ನಾರಾವಿಯಲ್ಲಿ ಚರ್ಚ್ ಧರ್ಮಗುರು ಫಾ| ಲುವಿಸ್ ಕುಟಿನ್ಹಾರಿಗೆ ಬೀಳ್ಕೊಡುಗೆ

NARAVI Fr LouiS bilkodugeನಾರಾವಿ : ಸಂತ ಅಂತೋನಿ ಚರ್ಚ್, ನಾರಾವಿಯಲ್ಲಿ ಧರ್ಮಗುರುಗಳಾಗಿ 7 ವರ್ಷಗಳ ಸೇವೆ ಸಲ್ಲಿಸಿದ ವಂದನೀಯ ಸ್ವಾಮಿ ಲುವಿಸ್ ಕುಟಿನ್ಹಾರವರಿಗೆ ಚರ್ಚ್ ವತಿಯಿಂದ ಬೀಳ್ಕೊಡುವ ಸಮಾರಂಭವನ್ನು ಆಯೋಜಿಸಲಾಯಿತು. ನಾರಾವಿಯಲ್ಲಿ ಚರ್ಚ್ ಮಾತ್ರವಲ್ಲದೆ ಶಿಕ್ಷಣ ಸಂಸ್ಥೆಗಳ ಸರ್ವಾಂಗೀಣ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ.
ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ, ವಂದನೀಯ ಸ್ವಾಮಿ ಲ್ಯಾನ್ಸಿಜೋಯೆಲ್ ಸಲ್ಡಾನ್ಹ, ಚರ್ಚ್ ಉಪಾಧ್ಯಕ್ಷ ವಿನ್ಸೆಂಟ್ ರೊಡ್ರಿಗಸ್, ಕಾರ್‍ಯದರ್ಶಿ ಶ್ರೀಮತಿ ರೀಟಾ ಪಿಂಟೊ, ಸಿಸ್ಟರ್ ಗ್ರಾಸಿಯಾ ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಶಾಲು ಹೊದಿಸಿ, ಫಲಪುಷ್ಪ ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ವಂದನೀಯ ಸ್ವಾಮಿ ಲುವಿಸ್ ಕುಟಿನ್ಹಾರವರು ನಾರಾವಿಯಲ್ಲಿ ಸೇವೆ ಸಲ್ಲಿಸಿ, ಮಂಗಳೂರಿನ ಫೆರ್ಮಾಯಿ ಚರ್ಚ್‌ಗೆ ವರ್ಗಾವಣೆಗೊಳ್ಳುತ್ತಿರುವಾಗ ಅವರಿಗೆ ಶುಭ ಹಾರೈಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.