ಜು.2 : ಬಳೆಂಜ-ಮುಂಡೂರು ಕ್ಷೇತ್ರದ ತಲಾ 1 ಸ್ಥಾನಕ್ಕೆ ಉಪಚುನಾವಣೆ

suddi COLORpdf BLDY.p65ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮ ಪಂಚಾಯತದ ಬಳೆಂಜ 1ನೇ ಕ್ಷೇತ್ರ ಹಾಗೂ ಮೇಲಂತಬೆಟ್ಟು ಗ್ರಾಮ ಪಂಚಾಯತದ ಮುಂಡೂರು 1ನೇ ಕ್ಷೇತ್ರದ ಸದಸ್ಯರ ಆಯ್ಕೆಗೆ ಜು.2ರಂದು ಉಪ ಚುನಾವಣೆ ನಡೆಯಲಿದೆ.
ಬಳೆಂಜ ಗ್ರಾಮ ಪಂಚಾಯತದ ಬಳೆಂಜ 1ನೇ ಹಿಂದುಳಿದ ವರ್ಗ ಬಿ. ಕ್ಷೇತ್ರಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಶಿಧರ ಶೆಟ್ಟಿ ಮತ್ತು ಎಸ್. ಪ್ರಮೋದ್ ಕುಮಾರ್ ಇವರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಮೇಲಂತಬೆಟ್ಟು ಗ್ರಾಮ ಪಂಚಾಯತದ ಮುಂಡೂರು 1ನೇ ಸಾಮಾನ್ಯ ಕ್ಷೇತ್ರಕ್ಕೆ ಇಬ್ಬರು ಕಣದಲ್ಲಿದ್ದು, ನೇರ ಸ್ಪರ್ಧೆ ಏರ್ಪಟ್ಟಿದೆ. ಮೇಲಂತಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ದಿ| ಮಹೇಶ್‌ಕುಮಾರ್ ನಡಕ್ಕರ ಅವರ ಪತ್ನಿ ಶ್ರೀಮತಿ ನೀತಾ ಹಾಗೂ ಸಂತೋಷ್ ಕುಮಾರ್ ಮುಂಡೂರು ಕಣದಲ್ಲಿದ್ದು, ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.