ನೀರಿಗಾಗಿ ಅರಣ್ಯ : ಕೋಟಿ ವೃಕ್ಷ ಆಂದೋಲನ : ಅರಣ್ಯ ಸಂರಕ್ಷಣೆ ಜನಾಂದೋಲನವಾಗಬೇಕು: ಸಚಿವ ರೈ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Koti vrukshaಕಾಡು ಸಂರಕ್ಷಣೆ ಎಲ್ಲರ ಕರ್ತವ್ಯ: ಬಂಗೇರ
ಅಧ್ಯಕ್ಷತೆ ವಹಿಸಿದ್ದ ಶಾಸಕರೂ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ. ವಸಂತ ಬಂಗೇರ ಅವರು ಮಾತನಾಡಿ, ನಾವು ಗಿಡ ನೆಡುವುದಕ್ಕಿಂತ ಹೆಚ್ಚು ಮರ ಕಡಿದಿರುವುದೇ ರಾಜ್ಯದಲ್ಲಿ ಬರ ಪರಿಸ್ಥಿತಿ ಬರಲು ಕಾರಣವಾಗಿದೆ. ಮಳೆ ಬರಬೇಕಾದರೆ ಕಾಡು ಬೇಕು ಕಾಡನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ. ಇದರ ಬಗ್ಗೆ ಶಾಲಾ ಮಕ್ಕಳಲ್ಲಿಯೂ ತಿಳುವಳಿಕೆ ಮೂಡಿಸಲು ಅವರಿಗೆ ಮಾಹಿತಿ ನೀಡಬೇಕು, ಭೂಮಿಯಲ್ಲಿ ಅಂತರ್ಜಲ ಕುಸಿತವಾಗಿದ್ದು, ನೀರು ಇಂಗಿಸುವ ಕಾರ್ಯಗಳು ಹೆಚ್ಚು ನಡೆಯಬೇಕು ಎಂದು ತಿಳಿಸಿದರು.

ಬಳ್ಳಮಂಜ : ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಮಂಗಳೂರು ಉಪ ವಿಭಾಗ, ಬೆಳ್ತಂಗಡಿ ವಲಯ ಹಾಗೂ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜ, ಬೆಳ್ತಂಗಡಿ ತಾಲೂಕು ಮರದ ವ್ಯಾಪಾರಸ್ಥರು ಮತ್ತು ಸಾಮಿಲ್ಲು ಮಾಲಕರ ಸಂಘ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ನೀರಿಗಾಗಿ ಅರಣ್ಯ 2017-18 ಇದರ ಅಂಗವಾಗಿ ಕೋಟಿ ವೃಕ್ಷ ಆಂದೋಲನ ಕಾರ್ಯಕ್ರಮ ಜು.೪ರಂದು ಶ್ರೀ ಅನಂತಪ್ರಸಾದ ಅನ್ನಛತ್ರ ಬಳ್ಳಂಜದಲ್ಲಿ ಜರುಗಿತು.
ಬಳ್ಳಮಂಜ ಕಂಬಳ ಗದ್ದೆಯಂಚಿನಲ್ಲಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆ ಸಚಿವರಾದ ಬಿ. ರಮಾನಾಥ ರೈ ಅವರು ನಮ್ಮಲ್ಲಿ ಶೇ. 70 ಭಾಗ ಕಂದಾಯ ಪ್ರದೇಶ, ಉಳಿದ ಶೇ 30 ಭಾಗ ಮಾತ್ರ ಅರಣ್ಯವಿದೆ. ಅರಣ್ಯ ಪ್ರದೇಶಕ್ಕೆ ಯಾರೂ ಪ್ರವೇಶ ಮಾಡಬಾರದು, ಅರಣ್ಯವನ್ನು, ಪರಿಸರವನ್ನು, ವನ್ಯಜೀವಿಗಳನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ನೀಡುವುದು ನಾವು ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆಯಾಗಿದೆ ಎಂದರು.
ಹಿಂದೆ ಭೂ ಮಂಡಲದಲ್ಲಿ ಕಾಡೇ ಇತ್ತು. ಜನಸಂಖ್ಯೆ ಬೆಳೆದಂತೆ ಕಾಡು ನಾಶವಾಗುತ್ತಾ ಹೋಯಿತು. ಇಂದು ಶೇ. 21 ರಿಂದ ಶೇ 22 ರ ವರೆಗೆ ಮಾತ್ರ ಕಾಡು ಉಳಿದಿದೆ. ನಾವು ಗಿಡ ನೆಡುತ್ತಾ ಬಂದಿದ್ದೇವೆ ಆದರೆ ನೆಟ್ಟ ಗಿಡ ಎಲ್ಲಿದೆ ಎಂದು ಪ್ರಶ್ನಿಸಿದರೆ ಉತ್ತರವಿಲ್ಲ, ಅರಣ್ಯ ಸಂರಕ್ಷಣಾ ಕಾಯ್ದೆ ಬಂದ ನಂತರ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ವೇಗ ದೊರಕಿದೆ. ಅರಣ್ಯ ನಾಶದಿಂದ ಹವಾಮಾನ ವ್ಯತ್ಯಾಸವಾಗಿ ಮಳೆ ಕಡಿಮೆಯಾಗಿ ಬರಬರುತ್ತದೆ.
ಅದಕ್ಕಾಗಿ ಅರಣ್ಯ ಸಂರಕ್ಷಣಾ ಕಾನೂನು ಕಠಿಣವಾಗಿ ಜಾರಿಯಾಗಬೇಕು ಎಂದರು. ಜೀವಜಲ ಇರುವುದು ಕಾಡಿನಲ್ಲಿ ಯಾವುದೇ ನದಿ ಹುಟ್ಟಿರುವುದು ಕಾಡಿನಲ್ಲಿ ವನ್ಯ ಜೀವಿ ಉಳಿದರೆ ಕಾಡು ಉಳಿಯುತ್ತದೆ. ಅರಣ್ಯ ಇಲಾಖೆ ಜೊತೆ ಸಾರ್ವಜನಿಕರು ಗಿಡ ನೆಟ್ಟು ಅದನ್ನು ಉಳಿಸುವ ಕೆಲಸ ಮಾಡಬೇಕು, ಇದು ಜನಾಂದೋಲನವಾಗಬೇಕು, ಜನರಲ್ಲಿ ಜಾಗೃತಿ ಮೂಡಬೇಕು ಎಂದು ಕರೆ ನೀಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎನ್. ಸತೀಶ್ ಬಾಬಾ ರೈ ಅವರು ಮಾತನಾಡಿ, ನಾವು ಮಕ್ಕಳ ಹುಟ್ಟು ಹಬ್ಬ ಮಾಡುವಾಗ ಗಿಡವನ್ನು ನೆಟ್ಟು ಆಚರಿಸಬೇಕು, ಮಕ್ಕಳು ಬೆಳೆದಾಗೆ ಮರವೂ ಬೆಳೆಯುತ್ತದೆ ಎಂದು ಸಲಹೆಯಿತ್ತರು. ವೇದಿಕೆಯಲ್ಲಿ ಮಚ್ಚಿನ ಗ್ರಾ.ಪಂ. ಅಧ್ಯಕ್ಷೆ ಹರ್ಷಲತಾ, ಮರದ ವ್ಯಾಪಾರಸ್ಥರು ಮತ್ತು ಸಾಮಿಲ್ಲು ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಪ್ರಭು, ನಿವೃತ್ತ ಎ.ಸಿ.ಎಫ್. ಸುಂದರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗ್ರೇಸಿಯಾನ್ ವೇಗಸ್ ಉಪಸ್ಥಿತರಿದ್ದರು. ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಡಾ| ಹರ್ಷಸಂಪಿಗೆತ್ತಾಯ ಸ್ವಾಗತಿಸಿದರು. ತಿಮ್ಮಪ್ಪ ಗೌಡ ಬೆಳಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ ಧನ್ಯವಾದವಿತ್ತರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.