HomePage_Banner_
HomePage_Banner_

ನೂತನ ಔಷಧ ಮಳಿಗೆ ಚೇತನಾ ಮೆಡಿಕಲ್ಸ್ ಶುಭಾರಂಭ

  ujire chethana medical udgataneಉಜಿರೆ : ಹಳೆಪೇಟೆ ಉಜಿರೆ(ಟಿ.ಬಿ.ಕ್ರಾಸ್) ಬಳಿ ನೂತನ ಔಷಧ ಮಳಿಗೆಯನ್ನು ಜು. 2ರಂದು ಅಶ್ವಿನಿ ಮಲ್ಟಿಸ್ಪೆಶಾಲಿಟಿ ಕ್ಲಿನಿಕ್‌ನ ವೈದ್ಯಾಧಿಕಾರಿ ಡಾ| ಅಶ್ವಿನ್ ಉದ್ಯಾವರ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಉಜಿರೆ ಬೆನಕ ಹೆಲ್ತ್ ಸೆಂಟರ್‌ನ ಡಾ| ಗೋಪಾಲಕೃಷ್ಣ ಭಟ್, ಉಜಿರೆ ಬೆನಕ ಕ್ಲಿನಿಕ್ ಡಾ| ಭಾರತಿ ಜಿ.ಕೆ., ಅಭಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಶ್ರೀಹರಿ, ಡಾ| ರಂಜನ್, ಡಾ| ಚೇತನ್, ಡಾ| ಸಂಧ್ಯಾ ಸುಮನ್, ಡಾ| ರಾಮಕೃಷ್ಣ ಭಟ್, ಡಾ| ತುಳಪುಳೆ, ಅಳದಂಗಡಿ, ಡಾ| ಎಂ.ಆರ್ ಭಟ್ ಧರ್ಮಸ್ಥಳ, ಅರವಿಂದ ಧರ್ಮಸ್ಥಳ, ಬೆಳ್ತಂಗಡಿ ಚಿಕಿತ್ಸಾ ಫರ್ಮಾ ಶ್ರೀಶ ಮುಚ್ಚಿನ್ನಾಯ, ಸುರಕ್ಷ ಮೆಡಿಕಲ್ ಶ್ರೀಧರ, ಶ್ರೀಮಹಾ ಗಣಪತಿ ಎಂಟರ್‌ಪ್ರೈಸಸ್‌ನ ಪ್ರಕಾಶ್ ಮೂಲ್ಯ, ಕೆ.ವಿ. ಭಟ್ ನಾಳ, ಕಟ್ಟಡದ ಮಾಲಕ ಜಿ.ಎಫ್, ಮೊಹಮ್ಮದ್, ಸಲೀಂ, ಬಿ.ಎಂ. ಹನೀಫ್, ಬಿ.ಎಂ. ಹಮೀದ್, ಉಸ್ಮಾನ್ ಮುಸ್ಲಿಯಾರ್, ಎಸ್.ಕೆ.ಡಿ.ಆರ್.ಡಿ.ಪಿ. ಪ್ರಾದೇಶಿಕ ನಿರ್ದೇಶಕ ಬೂದಪ್ಪ ಗೌಡ, ಶ್ರೀ ಗಣೇಶ್ ಪ್ರಸಾದನ್ ರಾಮದಾಸ ಭಂಡಾರ್ಕರ್, ಕುಂಠಿನಿ ಸಂಜೀವ ಶೆಟ್ಟಿ, ಜಯಂತ ಶೆಟ್ಟಿ, ಕಜೆಕಾರ್ ಮೆಡಿಕಲ್ಸ್‌ನ ನವೀನ್‌ಚಂದ್ರ, ರಾಧಕೃಷ್ಣ ಶೆಟ್ಟಿ, ಶ್ರೀಮತಿ ಸ್ಮಿತಾ, ನ್ಯಾಯವಾದಿ ಶಶಿಕಿರಣ್ ಜೈನ್, ಮಡಂತ್ಯಾರಿನ ಮಹಾವೀರ ಮೆಡಿಕಲ್ಸ್ ಮಾಲಕರು, ಉಜಿರೆ ಶ್ರೀಕೃಷ್ಣ ಮೆಡಿಕಲ್ಸ್, ಕೃಷ್ಣ, ಉಜಿರೆ ಗುರುಕೃಪಾ ಮೆಡಿಕಲ್ಸ್ ಮಾಲಕರು ಇವರೆಲ್ಲಾ ಅತಿಥಿಗಳಾಗಿ ಭಾಗವಹಿಸಿ ನೂತನ ಸಂಸ್ಥೆಗೆ ಶುಭಕೋರಿದರು.
ಚೇತನಾ ಮೆಡಿಕಲ್ಸ್‌ನ ಡಾ| ಸೂರ್ಯನಾರಾಯಣ ಎಂ., ಸಹೋದರ ಶ್ರೀನಿವಾಸ, ಮಾತೃಶ್ರೀ, ಶ್ರೀಮತಿ ಶಾಂತಾ ಬಂದ ಅತಿಥಿಗಳನ್ನು ಸ್ವಾಗತಿಸಿಕೊಂಡು ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.