ವೇಣೂರು : ಗುರುಪೂರ್ಣಿಮೆ ಆಚರಣೆ

venurವೇಣೂರು :  ಪುಷ್ಪಗಿರಿ ಶ್ರೀ ಪ್ರಸಂಗಸಾಗರ ಮುನಿಮಹಾರಾಜರ ಚಾತುರ್ಮಾಸ ವರ್ಷಾಯೋಗವು ಚಾತುರ್ಮಾಸ ಸಂಕಲ್ಪದೊಂದಿಗೆ ಜು. 10 ರಂದು ವೇಣೂರು ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಆರಂಭಗೊಂಡಿತು.
ಗುರುಪೂರ್ಣಿಮೆ ನಿಮಿತ್ತ ಗುರುಪೂಜೆ ಪೂಜೆ ನೆರವೇರಿಸಿ ವಿದ್ಯಾರ್ಥಿಗಳು, ಬಾಲಕ-ಬಾಲಕಿಯರಿಗೆ ಗುರುಮಂತ್ರ ಬೋಧಿಸಿ ಶ್ರೀ ಪ್ರಸಂಗಸಾಗರ ಮುನಿಯವರು ಆಶೀರ್ವಚನ ನೀಡಿದರು.
ಬೆಳಿಗ್ಗೆ ಶ್ರೀ ಪಾರ್ಶ್ವನಾಥ ಬಸದಿಯಲ್ಲಿ ಲಘುಗಣಧರ ಆರಾಧನೆ ಬಳಿಕ ಬಾಹುಬಲಿ ಸಭಾಭವನದಲ್ಲಿ ಗುರುಪೂಜೆ ನೆರವೇರಿತು. ಸಮಾರಂಭದಲ್ಲಿ ಬಾಲಬ್ರಹ್ಮಚಾರಿ ಶ್ರೀ ಸೋಮದೇವ ಬೈಯ್ಯಾಜಿ, ಶ್ರೀ ಶ್ರೀಕಾಂತ ಬೈಯ್ಯಾಜಿ ಆಶೀರ್ವಚನ ನೀಡಿದರು. ಬಾಲಬ್ರಹ್ಮಚಾರಿ ಶ್ರೀ ಧರ್ಮನಾಥ ಬೈಯ್ಯಾಜಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.