ಲಯನ್ಸ್ ಕ್ಲಬ್ ಪದಗ್ರಹಣ ಆಮಂತ್ರಣ ಪತ್ರಿಕೆ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1

Lions Invitation bidugadeಧರ್ಮಸ್ಥಳ : ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಈ ವರ್ಷದ ಸೇವಾ ಚಟುವಟಿಕೆಗಳು ಬದ್ಧತೆಯಿಂದ ಅರ್ಥಪೂರ್ಣವಾಗಿ ನಡೆಯಲಿ ಎಂದು ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಗೌರವ ಸದಸ್ಯರೂ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆದ ಡಾ. ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ಅವರು ಜೂ.19 ರಂದು ಧರ್ಮಸ್ಥಳದ ಬೀಡಿನಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಶಿಕ್ಷಕ ಧರಣೇಂದ್ರ ಕೆ. ಜೈನ್, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಕೋಶಾಧಿಕಾರಿ ವಿನ್ಸೆಂಟ್ ಟಿ. ಡಿಸೋಜಾ, ನಿಯೋಜಿತ ಪ್ರಾಂತ್ಯಾಧ್ಯಕ್ಷ ನಿತ್ಯಾನಂದ ನಾವರ, ಅಧ್ಯಕ್ಷೆ ಸುಶೀಲ ಎಸ್. ಹೆಗ್ಡೆ, ಉಪಾಧ್ಯಕ್ಷೆ ಮೇದಿನಿ ಗೌಡ, ರಾಜೀವ ಡಿ. ಗೌಡ, ಉಮೇಶ್ ಶೆಟ್ಟಿ, ಗೌರವ ಕಾರ್ಯದರ್ಶಿ ಹೆಚ್. ರಾಮಕೃಷ್ಣ ಗೌಡ, ಕೋಶಾಧಿಕಾರಿ ಬಿ.ಕೆ ಸೀತಾರಾಮ ರಾವ್, ವಿಶೇಷ ಗೌರವ ಸಲಹೆಗಾರ ಸಂಸ್ಥೆಯ ಸ್ಥಾಪಕ ಸದಸ್ಯರಾದ ಎಂ.ಜಿ.ಶೆಟ್ಟಿ, ವಿ.ಆರ್ ನಾಯಕ್, ಗೌರವ ಸಲಹೆಗಾರ ಅಶೋಕ್ ಕುಮಾರ್ ಬಿ.ಪಿ, ಲಕ್ಷ್ಮೀನಾರಾಯಣ ರಾವ್, ಕಾರ್ಯಕ್ರಮ ಸಂಯೋಜ ನಾಧಿಕಾರಿ ಫ್ರಾಂಕ್ ಹಿಲಾರಿ ಡಿ’ಸೋಜಾ, ಸಹಕಾರ್ಯಕ್ರಮ ಸಂಯೋಜ ನಾಧಿಕಾರಿ ಬಿ. ದತ್ತಾತ್ರೇಯ ಗೊಲ್ಲ, ಲಾಂಗೂಲ ಚಾಲಕರರಾದ ದೇವಿಪ್ರಸಾದ್, ಬಿ. ರತ್ನರಾಜ ಹೆಗ್ಡೆ, ಸೇವಾ ಯೋಜನೆ ನಿರ್ದೇಶಕರಾದ ಜಯರಾಮ ಭಂಡಾರಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.