ಕುದುರೆಮುಖ ರಾಷ್ಟ್ರೀಯ ಉದ್ಯಾನವನ 6 ಕುಟುಂಬಗಳಿಗೆ ರೂ.4.72 ಕೋಟಿ ಪರಿಹಾರ

Hakkupathra vitharaneಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ವಾಸ್ತವ್ಯವಿದ್ದು ಕೃಷಿ ಮಾಡಿಕೊಂಡಿದ್ದ ಆರು ಕುಟುಂಬಗಳು ಸ್ವಯಂಪ್ರೇರಿತರಾಗಿ ಹೊರಬಂದಿದ್ದು, ಈ ಕುಟುಂಬಗಳಿಗೆ ಸರಕಾರದಿಂದ ಒಟ್ಟು ರೂ. 4,72,16,232 ಪರಿಹಾರದ ಚೆಕ್‌ಅನ್ನು ಜೂ.17ರಂದು ವಿತರಿಸಲಾಯಿತು.
ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರ ಅವರು ನಗರ ಪಂಚಾಯತದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ಪರಿಹಾರ ಚೆಕ್ ಪಡೆದುಕೊಂಡವರಲ್ಲಿ ಶಿರ್ಲಾಲು ಗ್ರಾಮದ ಎಂಡೇಲು ನಿವಾಸಿ ಶೀನಪ್ಪ ಮಲೆಕುಡಿಯ ರೂ.61,79,292, ಮಲವಂತಿಗೆ ಗ್ರಾಮದ ಎಳನೀರು ಜಿನಚಂದ್ರ ನಾಯಕ್ ರೂ.75,13,104, ಶಿರ್ಲಾಲು ಗ್ರಾಮದ ಎಂಡೇಲು ನಿವಾಸಿ ಗಿರಿಜ ರೂ.35,50,514, ಮಲವಂತಿಗೆ ಗ್ರಾಮದ ಬೊಳ್ಳೆ ನಿವಾಸಿ ಬೋಜಪ್ಪ ಗೌಡ ರೂ.1,08,97,756, ಶಿರ್ಲಾಲು ಗ್ರಾಮದ ಎಂಡೇಲು ಜಾರಪ್ಪ ರೂ.74,37,253, ಮಲವಂತಿಗೆ ಗ್ರಾಮದ ಎಳನೀರು ನಿವಾಸಿ ವೃಷಭರಾಜ್ ರೂ.1,16,38,313.
ಈ ಆರು ಕುಟುಂಬಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ವಾಸ್ತವ್ಯವನ್ನು ಹೊಂದಿದ್ದರು. ಇವರು ಸ್ವಂತ ಜಾಗವನ್ನು ಹೊಂದಿದ್ದು, ಅದರಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇವರು ಉದ್ಯಾನವನ ವ್ಯಾಪ್ತಿಯಿಂದ ಸ್ವಯಂ ಪ್ರೇರಿತವಾಗಿ ಹೊರಬರುವುದಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇವರ ಒಟ್ಟು ಜಾಗ, ಜಾಗದಲ್ಲಿ ಬೆಳೆದ ಬೆಳೆ, ಹಾಗೂ ಇನ್ನಿತರ ಸೋತ್ತುಗಳನ್ನು ವಿವಿಧ ಇಲಾಖೆಗಳು ಮೌಲ್ಯಮಾಪನ ನಡೆಸಿ ಹಾಕಿದ ದರದಂತೆ ಸರಕಾರ ಅವರಿಗೆ ಪರಿಹಾರ ಧನ ಮಂಜೂರುಗೊಳಿಸಿತ್ತು. ಈ ಪರಿಹಾರಕ್ಕೆ ತೃಪ್ತಿ ಪಟ್ಟು ಆರು ಕುಟುಂಬಗಳು ಇದೀಗ ತಮ್ಮ ಜಾಗವನ್ನು ಸರಕಾರಕ್ಕೆ ಬಿಟ್ಟು ಕೊಟ್ಟು ಪರಿಹಾರವನ್ನು ಪಡೆದುಕೊಂಡು
ಉದ್ಯಾನವನ ವ್ಯಾಪ್ತಿಯಿಂದ ಹೊರಬಂದಿದೆ.
ಪರಿಹಾರ ವಿತರಣೆ ಸಂದರ್ಭದಲ್ಲಿ ತಹಶೀಲ್ದಾರ್ ತಿಪ್ಪೇಸ್ವಾಮಿ, ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ರಾಜಶೇಖರ ಅಜ್ರಿ, ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್, ಎ.ಪಿ.ಎಂ.ಸಿ. ಅಧ್ಯಕ್ಷ ಸತೀಶ್ ಕಾಶಿಪಟ್ಣ, ವನ್ಯಜೀವಿ ವಲಯ ಬೆಳ್ತಂಗಡಿ ವಲಯಾರಣ್ಯಾಧಿಕಾರಿ ಕೃಷ್ಣೇ ಗೌಡ, ಉಪವಲಯ ಅರಣ್ಯಾಧಿಕಾರಿ ಪ್ರದೀಪ್, ಅಕ್ರಮ-ಸಕ್ರಮ ಸಮಿತಿ ಸದಸ್ಯರು, ಕಂದಾಯ ಇಲಾಖೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ಪರಿಹಾರದ ಚೆಕ್ ಹಾಗೂ ೯೪ಸಿ ಹಕ್ಕುಪತ್ರವನ್ನು ಶಾಸಕರು ಫಲಾನುಭವಿಗಳಿಗೆ ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.