ಕೃಷಿ ಭಾಗ್ಯಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಾಣ ನಡ ಕೊಯಗುಡ್ಡೆಗೆ ಭೇಟಿ ನೀಡಿ ವೀಕ್ಷಿಸಿದ ಸಚಿವರು

Advt_NewsUnder_1
Advt_NewsUnder_1
Advt_NewsUnder_1

Krushi honda veekshaneನಡ : ನಡ ಗ್ರಾಮದ ಕೊಯಗುಡ್ಡೆ ಎಂಬಲ್ಲಿ ಚೆಲುವಮ್ಮ ಎಂಬವರ ಜಾಗದಲ್ಲಿ ಸುಮಾರು ರೂ.23,957 ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆಯಲ್ಲಿ ನಿರ್ಮಿಸಲಾದ ಕೃಷಿ ಹೊಂಡವನ್ನು ಜೂ.23ರಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇ ಗೌಡ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಚೆಲುವಮ್ಮ ಅವರಿಗೆ 2.40 ಎಕ್ರೆ ಜಮೀನು ಇದ್ದು, ಇದರಲ್ಲಿ ಬಾವಿ ಮತ್ತು ಕೆರೆ ಇದ್ದರೂ, ಬೇಸಿಗೆಕಾಲದಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ. ಇದಕ್ಕಾಗಿ ಇವರು ಸರಕಾರದ ಕೃಷಿ ಭಾಗ್ಯ ಯೋಜನೆಯಲ್ಲಿ 10x10x3 ಮೀ ಅಳತೆಯ ಕೃಷಿ ಹೊಂಡ ನಿರ್ಮಿಸಿದ್ದಾರೆ.
ಇದಕ್ಕೆ ಒಟ್ಟು ರೂ.23957 ಖರ್ಚಾಗಿದ್ದು, ಈ ಯೋಜನೆಯಲ್ಲಿ ಶೇ. 80 ಸರಕಾರ ಮತ್ತು ಶೇ. 20 ಫಲಾನುಭವಿ ನೀಡಬೇಕಾಗಿದ್ದರಿಂದ ಸರಕಾರದಿಂದ ರೂ.19166 ಪಾವತಿಸಲಾಗಿದೆ. ಫಲಾನುಭವಿ ಚೆಲುವಮ್ಮ ರೂ.4791 ಭರಿಸಿದ್ದಾರೆ.
ಕೃಷಿ ಹೊಂಡವನ್ನು ವೀಕ್ಷಿಸಿದ ಸಚಿವರು ಚೆಲುವಮ್ಮ ಅವರಿಂದ ಮಾಹಿತಿಯನ್ನು ಪಡೆದು ಕೊಂಡರು. ಭೂಮಿಗೆ ನೀರು ಇಂಗಿಸುವುದರ ಜೊತೆಗೆ ಬೇಸಿಗೆಕಾಲದಲ್ಲಿ ಕೃಷಿ ಹಾಗೂ ಇತರ ಚಟುವಟಿಕೆಗಳಿಗೆ ಇದರ ನೀರನ್ನು ಉಪಯೋಗ ಮಾಡಿಕೊಳ್ಳಬೇಕು. ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಕೃಷಿ ಇಲಾಖೆ ಮೂಲಕ ಸರಕಾರ ಮಾಡುತ್ತದೆ ಎಂದು ಸಚಿವರು ಈ ಸಂದರ್ಭ ನುಡಿದರು.
ಶಾಸಕ ಕೆ.ವಸಂತ ಬಂಗೇರ, ಜಿ.ಪಂ. ಸದಸ್ಯರಾದ ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಎ.ಪಿ.ಎಂ.ಸಿ. ಅಧ್ಯಕ್ಷ ಸತೀಶ್ ಕಾಶಿಪಟ್ಣ, ಜಂಟಿ ಕೃಷಿ ನಿರ್ದೇಶಕ ಎಚ್. ಕೆಂಪೇ ಗೌಡ, ಸಹಾಯಕ ನಿರ್ದೇಶಕ ತಿಲಕ್ ಪ್ರಸಾದ್, ಸಹಾಯಕ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಚಿದಾನಂದ ಹೂಗಾರ್ ಮೊದಲಾದವರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.