ಉಜಿರೆ : ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ

ujire

ujire1ಉಜಿರೆ : ವೈದ್ಯ ಸಮೂಹಕ್ಕೇ ಆದರ್ಶಪ್ರಾಯರಾದ, ಭಾರತರತ್ನ ಪಡೆದ ಶ್ರೇಷ್ಠ ವೈದ್ಯರಾದ ಡಾ.ಬಿ.ಸಿ. ರಾಯ್ ಜನ್ಮ ದಿನಾಚರಣೆ ಅಂಗವಾಗಿ ಉಜಿರೆಯ ಶ್ರೀಧ.ಮಂ.ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಜು. 1ರಂದು ಸಂಭ್ರಮದ ಕಾರ್ಯಕ್ರಮ ನಡೆಯಿತು. ಕರ್ನಾಟಕ ಸರಕಾರದ ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಶಾಂತ್ ಶೆಟ್ಟಿ ವಹಿಸಿದ್ದರು. ಕೇಂದ್ರ ಆಯುಷ್ ಮಂತ್ರಾಲಯದ ಯೋಗ ವಿಭಾಗದ ಜಂಟಿ ಸಲಹೆಗಾರರು ಹಾಗೂ ಕೇಂದ್ರೀಯ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಸಂಶೋಧನಾ ಕೇಂದ್ರ ದೆಹಲಿ ಇದರ ನಿರ್ದೇಶಕ ಡಾ. ಈಶ್ವರ. ಎನ್. ಆಚಾರ್ಯ ಉಪಸ್ಥಿತರಿದ್ದರು.
ಬಿ.ಎನ್.ವೈ.ಎಸ್. ಕಾಲೇಜಿನ, ಯೋಗ ವಿಭಾಗದ ಡೀನ್, ಡಾ. ಶಿವಪ್ರಸಾದ್ ಶೆಟ್ಟಿ, ಸ್ವಾಗತಿಸಿದರು. ಪ್ರಕೃತಿ ಚಿಕಿತ್ಸಾ ವಿಭಾಗದ ಡೀನ್, ಡಾ. ಸುಜಾತ ವಂದಿಸಿದರು. ಯೋಗ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಕಿರಣ್ ಕುಮಾರ್ ರೆಡ್ಡಿ ಕಾರ್ಯಕ್ರಮವನ್ನು ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.