಗಳಿಗೆ ಮತ್ತು ಗುಜರಾತಲ್ಲಿ 6 ತಿಂಗಳ ಮೊದಲೇ ಪ್ರಚಾರವಾಗಿದ್ದರೂ ನಮ್ಮಂತ ಸಾಮಾನ್ಯರಿಗೆ ತಿಳಿದಿಲ್ಲ. ಇದರಿಂದ ನಾವು ಕಷ್ಟ ಪಡಬೇಕಾಗಿ ಬಂತೇ ವಿನಃ, ಇದರಿಂದ ಏನೂ ಸಾಧಿಸಲಾಗಿರಲಿಲ್ಲ. ಅದೇ ರೀತಿ ಈ ಕಸ್ತೂರಿ ರಂಗನ್ ವರದಿಯೂ ನಾಳೆ ನಮ್ಮನ್ನು ಬೀದಿ ಪಾಲು ಮಾಡಿದ ಮೇಲೆ ಚಿಂತೆ ಮಾಡುವ ಬದಲು ಇಂದೇ ಪ್ರಜ್ಞಾವಂತರಾಗಿ ಹೋರಾಟಕ್ಕೆ ಸಿದ್ದರಾಗೋಣ ಎಂದರು.
ಈ ರೈತ ಸಮಾವೇಶವನ್ನು ತೋಟತ್ತಾಡಿ ಆಂಟನೀಸ್ ಚರ್ಚಿನ ಧರ್ಮ ಗುರುಗಳಾದ ರೇ.ಫಾದರ್ ತೋಮಸ್ ಪಾರೆಕಾಟಿಲ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಕ.ರಂ.ವರದಿ ಜಾರಿ ವಿರೋದಿ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಭಟ್ ಕೊಜಂಬೆ ಅವರು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಾಸಿಗಳ ಸಮಸ್ಯೆಗಳ ವಿರುದ್ದ ನಿರ್ಣಾಯಕ ಹೋರಾಟ ನಡೆಸಿ ಯಶಸ್ವಿಯಾದ ಬಗ್ಗೆ ವಿವರಿಸಿದರು. ಸಮಾವೇಶದ ಅಧ್ಯಕ್ಷತೆಯನ್ನು ಕರ್ನಾಟಕ ಪ್ರಾಂತ ರೈತ ಸಂಘದ ಬೆಳ್ತಂಗಡಿ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಕ.ರಂ.ವರದಿ ವಿರೋಧಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆದ ನ್ಯಾಯವಾದಿ ಬಿ.ಎಂ.ಭಟ್ ಪ್ರತಿ ಪಂಚಾಯತು ಮಟ್ಟದ ಆಂದೋಲನ ನಡೆಸಿ ತೀವ್ರ ಸ್ವರೂಪದ ಹೋರಾಟಕ್ಕೆ ಕರೆ ನೀಡಿದರು.
ವೇದಿಕೆಯಲ್ಲಿ ಕೆ.ಪಿ.ಆರ್.ಎಸ್ ತಾಲೂಕು ಅಧ್ಯಕ್ಷ ಲಕ್ಷ್ಮಣಗೌಡ, ಕುಡುಮಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮುಖ್ಯಸ್ಥ ರಾಘವಗೌಡ, ಎಕೆಜಿ ಸಂಗಾತಿ ಗುಂಪಿನ ಅಧ್ಯಕ್ಷ ಲಕ್ಷ್ಮಣ ಭಂಡಾರಿ, ಕಾರ್ಯದರ್ಶಿ ಕೆಪಿ ಜೋಸೆಫ್, ದಿಗ್ವಿಜಯ ಯುವಕ ಮಂಡಲದ ಅಧ್ಯಕ್ಷ ಜಿಬಿ ಹಾಗೂ ಕಾರ್ಯದರ್ಶಿ ನಿತಿನ್ ಉಪಸ್ಥಿತರಿದ್ದರು. ವಿಜೇಶ್ ಕುತ್ರಿಜಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿನೋಯಿ ತೋಟತ್ತಾಡಿ ಧನ್ಯವಾದ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.