ಬೆಳಾಲು ಬಿಲ್ಲವ ಸಂಘದಿಂದ ಪುಸ್ತಕ ವಿತರಣೆ, ಗುರುಪೂಜೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

belalu billava sangaಸಂಘಟಿತ ಹೋರಾಟಕ್ಕೆ ಹೆಚ್ಚು ಪ್ರತಿಫಲ : ಹಿಂಗಾಣಿ

ಬೆಳಾಲು : ಸಂಘಟನೆಯ ಮೂಲಕ ಹೋರಾಟಕ್ಕೆ ತಕ್ಕ ಪ್ರತಿಫಲ ಲಭ್ಯವಾಗುವುದು ಎಂದು ಬೆಂಗಳೂರು ಹೈಕೋರ್ಟ್ ವಕೀಲರು, ಅಂಕಣಗಾರ ನವನೀತ್ ಡಿ. ಹಿಂಗಾಣಿ ಹೇಳಿದರು.
ಅವರು ಜೂ.4ರಂದು ಬೆಳಾಲು ಶ್ರೀನಾರಾಯಣ ಗುರು ಸೇವಾ ಸಮಿತಿ, ಯುವ ಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆ, ಯುವ ವಾಹಿನಿ ಸಂಚಲನಾ ಸಮಿತಿ ವತಿಯಿಂದ ಅನಂತೋಡಿ ಭಜನಾ ಮಂದಿರದಲ್ಲಿ ನಡೆದ 19ನೇ ವಾರ್ಷಿಕ ಮಹಾಸಭೆ, ಶ್ರೀ ಸತ್ಯನಾರಾಯಣ ಪೂಜೆ, ಗುರುಪೂಜೆ ಮತ್ತು ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಅವಿಜಿತ ದ.ಕ ಜಿಲ್ಲೆಗಳಲ್ಲಿ ಮತ್ತು ಕೇರಳದಲ್ಲಿ ನಾರಾಯಣ ಗುರುಗಳ ಹೆಸರಿನಲ್ಲಿ ಸಂಘಟನೆಗಳು ಬಲಿಷ್ಠವಾಗಿದೆ. ಅಸ್ಪೃಶ್ಯತೆಯ ನಿವಾರಣೆಗಾಗಿ ನಾರಾಯಣ ಗುರುಗಳ ಹೋರಾಟದ ಮೂಲಕ ಹಿಂದುಳಿದ ವರ್ಗದ ಅಭಿವೃದ್ಧಿಯಾಗಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ. ಮಾತನಾಡುತ್ತಾ ಸಮಾಜದಲ್ಲಿ ತೀರಾ ಹಿಂದುಳಿದವರ ಮಕ್ಕಳ ಶಿಕ್ಷಣಕ್ಕಾಗಿ ಇಂತಹ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಯುವ ವಾಹಿನಿ ಕೇಂದ್ರ ಸಮಿತಿಯ ನಿರ್ದೇಶಕ ರಾಕೇಶ್ ಕುಮಾರ್ ಮೂಡುಕೋಡಿ, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಕೋಟ್ಯಾನ್ ಸಂದರ್ಭೊಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳಾಲು ಶ್ರೀನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ನಾಣ್ಯಪ್ಪ ಪೂಜಾರಿ ಮುಂಡ್ರೊಟ್ಟು ವಹಿಸಿದ್ದರು. ಸಂಘದ ಸ್ಥಾಪಕ ಅಧ್ಯಕ್ಷ ಸೇಸಪ್ಪ ಪೂಜಾರಿ ಉಪ್ಪಾರು, ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ವೇದಾ ಜೆ.ಪಿ., ಯುವ ಬಿಲ್ಲವ ವೇದಿಕೆ ಅಧ್ಯಕ್ಷ ದಾಮೋದರ ಕೊಲ್ಪಾಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಂಜನೊಟ್ಟು ದಿ| ಕರಿಯ ಪೂಜಾರಿ ಸ್ಮರಣಾರ್ಥ ದತ್ತಿನಿಧಿ ವಿದ್ಯಾರ್ಥಿ ವೇತನವನ್ನು ಹಾಗೂ ಗ್ರಾಮದ ೫ ರಿಂದ ೧೦ನೇ ತರಗತಿಯ ಸ್ವಜಾತಿ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರುಗಳು ತಂಡಗಳ ನಾಯಕರುಗಳು, ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲು ರಘುನಾಥ ಶಾಂತಿಯವರ ನೇತೃತ್ವದಲ್ಲಿ ಗುರುಪೂಜೆ ಸತ್ಯನಾರಾಯಣ ಪೂಜೆ ನಡೆಯಿತು. ಮಾಯಾ ಮಹೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಗಂಗಾಧರ ಸಾಲಿಯಾನ್‌ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಸಂಘದ ಕಾರ್ಯದರ್ಶಿ ಸಂತೋಷ್ ಕುಮಾರ್ ಉಪ್ಪಾರು ಸ್ವಾಗತಿಸಿ, ಸ್ಥಾಪಕ ಕಾರ್ಯದರ್ಶಿ ಪಿ. ಜಾರಪ್ಪ ಪೂಜಾರಿ ವಂದಿಸಿದರು. ಮಾಯಾ ಮಹಾದೇವ ದೇವಸ್ಥಾನದ ಆಡಳಿತಾಧಿಕಾರಿ, ಸಂಘದ ಮಾಜಿ ಅಧ್ಯಕ್ಷ ನಾರಾಯಣ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಕೋಟಿಚೆನ್ನಯ ಕ್ರೀಡಾಕೂಟದ ಮಾಜಿ ಅಧ್ಯಕ್ಷ ಉಮನಾಥ ಕೋಟ್ಯಾನ್ ವರದಿ ವಾಚಿಸಿ, ಸದಾಶಿವ ಒಡಿಪ್ರೊಟ್ಟು ಪಟ್ಟಿ ವಾಚಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.