ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕಕ್ಕೆ ಇಬ್ಬರ ನೇಮಕ : ನಗರ ಅಧ್ಯಕ್ಷರಾಗಿ ಬೀಬಿ ಹಾಜಿರಾ: ಗ್ರಾಮೀಣ ಅಧ್ಯಕ್ಷರಾಗಿ ಉಷಾ ಶರತ್

  suddi COLORpdf BLDY.p65ಬೆಳ್ತಂಗಡಿ: ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ನೂತನ ಅಧ್ಯಕ್ಷರುಗಳಾಗಿ ನಗರ ಘಟಕಕ್ಕೆ ಬೀಬಿ ಹಾಜಿರಾ ಹಾಗೂ ಗ್ರಾಮೀಣ ಘಟಕಕ್ಕೆ ಉಷಾ ಶರತ್ ಅವರನ್ನು ನೇಮಕಗೊಳಿಸಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ ಅವರು ಆದೇಶ ನೀಡಿದ್ದಾರೆ. ಶಾಸಕ ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷರೂ ಆಗಿರುವ ಕೆ. ವಸಂತ ಬಂಗೇರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ
ಶಿಫಾರಸ್ಸಿನ ಮೇರೆಗೆ ಈ ನೇಮಕಾತಿ ನಡೆದಿದೆ.
ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ನಗರ ಅಧ್ಯಕ್ಷರಾಗಿ ನೇಮಕವಾಗಿರುವ ಬೀಬಿ ಹಾಜಿರಾ ಅವರು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮುಹಮ್ಮದ್ ರಫಿ ಅವರ ಪತ್ನಿಯಾಗಿದ್ದು, ಈ ಹಿಂದೆ ಅವರು ನಗರ ಪಂಚಾಯತ್ ಸದಸ್ಯರಾಗಿ, ಒಂದು ಅವಧಿಗೆ ಉಪಾಧ್ಯಕ್ಷರಾಗಿ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ. ಜೊತೆಗೆ ಅವರು ಶಾಸಕರ ಅಧ್ಯಕ್ಷತೆಯ ತಾಲೂಕು ಭೂ ಸುಧಾರಣಾ ನ್ಯಾಯ ಮಂಡಳಿ(ಟ್ರಿಬ್ಯೂನಲ್) ಇದರ ಸರಕಾರಿ ನಾಮನಿರ್ದೇಶನ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಗ್ರಾಮೀಣ ಅಧ್ಯಕ್ಷರಾಗಿ ನೇಮಕವಾಗಿರುವ ಉಷಾ ಶರತ್ ಅವರು ತಾ.ಪಂ ಮಾಜಿ ಸದಸ್ಯ, ಬಾರ್ಯ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶರತ್ ಕುಮಾರ್ ಬಾರ್ಯ ಅವರ ಪತ್ನಿಯಾಗಿದ್ದು, ಬಾರ್ಯ ಗ್ರಾ.ಪಂ ಸದಸ್ಯರಾಗಿದ್ದಾರೆ. ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ. ಬಾರ್ಯ, ಪುತ್ತಿಲ, ತೆಕ್ಕಾರು ಈ ಮೂರು ಗ್ರಾಮಗಳನ್ನೊಳಗೊಂಡಿರುವ ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಅವರು ಕೆಲವು ವರ್ಷಗಳಿಂದ ಕ್ರಿಯಾಶೀಲವಾಗಿ ಪಕ್ಷ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.