ಸೇಕ್ರೆಡ್ ಹಾರ್ಟ್ ಚರ್ಚ್‌ನ ನೂತನ ಧರ್ಮಗುರುಗಳಾಗಿ ವಂ.ಫಾ| ಬಾಸಿಲ್ ವಾಸ್

Basil vasಮಡಂತ್ಯಾರು : ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ಗಳಾಗಿ 7 ವರ್ಷ ಸೇವೆ ಸಲ್ಲಿಸಿ ಅಮ್ಮೆಂಬಳ್ ಚರ್ಚ್‌ಗೆ ವರ್ಗಾವಣೆ ಗೊಂಡಿರುವ ವಂ.ಫಾ| ಲಾರೆನ್ಸ್ ಮಸ್ಕರೇನ್ಹಸ್‌ರವರ ಸ್ಥಾನಕ್ಕೆ ಅಲಂಗಾರ್ ಚರ್ಚ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ವಂ.ಫಾ| ಬಾಸಿಲ್ ವಾಸ್‌ರವರು ವರ್ಗಾವಣೆಯಾಗಿ ಜೂ. 3ರಂದು ಅಧಿಕಾರ ಸ್ವೀಕರಿಸಿದರು. ಬಂಟ್ವಾಳ ತಾಲೂಕಿನ ಫರಂಗಿಪೇಟೆ ಬಳಿಯ ಒಮ್ಜಾರ್(ಮೇರಮಜಲು)ನಲ್ಲಿ ಸೆಬಾಸ್ಟಿಯನ್ ವಾಸ್ ಮತ್ತು ಕ್ರಿಸ್ತಿನ್ ಗೋಮ್ಸ್ ದಂಪತಿಯ ಪುತ್ರನಾಗಿ ಜನಿಸಿ, ಸಂತ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಹೆಚ್ಚಿನ ವಿದ್ಯಾಭ್ಯಾಸ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಪೂರೈಸಿ ದರು. ಸೈಂಟ್ ಜೋಸೆಫ್ ಸೆಮಿನರಿಯಲ್ಲಿ ಧಾರ್ಮಿಕ ಶಿಕ್ಷಣ ಪಡೆದು 1985ರಲ್ಲಿ ಗುರುದೀಕ್ಷೆ ಸ್ವೀಕರಿಸಿ, ಕಲ್ಯಾಣಪುರ, ಮಡಂತ್ಯಾರು ಸಹಾಯಕ ಧರ್ಮಗುರುಗಳಾಗಿ, ಮಂಗಳೂರು ಮಂಗಳ ಜ್ಯೋತಿಯಲ್ಲಿ ಪುಸ್ತಕ ಪ್ರಕಟಣೆಯ ವಿಭಾಗದಲ್ಲಿ ಸಹ ನಿರ್ದೇಶಕರಾಗಿ, ಪೂನಾದಲ್ಲಿ ಮೋರಲ್ ಆಂಡ್ ಸ್ಪಿರಿಚ್ಯುವಲ್ ಲೈಫ್ ವಿಷಯದಲ್ಲಿ ಪದವಿ ಪಡೆದರು. ಮಂಗಳೂರು ಧರ್ಮಪ್ರಾಂತ್ಯ ಮತ್ತು ಪಾಶ್ಚತ್ಯ ರಾಷ್ಟ್ರಗಳಲ್ಲಿ ಧ್ಯಾನಕೂಟ ನಿರ್ವಹಣೆಯಲ್ಲಿ
ಯಶಸ್ವಿ ಯನ್ನು ಕಂಡವರು. ಸುಳ್ಯ, ಪಕ್ಷಿಕೆರೆ, ಕಾಸರಗೋಡಿನ ಬೇಳ, ಮೂಡಬಿದ್ರೆಯ ಅಲಂಗಾರ್ ಚರ್ಚ್‌ನಲ್ಲಿ ಧರ್ಮಗುರುಗಳಾಗಿ 32ವರ್ಷಗಳ ಕಾಲ ಧಾರ್ಮಿಕ ಸೇವೆಯನ್ನು ನೀಡಿ ಇದೀಗ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರುಗಳಾಗಿ ಹಾಗೂ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.