ವಾಣಿ ಪಿ.ಯು. ಕಾಲೇಜಿನ ವಿದ್ಯಾರ್ಥಿ ವೆಂಕಟೇಶ್ ಸಾವು

Advt_NewsUnder_1
Advt_NewsUnder_1
Advt_NewsUnder_1

venkatesh mಇಲಿ ಜ್ವರ ಎಂಬ ಶಂಕೆ : ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆದಿದ್ದ ಬಾಲಕ

ಬೆಳ್ತಂಗಡಿ : ಬೆಳ್ತಂಗಡಿ ವಾಣಿ ಪ. ಪೂ. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕಳೆಂಜ ಗ್ರಾಮದ ಕಾಯರ್ತಡ್ಕ ಮರಕಡ ನಿವಾಸಿ, ಆನಂದ ಗೌಡ ಮತ್ತು ಉಮಾವತಿ ದಂಪತಿ ಪುತ್ರ ವೆಂಕಟೇಶ್ (17ವ.) ಅವರು ಅನಾರೋಗ್ಯಕ್ಕೆ ತುತ್ತಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.11 ರಂದು ನಿಧನರಾಗಿದ್ದಾರೆ.
ಕಳೆದ ಜು. 4 ರಂದು ಕೊನೆಯದಾಗಿ ಕಾಲೇಜಿನ ಕಲಾಪದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿ ಬಳಿಕದಿಂದ ಅನಾರೋಗ್ಯ ನಿಮಿತ್ತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜು. 11 ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದರು. ಅನಾರೋಗ್ಯದ ಪರಿಣಾಮ
ಉದರದೊಳಗಿನ ಇತರ ಅಂಗಾಂಗಗಳಿಗೂ ಘಾಸಿಯಾಗಿ ಜು. 11 ರಂದು ಬೆಳಿಗ್ಗೆ 7.20ರ ಸುಮಾರಿಗೆ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿರುವುದಾಗಿ ಹೇಳಲಾಗಿದೆ.
ಕಾಯರ್ತಡ್ಕ ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ವೆಂಕಟೇಶ್ ಕಳೆದ ವರ್ಷ ವಾಣಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪೂರ್ತಿಗೊಳಿಸಿ ದ್ವಿತೀಯ ಪಿಯುಸಿಗೆ ಉತ್ತೀರ್ಣರಾಗಿದ್ದರು.
ಕ್ರಿಯಾಶೀಲ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದ ಅವರು ಕ್ರೀಡೆ, ಎನ್.ಎಸ್.ಎಸ್. ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದರು.
ಆಟವಾಡುವ ವೇಳೆ ಬಿದ್ದು ಬೆನ್ನಿಗೆ ನೋವು :
ಇತ್ತೀಚೆಗೆ ಆಟವಾಡುತ್ತಿದ್ದ ವೇಳೆ ಬಿದ್ದಿದ್ದ ವೆಂಕಟೇಶ್‌ರಿಗೆ ಜೋರಾದ ಬೆನ್ನು ನೋವು ಕಾಣಿಸಿಕೊಂಡಿತ್ತು. ಇದಕ್ಕಾಗಿ ಬೆಳ್ತಂಗಡಿಯ ಎಲುಬು ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದ್ದು, ಎಕ್ಸ್‌ರೇ ಮೂಲಕ ಪರೀಕ್ಷಿಸಿ ಗುದ್ದಿದ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಎಮ್.ಆರ್.ಐ. ಸ್ಕ್ಯಾನ್ ಮಾಡಿಸುವಂತೆ ಸಲಹೆಯನ್ನೂ ನೀಡಿದ್ದರು. ಆ ನಿಟ್ಟಿನಲ್ಲಿ ಅವರನ್ನು ತಂದೆ ಆನಂದ ಗೌಡ ಮಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಈ ನಡುವೆ ವಿದ್ಯಾರ್ಥಿಗೆ ತೀವ್ರ ತಲೆ ಭಾರ, ಒಂದು ದಿನ ಜ್ವರ ಕೂಡ ಕಾಣಿಸಿಕೊಂಡಿದ್ದು, ಇದು ಇಲಿ ಜ್ವರವಾಗಿರಬಹುದು. ಆ ಪರಿಣಾಮದಿಂದ ಈ ಸಾವು ಸಂಭವಿಸಿರಬಹುದು ಎಂಬ ಬಗ್ಗೆ ಸಂದೇಹ ವ್ಯಕ್ತವಾಗಿದೆ. ಈ ಬಗ್ಗೆ ತಾ| ಆರೋಗ್ಯಾಧಿಕಾರಿ ಡಾ| ಕಲಾಮಧು ಶೆಟ್ಟಿ ಅವರನ್ನು ಸುದ್ದಿ ಸಂಪರ್ಕಿಸಿದಾಗ, ನಾನು ಬೆಂಗಳೂರಿಗೆ ತರಭೇತಿ ನಿಮಿತ್ತ ತೆರಳಿದ್ದೆ. ಆರೋಗ್ಯ ಪರಿವೀಕ್ಷಕರ ಮಾಹಿತಿಯಂತೆ ಜ್ವರದ ಕಾರಣಕ್ಕೆ ಯಾವುದೇ ಆಸ್ಪತ್ರೆಯಿಂದ ವೆಂಕಟೇಶ್ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾದ ವಿವರವಿಲ್ಲ. ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಖಾಸಗಿ ಆಸ್ಪತ್ರೆ ಅವರ ರಕ್ತದ ಮಾದರಿ ಸಂಗ್ರಹಿಸಿದ್ದರೆ ಅದನ್ನು ಅವರು ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರೆ ಪರೀಕ್ಷೆಯ ವೇಳೆ ಇಲಿಜ್ವರದ ಅಂಶವಿತ್ತೇ ಎಂಬ ಬಗ್ಗೆ ಕಾರಣ ತಿಳಿಯಲಿದೆ ಎಂದಿದ್ದಾರೆ.
ಮೃತ ಬಾಲಕ ತಂದೆ, ತಾಯಿ ಮಾತ್ರವಲ್ಲದೆ, 8ನೇ ತರಗತಿ ಕಲಿಯುತ್ತಿರುವ ತಂಗಿ ಚೇತನಾ, ಅಜ್ಜ ಹೊನ್ನಪ್ಪ ಗೌಡ, ಅಜ್ಜಿ ಚಿಕ್ಕಮ್ಮ ಸಹಿತ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಮನೆಗೆ ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ತಾ| ಅಧ್ಯಕ್ಷ ರಂಜನ್ ಜಿ. ಗೌಡ, ವಾಣಿ ವಿದ್ಯಾಸಂಸ್ಥೆಗಳ ಪೂರ್ವಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ವಾಣಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಿ. ಯದುಪತಿ ಗೌಡ ಸಹಿತ ಉಪನ್ಯಾಸಕ ವೃಂದ, ಆಡಳಿತ ಮಂಡಳಿ ಪದಾಧಿಕಾರಿಗಳು, ಕಳೆಂಜ ಗ್ರಾ.ಪಂ. ಅಧ್ಯಕ್ಷೆ ಶಾರದಾ, ಉಪಾಧ್ಯಕ್ಷ ರಾಜೇಶ್ ಸಹಿತ ಸದಸ್ಯರುಗಳು, ಹೆಚ್ಚಿನ ಸಂಖ್ಯೆಯಲ್ಲಿ ಊರವರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಮೃತರ ಗೌರವಾರ್ಥ ವಾಣಿ ಕಾಲೇಜಿನಲ್ಲಿ ಮೌನಪ್ರಾರ್ಥನೆ ನೆರವೇರಿಸಿ ಜು. 11 ರಂದು ಕಾಲೇಜಿಗೆ ರಜೆ ಸಾರಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.