ಜು. 3 : ಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಪದಗ್ರಹಣ

Harish Kumar New Photo1ಬೆಳ್ತಂಗಡಿ : ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿರುವ ಕೆ. ಹರೀಶ್ ಕುಮಾರ್ ಇವರ ಪದಗ್ರಹಣ ಸಮಾರಂಭವು ಜು. 3ರಂದು ಜಿಲ್ಲಾ ಕಾಂಗ್ರೆಸ್ ಭವನ ಮಲ್ಲಿಕಟ್ಟೆಯಲ್ಲಿ ಜರಗಲಿರುವುದು. ಜಿಲ್ಲಾ ಕಾಂಗ್ರೆಸ್ ನಿರ್ಗಮನ ಅಧ್ಯಕ್ಷರು ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಅಧಿಕಾರ ಹಸ್ತಾಂತರಿಸಲಿದ್ದಾರೆ.
ಈ ಸಮಾರಂಭದಲ್ಲಿ ಆಹಾರ ಸಚಿವರಾದ ಯು.ಟಿ. ಖಾದರ್, ಶಾಸಕ ವಸಂತ ಬಂಗೇರ, ಕರ್ನಾಟಕದ ಮುಖ್ಯ ಸಚೇತಕರಾದ ಐವನ್ ಡಿಸೋಜ, ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಶ್ರೀಮತಿ ಶಕುಂತಲಾ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ಶಾಸಕ ಜೆ.ಆರ್.ಲೋಬೋ, ಬಿ.ಎ. ಮೊಹಿಯುದ್ದೀನ್ ಬಾವ, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್‌ರವರು ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.