ಅಡಿಕೆ, ಕಾಳುಮೆಣಸು, ಕೋಕೋ, ತೆಂಗು ಬೆಳೆಗಳ ಕೊಳೆರೋಗ ನಿಯಂತ್ರಣದಲ್ಲಿ ಬೋರ್ಡೋ ದ್ರಾವಣ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

adike rogaದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು, ಕಾಳುಮೆಣಸು, ಕೊಕೋಗಳಿಗೆ ಮಳೆಗಾಲದ ಸಮಯದಲ್ಲಿ ಕೊಳೆ ರೋಗ ತಗಲಿ ಪ್ರತೀ ವರ್ಷ ವ್ಯಾಪಕ ಹಾನಿಯನ್ನು ಉಂಟುಮಾಡುತ್ತಿರುವುದು ನಮಗೆಲ್ಲ ತಿಳಿದಿರುವ ವಿಷಯವೇ. ಮಳೆಗಾಲದ ಸಮಯದಲ್ಲಿ ಬಿಟ್ಟು ಬಿಟ್ಟು ಸುರಿಯುವ ಮಳೆಯಿಂದಾಗಿ ಈ ರೋಗ ಭಾದೆ ವ್ಯಾಪಕವಾಗಿ ಹರಡುತ್ತ ಬಹಳಷ್ಟು ಸಲ ಕೃಷಿಕರು ಇದನ್ನು ನಿಯಂತ್ರಿಸಲು ಹರ ಸಾಹಸ ಪಡುತ್ತಿರುವುದು ಹಾಗೂ ಇದರಲ್ಲಿ ಸಫಲತೆ ಹಾಗೂ ವಿಫಲಗಳನ್ನು ಮಿಶ್ರವಾಗಿ ಅನುಭವಿಸುತ್ತಿರುತ್ತಾರೆ. ಈ ರೀತಿಯಾಗಿ ನಷ್ಟತರುವ ಕೊಳೆ ರೋಗವನ್ನು ಹರಡುವ ಸೂಕ್ಮಾಣು ಜೀವಿಗಳನ್ನು ನಿಯಂತ್ರಿಸಲು ಬಹಳಷ್ಟು ವಿಧಿವಿಧಾನಗಳು ಪ್ರಚಲಿತದಲ್ಲಿದ್ದರೂ ತಲೆತಲಾಂತರದಿಂದ ತಿಳಿದುಬಂದ ಸರ್ಮಪಕ, ಸಮಿಶ್ರ ಬೋರ್ಡೋ ದ್ರಾವಣದಷ್ಟು ಉಪಯುಕ್ತ ಹಾಗೂ ಪರಿಣಾಮಕಾರಿಯಾದಷ್ಟು ಇತರೆ ವಿಧಾನಗಳು ಧೀರ್ಘಕಾಲೀನ ಪರಿಣಾಮಗಳನ್ನು ಕೊಟ್ಟಿರುವುದು ಸಂಶೋಧನೆಗಳಿಂದ ದೃಢಪಟ್ಟಿರುವುದಿಲ್ಲ. ಈ ಔಷಧಿಯ ಬಳಕೆ ಅಷ್ಟೇ ಅಲ್ಲದೆ ಆ ರೋಗಾಣುವನ್ನು ತಡೆಗಟ್ಟಲು ಅನುಸರಿಸಬೇಕಾದ ವಿಧಿವಿಧಾನಗಳನ್ನು ಕೂಡಾ ಕೃಷಿಕರು ಅರ್ಥೈಸಿಕೊಂಡು ಅಷ್ಟೇ ಸರ್ಮಪಕ ಹಾಗೂ ಕ್ರಮಬದ್ದವಾಗಿ ಅನುಸರಿಸುವುದು ಅತೀ ಅಗತ್ಯವಾಗಿದೆ. ರೋಗ ನಿಯಂತ್ರಣದಲ್ಲಿ ರೋಗ ಹರಡುವುದನ್ನು ತಡೆಗಟ್ಟಲು ಅನುಸರಿಸುವ ಮುಂಜಾಗ್ರತಾ ಕ್ರಮಗಳಿಗೆ ಕೃಷಿಕರು ಪ್ರ್ರಾಮುಖ್ಯತೆಯನ್ನು ನೀಡಬೇಕಾದ ಬಗ್ಗೆ ಮನಗಾಣುವುದು ಅತೀ ಅಗತ್ಯ.
ಬೋರ್ಡೋ ದ್ರಾವಣ ತಯಾರಿಕೆ: ಮೇಲೆ ತಿಳಿಸಿದಂತೆ ಪರಿಣಾಮ ಕಾರಿಯಾದ ಬೋರ್ಡೋ ಮಿಶ್ರಣವನ್ನು ತಯಾರಿಸಲು ಅನುಸರಿಸಬೇಕಾದ ವಿಧಾನವನ್ನು ಈ ಕೆಳಗೆ ವಿವರಿಸಲಾಗಿದೆ. 100 ಲೀ. ಬೋರ್ಡೋ ಮಿಶ್ರಣ ತಯಾರಿಸಲು ಮೈಲುತ್ತುತ್ತು ಹರಳು 1 ಕೆ.ಜಿ, ಉತ್ತಮಗುಣಮಟ್ಟದ ಚಿಪ್ಪು ಸುಣ್ಣ 1 ಕೆ.ಜಿ., ನೀರು 100 ಲೀ., ಪ್ಯಾಸ್ಟಿಕ್/ ಮಣ್ಣಿನ ಪಾತ್ರೆಗಳು, ಪಿ.ಎಚ್. ಪೇಪರ್ ಮುಂತಾದ ಸಾಮಾಗ್ರಿಗಳು ಅವಶ್ಯಕವಾಗಿದೆ.
ತಯಾರಿಕೆ: ಬೋರ್ಡೋ ಮಿಶ್ರಣ ತಯಾರಿಸುವಾಗ ಮೈಲುತ್ತುತ್ತು ಹರಳು ಹಾಗೂ ಸುಣ್ಣವನ್ನು ಸಂಪೂರ್ಣವಾಗಿ ನೀರಿನಲ್ಲಿ ಕರಗಿಸುವ ಸಲುವಾಗಿ ಒಂದು ಪಾತ್ರೆಯಲ್ಲಿ 10 ಲೀ. ನೀರಿನಲ್ಲಿ 1 ಕೆ.ಜಿ. ಮೈಲುತ್ತುತ್ತಿನ ಹರಳುಗಳನ್ನು ಪ್ರತ್ಯೇಕವಾಗಿ ಕರಗಿಸಿ ದ್ರಾವಣ ತಯಾರಿಸಿಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ 10 ಲೀ. ನೀರಿನಲ್ಲಿ 1 ಕೆ. ಜಿ. ಉತ್ತಮಗುಣಮಟ್ಟದ ಚಿಪ್ಪು ಸುಣ್ಣವನ್ನು ಕರಗಿಸಿ ಸುಣ್ಣದ ನೀರನ್ನು ತಯಾರಿಸಬೇಕು. ನಂತರ ಈ ಎರಡು ಪಾತ್ರೆಗಳ ದ್ರಾವಣವನ್ನು 80 ಲೀ. ನೀರಿರುವ ಮೂರನೆಯ ದೊಡ್ಡ ಪಾತ್ರೆಗೆ ನಿಧಾನವಾಗಿ, ಮರದ ಕೊಲಿನ ಸಹಾಯದಿಂದ ದ್ರಾವಣವನ್ನು ತಿರುಗಿಸುತಾ, ಸುರಿಯಬೇಕು. ಈ ಮಿಶ್ರಣವು ಆಕಾಶ ತಿಳಿ ನೀಲಿಬಣ್ಣಕ್ಕೆ ತಿರುಗುತ್ತಿದ್ದಂತೆ ದ್ರಾವಣವನ್ನು (ಪಿ.ಎಚ್) ಪೇಪರಿನಿಂದ ಪರೀಕ್ಷಿಸಿ ದ್ರಾವಣದಲ್ಲಿ ಹೆಚ್ಚುವರಿ ತಾಮ್ರದ ಆಂಶ ಇಲ್ಲದಿರುವುದನ್ನು ಖಚಿತಪಡಿಸಿ ಕೊಳ್ಳಬೇಕು. ಹೆಚ್ಚ್ಚುವರಿ ತಾಮ್ರದ ಆಂಶವಿದ್ದಲ್ಲಿ ಇನ್ನು ಸ್ವಲ್ಪ ಸುಣ್ಣದ ತಿಳಿನೀರನ್ನು ತಯಾರಿಸಿ ಈ ದ್ರಾವಣಕ್ಕೆ ಸುರಿಯಬೇಕು. ಪಿ.ಎಚ್ ಪೇಪರ್ ಪರೀಕ್ಷೆಯನ್ನು ಪುನಃ ಮಾಡಿ ದ್ರಾವಣವು ಆಮ್ಲೀಯತೆಯಿಂದ ಹೊರ ಬಂದು ನ್ಯೂಟ್ರಲ್ ರಸಸಾರ (ಪಿ.ಎಚ್) ಹೊಂದಿರುವುದನ್ನು ಖಚಿತಪಡಿಸಿ ಕೊಳ್ಳಬೇಕು.
ಈ ಮೇಲೆ ತಿಳಿಸಿದಂತೆ ತಯಾರಿಸಲಾದ ಹೊಸದಾಗಿರುವ ಬೋರ್ಡೋ ಮಿಶ್ರಣವನ್ನು ಅಡಿಕೆ ಗೊನೆಗಳ ಮೇಲೆ ತೀರ ಹತ್ತಿರದಿಂದ ಸಣ್ಣ ಹನಿಗಳ ರೂಪದಲ್ಲಿ ಸಿಂಪರಣೆ ಯಾಗುವಂತೆ ಸಿಂಪಡಿಸುವುದು ಪ್ರಮುಖವಾದ ಅಂಶ. ಈ ದ್ರಾವಣಕ್ಕೆ ಅಂದಾಜು 45 ದಿನಗಳಕಾಲ ರೋಗವನ್ನು ತಹಬದಿಗೆ ತರುವ ಶಕ್ತಿ ಇದ್ದರೂ ಕೂಡ 30 ರಿಂದ ೪೫ ದಿನಗಳ ಅಂತರದಲ್ಲಿ ವಾತಾವರಣದ ಲಕ್ಷಣಗಳನ್ನು ಅರಿತುಕೊಂಡು ಮರು ಸಿಂಪರಣೆ ಮಾಡುವುದು ಸೂಕ್ತವಾಗಿರುತ್ತದೆ. ಬೋರ್ಡೋ ಮಿಶ್ರಣವು ಬೇರಾವುದೇ ರಾಸಾಯನಿಕಗಳೊಂದಿಗೆ ಅಥವಾ ಮಿಶ್ರಣದೊಂದಿಗೆ ಹೊಂದಾಣಿಕೆಯನ್ನು ಹೊಂದಿಲ್ಲವಾದ ಕಾರಣ ಬೇರೆ ಯಾವುದೇ ಕೀಟನಾಶಕವನ್ನು ಇದರೊಂದಿಗೆ ಬೆರೆಸಿ ಸಿಂಪಡಣೆ ಮಾಡಬಾರದು.
ಸಿಂಪರಣಾ ವಿಧಾನ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ ನಿಂದ ಆಗಸ್ಟ್ ವರೆಗೆ ತೀವ್ರತರಹದ ಮಳೆ ಇರುವ ಕಾರಣ ಮುಂಗಾರು ಆರಂಭಕ್ಕೆ ಮುನ್ನ ಒಂದೆರಡು ಮಳೆ ಬಿದ್ದ ಕೂಡಲೆ ಅಡಿಕೆ, ಕಾಳುಮೆಣಸು, ಕೊಕೋ, ತೆಂಗು ಬೆಳೆಗಳಿಗೆ ಬೋರ್ಡೋ ದ್ರಾವಣವನ್ನು ಮುಂಜಾಗರೂಕತಾ ಸಿಂಪಡಣೆ ಮಾಡುವುದು ರೋಗನಿಯಂತ್ರಣದಲ್ಲಿ ಬೆಳೆಗಾರರು ಅನುಸರಿಸಬೇಕಾದ ಪ್ರಥಮ ಹಾಗೂ ಪ್ರಮುಖ ಹೆಜ್ಜೆಯಾಗಿದೆ. ಇದನ್ನು ಕೈಗೊಳ್ಳಲು ಉದಾಸೀನ ಮಾಡಿದಲ್ಲಿ ಬೆಳೆಗಾರರಿಗೆ ಬೋರ್ಡೋ ದ್ರಾವಣ ಸಿಂಪಡಿಸಲು ಯೋಗ್ಯ ವಾತಾವರಣ ಸಿಕ್ಕದೇ ಹೋಗಿ ಬೆಳೆ ರೋಗಕ್ಕೆ ತುತ್ತಾಗಿ ಹಾನಿ ಸಂಭವಿಸುವುದು ನಿಶ್ಚಿತ. ಮೊದಲ ಸಿಂಪರಣೆ ನಂತರ 35-40 ದಿನಗಳ ಅಂತರದಲ್ಲಿ ವಾತಾವರಣವನ್ನು ಅನುಸರಿಸಿಕೊಂಡು ಇನ್ನೊಂದು ಸುತ್ತಿನ ಸಿಂಪರಣೆ ಅಗತ್ಯವಾಗಿ ಕೈಗೊಳ್ಳಬೇಕು. ಮುಂದೆ ಅಗತ್ಯ ಬಿದ್ದಲ್ಲಿ ೩ ನೇ. ಸಿಂಪರಣೆಯನ್ನು ಕೈಗೊಳ್ಳಬೇಕು.
ಸುಮಾರು 1910ರ ಸಂಧರ್ಭದಲ್ಲಿ ಡಾ|| ಕೊಲ್‌ಮನ್ ರವರಿಂದ ಅಡಿಕೆ ಕೊಳೆರೋಗವನ್ನು ಬೋರ್ಡೋ ಮಿಶ್ರಣದಿಂದ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ದೃಢ ಪಟ್ಟಲ್ಲಿಂದ ಇಲ್ಲಿಯವರೆಗೆ ಅಡಿಕೆ, ಕಾಳುಮೆಣಸಿಗೆ ಬರುವ ಕೊಳೆ ರೋಗವನ್ನು ನಿಯಂತ್ರಿಸಲು ಬೋರ್ಡೋ ಮಿಶ್ರಣದಷ್ಟು ಉಪಯುಕ್ತ ರೋಗನಾಶಕ ಬೇರೆ ಯಾವುದೂ ಕೂಡಾ ದೃಢಪಟ್ಟಿರುವುದಿಲ್ಲ. ಇಷ್ಟು ವರ್ಷಗಳ ಕಾಲ ಈ ಮಿಶ್ರಣವನ್ನು ಕೊಳೆರೋಗ ನಿಯಂತ್ರಣಕ್ಕೆ ವ್ಯಾಪಕವಾಗಿ ಕೃಷಿಕರು ಬಳಸುತ್ತಿದ್ದರೂ, ಇಂದಿಗೂ ಕೂಡ ಈ ಮಿಶ್ರಣ ರೋಗ ನಿಯಂತ್ರಣದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಪ್ರಸ್ತುತ ಬೇರೆ ಬೇರೆ ಖಾಸಗಿ ಕಂಪೆನಿಗಳಿಂದ ಸಸ್ಯಜನ್ಯ ಔಷಧಿ/ ಮಿಶ್ರಣಗಳು ಮಾರುಕಟ್ಟೆಯಲ್ಲಿ ಕೊಳೆ ರೋಗ ನಿಯಂತ್ರಣ ಮಾಡುತ್ತದೆಂದು ಪ್ರಚಾರದಲ್ಲಿದ್ದರೂ ಅವುಗಳ ಉಪಯುಕ್ತತೆಯನ್ನು ಸಂಶೋಧನಾ ಸಂಸ್ಥೆಗಳ ಸಂಶೋಧನೆಗಳು ಪರಿಪೂರ್ಣವಾಗಿ ದೃಢಪಡಿಸಿರುವುದಿಲ್ಲ. ಅಡಿಕೆ ಬೆಳೆಗಾರರು ಈ ವಾಸ್ತವಿಕತೆಯನ್ನು ಅರ್ಥೈಸಿಕೊಂಡು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ಸಮರ್ಪಕ ವಿಧಿವಿಧಾನಗಳನ್ನು ಅಳವಡಿಸಿ ಕೊಳ್ಳುವುದು ಮಹತ್ವಪೂರ್ಣ ಅಂಶವಾಗಿರುತ್ತದೆ. ಕೃಷಿಕರು ಪ್ರಸ್ತುತ ಮಾರುಕಟ್ಟೆಯಲ್ಲಿನ ವಿವಿಧ ಅಮಿಷಗಳಿಗೆ ಒಳಗಾಗಿ ಸಂಶೋಧನೆಗಳಿಂದ ಪರಿಪೂರ್ಣವಾಗಿ ದೃಢಪಡದ ಖಾಸಗಿ ಕಂಪೆನಿಗಳ ಸಸ್ಯಜನ್ಯ ಔಷಧಿ/ಮಿಶ್ರಣಗಳನ್ನು ಬಳಸಿ ಮುಂದೆ ನಷ್ಟವನ್ನು ತಂದುಕೊಂಡಲ್ಲಿ ಅದು ಕೃಷಿಕರದೇ ಜವಾಬ್ದಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯು 2017 ಮುಂಗಾರು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಅಡಿಕೆ, ಕಾಳುಮೆಣಸು, ಕೊಕೋ, ತೆಂಗು ಬೆಳೆಗಾರರನ್ನು ತಮ್ಮ ಬೆಳೆಗಳಿಗೆ ಹರಡುವ ಕೋಳೆರೋಗ ನಿಯಂತ್ರಣಕ್ಕೆ ಮೇಲೆ ತಿಳಿಸಿರುವಂತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಕಾಲಿಕ ಸೂಕ್ತ ನಿಯಂತ್ರಣ ಕ್ರಮಗಳನ್ನು ಹಮ್ಮಿಕೊಳ್ಳಲು ಈ ಮೂಲಕ ಕೊರಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.