ಕೃಷಿ ಬಳಕೆಗೆ ನೀರು-ಅಂತರ್ಜಲ ಅಭಿವೃದ್ಧಿಗೆ ಆದ್ಯತೆ : 48 ಗ್ರಾ.ಪಂ. ವ್ಯಾಪ್ತಿಯಲ್ಲಿ 68 ಕಿಂಡಿ ಅಣೆಕಟ್ಟುಗಳ ನಿರ್ಮಾಣ

Nada Moodottu kindi anekattu

ನಡ ಮೂಡೊಟ್ಟು ಕಿಂಡಿ ಅಣೆಕಟ್ಟು

ನಡ ಗ್ರಾ.ಪಂದಲ್ಲಿ 4, ಕಲ್ಮಂಜದಲ್ಲಿ 3, ಚಾರ್ಮಾಡಿಯಲ್ಲಿ 3, ವೇಣೂರಿನಲ್ಲಿ 3, ನಾವೂರುನಲ್ಲಿ 3, ಅಳದಂಗಡಿ, ಬಂದಾರು, ಬಾರ್ಯ, ಇಂದಬೆಟ್ಟು, ಮರೋಡಿ, ನಾರಾವಿ, ಪಟ್ರಮೆ, ಶಿರ್ಲಾಲು, ತಣ್ಣೀರುಪಂತದಲ್ಲಿ ತಲಾ 2 ಹಾಗೂ ಇತರ ಎಲ್ಲಾ ಗ್ರಾಮ ಪಂಚಾಯತುಗಳಲ್ಲಿ ತಲಾ 1 ಕಿಂಡಿ ಅಣೆಕಟ್ಟು ನಿರ್ಮಾಣದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಬೆಳ್ತಂಗಡಿ: ವಿವಿಧ ಕೃಷಿಗಳಿಗೆ ನೀರಿನ ಬಳಕೆ ಹಾಗೂ ಭೂಮಿಯಲ್ಲಿ ಕುಸಿದಿರುವ ಅಂತರ್ಜಲ ಮಟ್ಟವನ್ನು ಅಭಿವೃದ್ಧಿ ಪಡಿಸಲು ಸರಕಾರ ಹೆಚ್ಚಿನ ಆದ್ಯತೆ ನೀಡುವುದರನ್ವಯ ಮಹಾತ್ಮ ಗಾಂಧಿ ನರೇಗ ಯೋಜನೆಯಡಿ ಬೆಳ್ತಂಗಡಿ ತಾಲೂಕಿನ 48 ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ 68 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ನಡ ಗ್ರಾ.ಪಂದಲ್ಲಿ 4, ಕಲ್ಮಂಜದಲ್ಲಿ 3, ಚಾರ್ಮಾಡಿಯಲ್ಲಿ 3, ವೇಣೂರಿನಲ್ಲಿ 3, ನಾವೂರುನಲ್ಲಿ 3, ಅಳದಂಗಡಿ, ಬಂದಾರು, ಬಾರ್ಯ, ಇಂದಬೆಟ್ಟು, ಮರೋಡಿ, ನಾರಾವಿ, ಪಟ್ರಮೆ, ಶಿರ್ಲಾಲು, ತಣ್ಣೀರುಪಂತದಲ್ಲಿ ತಲಾ 2 ಹಾಗೂ ಇತರ ಎಲ್ಲಾ ಗ್ರಾಮ ಪಂಚಾಯತುಗಳಲ್ಲಿ ತಲಾ 1 ಕಿಂಡಿ ಅಣೆಕಟ್ಟು ನಿರ್ಮಾಣದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಯೋಜನೆ ಹಮ್ಮಿಕೊಂಡ 68 ಕಿಂಡಿಅಣೆಕಟ್ಟುಗಳಲ್ಲಿ 47 ಕಿಂಡಿಅಣೆಕಟ್ಟುಗಳ ಕಾಮಗಾರಿ ಕಳೆದ ಬೇಸಿಗೆಯಲ್ಲಿ ಪೂರ್ತಿಗೊಂಡಿದೆ. ಉಳಿದಂತೆ 8 ಅಣೆಕಟ್ಟುಗಳು ಎಪ್ರೋಚ್ ಸ್ಲೇಬ್‌ನ ಹಂತದಲ್ಲಿದೆ. 4 ಅಣೆಕಟ್ಟುಗಳು ಫಿಲ್ಲರ್ ಹಾಗೂ 9 ಅಣೆಕಟ್ಟುಗಳು ಫಿಲ್ಲರ್ ಹಂತಕ್ಕೆ ತಲುಪಿದೆ.
ಅಣೆಕಟ್ಟು ನಿರ್ಮಾಣದ ವಿವರ: ಅಳದಂಗಡಿ ಗ್ರಾ.ಪಂ- ಪಿಲ್ಯ ಗ್ರಾಮದ ಬರಾಯ ಗೋಪಾಲಕೃಷ್ಣ ದೇವಸ್ಥಾನದ ಬಳಿ, ಸುಲ್ಕೇರಿ ಮೊಗ್ರು ಗ್ರಾಮದ ಕಾಡಂಗೆ. ಅಂಡಿಂಜೆ ಗ್ರಾ.ಪಂ- ಸಾವ್ಯ ಗ್ರಾಮದ ಹಿರ್ತೋಟ್ಟು. ಆರಂಬೋಡಿ ಗ್ರಾ.ಪಂ- ಆರಂಬೋಡಿ ಗ್ರಾಮದ ಅಜ್ಜಾಡಿ. ಅರಸಿನಮಕ್ಕಿ- ರೆಖ್ಯ ಗ್ರಾಮದ ಅರ್ಜಾಲು ಕೊಡೆಂಚಿ. ಬಳಂಜ ಗ್ರಾ.ಪಂ- ತೆಂಕಕಾರಂದೂರು ಗ್ರಾಮದ ಮೈಂದ ಕುಮೇರ. ಬಂದಾರು ಗ್ರಾ.ಪಂ- ಬಂದಾರು ಗ್ರಾಮದ ಬಾಲಂಪಾಡಿ ಮತ್ತು ಕುಂಬುಡಾಗೆ. ಬಾರ್ಯ ಗ್ರಾ.ಪಂ- ಬಾರ್ಯ ಗ್ರಾಮದ ಸೇಸಪ್ಪ ಸಾಲ್ಯಾನ್ ಮನೆ ಬಳಿ ಮತ್ತು ಪುತ್ತಿಲ ಗ್ರಾಮದ ಜಯರಾಜ್ ಹೆಗ್ಡೆ ಮನೆ ಬಳಿ. ಬೆಳಾಲು ಗ್ರಾ.ಪಂ- ಬೆಳಾಲು ಗ್ರಾಮದ ಮಾಯ ಬರೆಮೇಲು.
ಚಾರ್ಮಾಡಿ ಗ್ರಾ.ಪಂ. – ತೋಟತ್ತಾಡಿ ಗ್ರಾಮದ ಗೋಳಿದಡಿ ಮತ್ತು ಮಡಿಯೂರು, ಚಾರ್ಮಾಡಿ ಗ್ರಾಮದ ಬಜಿಲು ಮಾರು. ಧರ್ಮಸ್ಥಳ ಗ್ರಾ.ಪಂ.
– ಧರ್ಮಸ್ಥಳ ಗ್ರಾಮದ ಕೊಳೆಂಜಿರೋಡಿ. ಹೊಸಂಗಡಿ – ಬಡಕೊಡಿ ಗ್ರಾಮದ ಉಜಿರಾದೆ ಗಂಗಮ್ಮನವರ ಮನೆ ಬಳಿ. ಇಳಂತಿಲ ಗ್ರಾ.ಪಂ. -ಇಳಂತಿಲ ಗ್ರಾಮದ ಪೀರ್ಯ. ಇಂದಬೆಟ್ಟು ಗ್ರಾ.ಪಂ- ಇಂದಬೆಟ್ಟು ಗ್ರಾಮದ ಸೋಮಯದಡ್ಡ್ ಮತ್ತು ಎರ್ಮಾಳ ಅಬ್ಬು ಬ್ಯಾರಿ ಮನೆ ಬಳಿ. ಕಲ್ಮಂಜ ಗ್ರಾ.ಪಂ. – ಕಲ್ಮಂಜ ಗ್ರಾಮದ ದಾದುಬೆಟ್ಟು ಮತ್ತು ಬನದಬೈಲು (ಮೂಡಾಯಿಬೆಟ್ಟು) ಹಾಗೂ ಬನದಬೈಲು (ಕಾವಲಿಮಾರು). ಕಳಿಯ ಗ್ರಾ.ಪಂ. – ಕಳಿಯ ಗ್ರಾಮದ ಸೋಮನಾಥ ಇವರ ಮನೆ ಬಳಿ.
ಕಣಿಯೂರು ಗ್ರಾ.ಪಂ. – ಉರುವಾಲು ಗ್ರಾಮದ ನಾಕಾಲು. ಕಾಶಿಪಟ್ಣ ಗ್ರಾ.ಪಂ. – ಕಾಶಿಪಟ್ಣ ಗ್ರಾಮದ ಪಡ್ಯೇಡಿ ಹಿಮರ್ ನಾಗೇಶ್ ಮನೆ ಬಳಿ. ಕೊಕ್ಕಡ ಗ್ರಾ.ಪಂ. – ಕೊಕ್ಕಡ ಗ್ರಾಮದ ದೇರಾಜೆ. ಕೊಯ್ಯೂರು ಗ್ರಾ.ಪಂ. – ಕೊಯ್ಯೂರು ಗ್ರಾಮದ ಬರಮೇಲು. ಕುಕ್ಕೇಡಿ ಗ್ರಾ.ಪಂ. – ಕಕ್ಕೇಡಿ ಗ್ರಾಮದ ಮಂಗಳತೇರು. ಕುವೆಟ್ಟು ಗ್ರಾ.ಪಂ. – ಓಡಿಲ್ನಾಳ ಗ್ರಾಮದ ಕೊಂಡೆಮಾರು. ಲಾಯಿಲ ಗ್ರಾ.ಪಂ. – ಲಾಯಿಲ ಗ್ರಾಮದ ಕುರುವ. ಮಚ್ಚಿನ ಗ್ರಾ.ಪಂ. – ಮಚ್ಚಿನ ಗ್ರಾಮದ ಪಲ್ಕೆ. ಮಡಂತ್ಯಾರು ಗ್ರಾ.ಪಂ. – ಪಾರೆಂಕಿ ಗ್ರಾಮದ ಕೋಡ್ಲಕ್ಕೆ ಗಿರಿಯಪ್ಪ ಪೂಜಾರಿ ಮನೆ ಬಳಿ. ಮಾಲಾಡಿ ಗ್ರಾ.ಪಂ. – ಸೋಣಂದೂರು ಗ್ರಾಮದ ಮುತ್ತು ಹೆಂಗ್ಸು ಮನೆ ಬಳಿ.
ಮಲವಂತಿಗೆ ಗ್ರಾ.ಪಂ. – ಮಲವಂತಿಗೆ ಗ್ರಾಮದ ಮಲ್ಲದಪಾಲು. ಮರೋಡಿ ಗ್ರಾ.ಪಂ. – ಪೆರಾಡಿ ಗ್ರಾಮದ ಹಾರ್ದೋಟ್ಟು ಮತ್ತು ಮರೋಡಿ ಗ್ರಾಮದ ಹೊಸಮುತ್ತೊಟ್ಟು. ಮೇಲಂತಬೆಟ್ಟು ಗ್ರಾ.ಪಂ. – ಸವಣಾಲು ಗ್ರಾಮದ ಬೆಳ್ಳೊಟ್ಟು ಹೇರಾಜೆ. ಮಿತ್ತಬಾಗಿಲು ಗ್ರಾ.ಪಂ. – ಮಿತ್ತವಾಗಿಲು ಗ್ರಾಮದ ಕಾಡುಮನೆ. ಮುಂಡಾಜೆ ಗ್ರಾ.ಪಂ. -ಮುಂಡಾಜೆ ಗ್ರಾಮದ ಪೆಲತಡ್ಕ ಶಿವಣ್ಣರ ಮನೆ ಬಳಿ. ನಡ ಗ್ರಾ.ಪಂ. – ಕನ್ಯಾಡಿ ಗ್ರಾಮದ ಮೂಡೆಟ್ಟು, ನಡ ಗ್ರಾಮದ ಸುರ್ಯ ಪತ್ಯಬೈಲು ಮತ್ತು ಕಂಚೇಲು ಹಾಗೂ ಸೂರಂಟೆ. ನಾರಾವಿ ಗ್ರಾ.ಪಂ. – ಕುತ್ಲೂರು ಗ್ರಾಮದ ಜಾರಿಗೆದಡಿ ಹುದೆಂಬೊಟ್ಟು ನೀಲಮ್ಮ ಮನೆ ಬಳಿ, ಮತ್ತು ನಾರಾವಿ ಗ್ರಾಮದ ನೂಜೋಡಿ ಕೆರೆ ಬಳಿ. ನೆರಿಯ ಗ್ರಾ.ಪಂ. – ನೆರಿಯ ಗ್ರಾಮದ ಪುಣ್ಕೆದಡಿ. ನಿಡ್ಲೆ ಗ್ರಾ.ಪಂ. – ನಿಡ್ಲೆ ಗ್ರಾಮದ ಸನಿಲ. ಪಡಂಗಡಿ ಗ್ರಾ.ಪಂ. – ಗರ್ಡಾಡಿ ಗ್ರಾಮದ ನಾಣಿಲ್ದಡಿ. ಪಟ್ರಮೆ ಗ್ರಾ.ಪಂ. – ಪಟ್ರಮೆ ಗ್ರಾಮದ ಗುಂಡಿಲೆ ಮತ್ತು ಹಿರ್ತಡ್ಕ. ಪುದುವೆಟ್ಟು ಗ್ರಾ.ಪಂ. – ಪುದುವೆಟ್ಟು ಗ್ರಾಮದ ದರ್ಖಾಸು. ಶಿಬಾಜೆ ಗ್ರಾ.ಪಂ. – ಶಿಬಾಜೆ ಗ್ರಾಮದ ಪಡಂತ್ತಾಜೆ. ಶಿರ್ಲಾಲು ಗ್ರಾ.ಪಂ. – ಶಿರ್ಲಾಲು ಗ್ರಾಮದ ಕೆಮ್ಮಡೆ ಸೋಮಪ್ಪ ಪೂಜಾರಿ ಮನೆ ಬಳಿ. ಮತ್ತು ಕರಂಬಾರು ಗ್ರಾಮದ ತೋಡಬಾಗಿಲು ಸಂಜೀವ ಹೆಗ್ಗಡತಿ ಮನೆ ಬಳಿ. ಶಿಶಿಲ ಗ್ರಾ.ಪಂ. – ಶಿಶಿಲ ಗ್ರಾಮದ ಒಟ್ಲ. ತಣ್ಣೀರುಪಂತ ಗ್ರಾ.ಪಂ. – ತಣ್ಣೀರುಪಂತ ಗ್ರಾಮದ ಬೋವು ಕಲಕಬೆ ಹಾಗೂ ಕರಾಯ ಗ್ರಾಮದ ಪೂಂಜಾಳ ಶಶಿಕುಮಾರ್ ಮನೆ ಬಳಿ. ಉಜಿರೆ ಗ್ರಾ.ಪಂ. – ಉಜಿರೆ ಗ್ರಾಮದ ಬಡೆಕೊಟ್ಟು. ವೇಣೂರು ಗ್ರಾ.ಪಂ. – ವೇಣೂರು ಗ್ರಾಮದ ಬರ್ತೇರು ಮತ್ತು ಬಜಿರೆ ಗ್ರಾಮದ ಕೋಡಿಕಟ್ಟೆ ಹಾಗೂ ಮೂಡುಕೋಡಿ ಗ್ರಾಮದ ಪರಾರಿ ಹೊಸವಕ್ಲು. ತೆಕ್ಕಾರು ಗ್ರಾ.ಪಂ. – ತೆಕ್ಕಾರು ಗ್ರಾಮದ ಬೈಲಮೆಲು ಮಹಮ್ಮದ್ ಇವರ ಜಮೀನು ಬಳಿ. ಸುಲ್ಕೇರಿ ಗ್ರಾ.ಪಂ. – ಸುಲ್ಕೇರಿ ಗ್ರಾಮದ ಬಲ್ಲಿದಡ್ಡ. ನಾವೂರು ಗ್ರಾ.ಪಂ. – ನಾವೂರು ಗ್ರಾಮದ ಕೋರಂಡ ಮತ್ತು ಬೋಂಟ್ರಪಾಲು ಹಾಗೂ ಮಾನಿಮಾರು. ಕಳೆಂಜ ಗ್ರಾ.ಪಂ. – ಕಳೆಂಜ ಗ್ರಾಮದ ಮಾಪಲ್ದಡ್ಡ. ಕಡಿರುದ್ಯಾವರರ ಗ್ರಾ.ಪಂ. – ಕಡಿರುದ್ಯಾವರ ಗ್ರಾಮದ ಕಾಯರಡ್ಕ ಎರ್ಮಾಳ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.