ಮಿಯ್ಯಾರು ದೇವಸ್ಥಾನ ದೃಢಕಲಶಾಭಿಷೇಕ-ಅಭಿನಂದನಾ ಕಾರ್ಯಕ್ರಮ

miyaru drudakalasaಪುದುವೆಟ್ಟು : ಇತಿಹಾಸ ಪ್ರಸಿದ್ಧ ಮಿಯ್ಯಾರು ಶ್ರೀ ವನದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಜೂ.29 ರಂದು ದೃಢಕಲಶಾಭಿಷೇಕ ಹಾಗೂ ಬ್ರಹ್ಮಕಲಶೋತ್ಸವ ಅಧ್ಯಕ್ಷರಿಗೆ ಹಾಗೂ ಎಲ್ಲಾ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳಿಗೆ, ಬೈಲುವಾರು ಸಮಿತಿ ಅಧ್ಯಕ್ಷ, ಸಮಿತಿ ಸದಸ್ಯರುಗಳಿಗೆ ಅಭಿನಂದನಾ ಮತ್ತು ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮವು ಆಡಳಿತ ಸಮಿತಿ ಅಧ್ಯಕ್ಷ ಉಜಿರೆಯ ಯು. ರಮೇಶ್ ಪ್ರಭು ಇವರ ಅಧ್ಯಕ್ಷತೆಯಲ್ಲಿ ಸರಳ ಸಮಾರಂಭ ನಡೆಯಿತು.
ಊರಿನ ಜನ ಒಗ್ಗೂಡಿದರೆ ಏನೂ ಸಾಧಿಸಬಹುದು ಎಂಬುವುದಕ್ಕೆ ಮಿಯ್ಯಾರು, ಪುದುವೆಟ್ಟಿನ ಜನ ಒಂದು ಮಾದರಿಯಾಗಿದ್ದಾರೆ. ಏನೂ ವ್ಯವಸ್ಥೆಗಳಿಲ್ಲದ ದೇವಸ್ಥಾನದಲ್ಲಿ, ಒಂದೊಂದೇ ವ್ಯವಸ್ಥೆಗಳನ್ನು ಮಾಡಿಕೊಂಡು, ಜೀರ್ಣೋದ್ಧಾರಕ್ಕೆ ಇಳಿದು ಕೇವಲ ಆರು ತಿಂಗಳಲ್ಲಿ ಬ್ರಹ್ಮಕಲಶೋತ್ಸವವನ್ನು ಮಾಡಿದ ಕೀರ್ತಿ ಊರಿನ ಜನರಿಗೆ ಸಲ್ಲಬೇಕು. ಅದಕ್ಕಾಗಿ ಶಕ್ತಿ ಮೀರಿ ಶ್ರಮಿಸಿದ ಗ್ರಾಮಸ್ಥರೆಲ್ಲರಿಗೂ ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು.
ದೇವಸ್ಥಾನದ ಬ್ರಹ್ಮಕಲಶೋತ್ಸವದ ಜವಾಬ್ದಾರಿಯನ್ನು ಹೈಕೋರ್ಟ್ ನ್ಯಾಯವಾದಿ, ಗರ್ಡಾಡಿಯ ಹರೀಶ್ ಪೂಂಜ ವಹಿಸಿಕೊಂಡು, ಬಹಳ ಯಶಸ್ವೀ ಬ್ರಹ್ಮಕಲಶೋತ್ಸವವಾಯಿತು. ಅವರನ್ನು ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಗ್ರಾಮಸ್ಥರು, ಭಕ್ತಾಭಿಮಾನಿಗಳ ವತಿಯಿಂದ ಶಾಲು ಹೊದಿಸಿ ಫಲ ಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಂತರ ಮಾತನಾಡಿದ ಹರೀಶ್ ಪೂಂಜರವರು ಒಂದೇ ಮನಸ್ಸಿನಿಂದ ಎಲ್ಲರೂ ರಾಜಕೀಯವನ್ನು ಬದಿಗಿಟ್ಟು ದೇವಸ್ಥಾನದಲ್ಲಿ ಕೆಲಸ ಮಾಡಿ ತೋರಿಸಿದ್ದೇವೆ. ಇದೊಂದು ಜಿಲ್ಲೆಯಲ್ಲೇ ಉತ್ತಮ ಸಾಧನೆ ಎನ್ನಬಹುದು ಎಂದರು. ಮುಂದೆ ಏನು? ದೃಢಕಲಶವೂ ಮುಗಿಯುತು, ನಿಜವಾದ ಕೆಲಸ ಇನ್ನೂ ಪ್ರಾರಂಭವಾಗುವುದು. ನಿತ್ಯ ಅನ್ನದಾನ ನಡೆಯಬೇಕು. ಅನ್ನದಾನದ ಮೂಲಕ ಕ್ಷೇತ್ರದ ಸಾನಿಧ್ಯ ವೃದ್ಧಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅರಸೊಳಿಗೆ ಬೈಲಿನ ಗ್ರಾಮಸ್ಥರು ನಿತ್ಯಾನಂದ ಗೌಡರಿಗೆ ಶಾಲು, ಹಾರ ಹಾಕಿ ಗೌರವಿಸಿದರು. ವಾಣಿ ಪ.ಪೂ ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡರು ಅಭಿನಂದನಾ ಮಾತನ್ನಾಡಿದರು. ೯ ಬೈಲುವಾರು ಮನೆಗಳಿಗೆ ಶ್ರೀ ದೇವಿಯ ಫೋಟೊ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ದೃಢಕಲಶ ಕಾರ್ಯಕ್ರಮದಲ್ಲಿ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಿತು. ಅಧ್ಯಾಪಕ ಸುರೇಶರಿಂದ ಸ್ವಾಗತ, ದಾಮೋದರ ಗೌಡ ನಿರೂಪಣೆ, ಪುಷ್ಪಲತಾ ಬಳಗದವರಿಂದ ಪ್ರಾರ್ಥನೆ, ಕಾರ್ಯಕ್ರಮದಲ್ಲಿ ಎಲ್ಲಾ ಸಮಿತಿಗಳ ಸದಸ್ಯರು, ಬೈಲುವಾರು ಸಮಿತಿ ಅಧ್ಯಕ್ಷ, ಸದಸ್ಯರು, ಮಹಿಳಾ ಸದಸ್ಯರು ಭಾಗವಹಿಸಿದ್ದರು. ಮಧ್ಯಾಹ್ನ ಸಾರ್ವಜನಿಕ ಅನ್ನಪ್ರಸಾದ ಏರ್ಪಡಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.