ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ 3 ವರ್ಷಗಳಲ್ಲಿ 2.22 ಲಕ್ಷ ರೋಗಿಗಳಿಗೆ ಚಿಕಿತ್ಸೆ ಬಡರೋಗಿಗಳಿಗೆ ರೂ.2.52 ಕೋಟಿ ವೆಚ್ಚದ ಉಚಿತ ಚಿಕಿತ್ಸೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

SDM Press meetಉಜಿರೆ : ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಭಾಗ್ಯ ಲಭಿಸಬೇಕು ಎಂಬ ಉದ್ದೇಶದಿಂದ 2013 ಮೇ 1 ರಂದು ಆರಂಭಗೊಂಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆಯಲ್ಲಿ ಇದುವರೆಗೆ 2.22 ಲಕ್ಷ ರೋಗಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖ ರಾಗಿದ್ದು, ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ತಪಾಸಣೆ, ಔಷಧ ಸೇರಿದಂತೆ ಒಟ್ಟು ರೂ. 2,52,95,000 ವೆಚ್ಚದ ಚಿಕಿತ್ಸೆ ಯನ್ನು ಉಚಿತವಾಗಿ ನೀಡಲಾಗಿದೆ ಎಂದು ಆಸ್ಪತ್ರೆಯ ಕಾರ್ಯನಿರ್ವಾಹ ಣಾಧಿಕಾರಿ ಮನ್ಮಥ್ ಕುಮಾರ್ ಎನ್. ತಿಳಿಸಿದ್ದಾರೆ.
ಅವರು ಜೂ.14ರಂದು ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. 200 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯಲ್ಲಿ 16 ಮಂದಿ ತಜ್ಞ ವೈದ್ಯರು, 7 ಮಂದಿ ಸಹಾಯಕ ವೈದ್ಯರು, 7 ಮಂದಿ ಸಂದರ್ಶಕ ವೈದ್ಯರು ದಿನದ 24 ಗಂಟೆಯೂ ಚಿಕಿತ್ಸೆಗೆ ಲಭ್ಯರಿರುತ್ತಾರೆ. ಆಸ್ಪತ್ರೆಯಲ್ಲಿ ಪೇಪರ್ ರಹಿತ ದಾಖಲೆ ಗಳ ನಿರ್ವಹಣೆಯ ಉದ್ದೇಶದಿಂದ ಡಿಜಿಟಲ್ ವೈದ್ಯಕೀಯ ದಾಖಲೆ ಅಳವಡಿಸಲಾಗಿದೆ. ದೇಶದಲ್ಲಿಯೇ ಡಿಜಿಟಲ್ ಎಂ.ಆರ್.ಡಿ ವ್ಯವಸ್ಥೆ ಹೊಂದಿರುವ 2ನೇ ಆಸ್ಪತ್ರೆ ಇದಾಗಿದೆ ಎಂದರು. ಹೊರ ರೋಗಿ ವಿಭಾಗದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ, ಮೆಡಿಸಿನ್, ಮಕ್ಕಳ ಚಿಕಿತ್ಸೆ, ಸರ್ಜರಿ, ಎಲುಬು ಮತ್ತು ಕೀಲು, ಇಎನ್‌ಟಿ, ಪೆಥಾಲಜಿ, ಅನಸ್ತೇಶಿಯ, ಭೌತಚಿಕಿತ್ಸೆ ಮೊದಲಾದ ವಿಭಾಗಗಳಲ್ಲಿ ಸೇವೆ, 24 ಗಂಟೆಗಳ ಸೇವೆಯಲ್ಲಿ ಅಪಘಾತ ಮತ್ತು ತುರ್ತು ಚಿಕಿತ್ಸೆ, ತೀವ್ರ ನಿಗಾ ಘಟಕ, ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ಔಷಧಾಲಯ, ಡಯಾಗ್ನಾಸ್ಟಿಕ್ ಅತ್ಯಾಧುನಿಕ ಮೆಡಿಕಲ್ ಲ್ಯಾಬೋರೇಟರಿ, ಸಿ.ಟಿ. ಸ್ಕ್ಯಾನಿಂಗ್, ಎಕ್ಸ್-ರೇ, ಹೃದಯರೋಗಿಗಳಿಗೆ ಟಿ.ಎಂ.ಟಿ. ಟೆಸ್ಟ್, ಅಲ್ಟ್ರಾಸೌಂಡ್ ವ್ಯವಸ್ಥೆ ಇದೆ ಎಂದು ತಿಳಿಸಿದರು. ಬೆಳ್ತಂಗಡಿ ತಾಲೂಕಿನಲ್ಲಿ ಸಿ.ಟಿ. ಸ್ಕ್ಯಾನಿಂಗ್ ವ್ಯವಸ್ಥೆ ಇರುವ ಪ್ರಪ್ರಥಮ ಆಸ್ಪತ್ರೆ ಇದಾಗಿದ್ದು, ವಿವಿಧ ವಿಮೆಗಳ ಸೌಲಭ್ಯಗಳು, ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಸುಮಾರು 60ಕ್ಕಿಂತಲೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಸಿ 1572 ಯೂನಿಟ್ ರಕ್ತ ಸಂಗ್ರಹಿಸಿ ರೋಗಿಗಳ ಸದ್ಬಳಕೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ವಿಶೇಷ ವೈದ್ಯಕೀಯ ಶಿಬಿರ, ಕೀ-ಹೋಲ್ ಸರ್ಜರಿ ಮೊದಲಾದ ಸೌಲಭ್ಯಗಳಿವೆ. ಆಸ್ಪತ್ರೆ ಸೇರಿದಂತೆ ಐದು ಕಡೆ ಆರೋಗ್ಯ ಕೇಂದ್ರ ತೆರೆದು 44,242 ಪಾದಯಾತ್ರಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂದರು.
ಮುಂದಿನ ಯೋಜನೆ : ವಿಮಾ ಆರೋಗ್ಯ ವ್ಯವಸ್ಥೆಗಳ ವಿಸ್ತರಣೆ, ಮನೆಬಾಗಿಲಿಗೆ ವೈದ್ಯಕೀಯ ಸೇವೆ, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ರಿಯಾಯಾತಿ ದರದಲ್ಲಿ ವೈಧ್ಯಕೀಯ ಸೇವೆ, ಡಯಾಲಿಸಿಸ್ ಸೆಂಟರ್ ಆರೋಗ್ಯ ತಪಾಸಣಾ ಪ್ಯಾಕೇಜ್ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಎಂ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಪೂವಣಿ, ವೈದ್ಯಾಧಿಕಾರಿ ಡಾ|ಪ್ರಭಾಶ್ ಕುಮಾರ್, ಸರ್ಸಿಂಗ್ ಸೂಪರಿಂಟೆಂಡೆಂಟ್ ಜೀತಾ ರೋಡ್ರಿಗಸ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.