ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಡಾ| ಸುಧೀರ್ ಪ್ರಭು

suddi COLORpdf BLDY.p65ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಘಟಕದ 2017-18 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಸಮಾಜ ಸೇವೆಯ ಮೂಲಕ ಜನರಿಗೆ ನೆರವಾಗುವ ಪ್ರತಿಷ್ಠಿತ ಬೆಳ್ತಂಗಡಿ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಡಾ. ಸುಧೀರ್ ಪ್ರಭು ಎಮ್, ಕಾರ್ಯದರ್ಶಿ ಯಾಗಿ ಡಾ. ಪ್ರದೀಪ್ ಎ, ಜೊತೆ ಕಾರ್ಯದರ್ಶಿಯಾಗಿ ಶ್ರೀಧರ್ ಕೆ.ವಿ, ಕೋಶಾಧಿಕಾರಿಯಾಗಿ ಸುನಿಲ್ ಶೆಣೈ ಹಾಗೂ ಸರ್ಜೆಂಟ್ ಎಟ್ ಆರ್ಮ್ಸ್ ಆಗಿ ಸದಾಶಿವ ಬಾಳಿಗ ಆಯ್ಕೆಯಾಗಿದ್ದಾರೆ.
ಉಳಿದಂತೆ ಇತರ ಸೇವಾ ನಿರ್ಧೇಶಕರಾಗಿ ಜಗದೀಶ್ ಪ್ರಸಾದ್, ವೃತ್ತಿಪರ ಸೇವೆಯ ನಿರ್ದೇಶಕರಾಗಿ ಮನೋರಮ ಭಟ್, ಸಮುದಾಯ ನಿರ್ದೇಶಕರಾಗಿ ಡಾ. ರಾಘವೇಂದ್ರ ಪಿದಮಲೆ, ಅಂತರಾಷ್ಟ್ರೀಯ ಸೇವಾನಿರ್ದೇಶಕರಾಗಿ ಮೇ| ಜೀ ಎಮ್.ವಿ ಭಟ್, ಯುವಜನ ಸೇವಾನಿರ್ಧೇಶಕರಾಗಿ ಯೋಗೀಶ್ ಆರ್. ಭಿಡೆ, ಬುಲೆಟಿನ್ ನಿರ್ಧೇಶಕರಾಗಿ ದಯಾನಂದ ನಾಯಕ್, ಟಿ.ಆರ್.ಎಫ್ ಅಧ್ಯಕ್ಷರಾಗಿ ಶಶಿಕಾಂತ್ ಡೋಂಗ್ರೆ, ಪಲ್ಸ್ ಪೋಲಿಯೋ ಅಧ್ಯಕ್ಷರಾಗಿ ಡಾ. ಚಂದ್ರಕಾಂತ್ ಕೆ.ಎಲ್, ಸಾಕ್ಷರತೆ ಅಧ್ಯಕ್ಟರಾಗಿ ಯಶೋವಂತ್ ಪಟ್ವರ್ಧನ್, ವಿನ್ಸ್ ಅಧ್ಯಕ್ಟರಾಗಿ ಧನಂಜಯ ರಾವ್ ಬಿ.ಕೆ, ಆರ್‌ಸಿಸಿ ಅಧ್ಯಕ್ಷರಾಗಿ ಬಾಬು ಪೂಜಾರಿ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.