ಗ್ರಾಮೀಣ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ರಾಷ್ಟ್ರೀಯ ಸೇವಾ ಭಾರತಿ ಕಾರ್ಯಾಗಾರ ಉದ್ಘಾಟಿಸಿ ಡಾ. ಹೆಗ್ಗಡೆ

dharmasthala seva bharathi karyagaraಧರ್ಮಸ್ಥಳ : ಗ್ರಾಮೀಣ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಗ್ರಾಮಾಭಿವೃಧ್ಧಿ ಯೋಜನೆಯು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇದರಿಂದಾಗಿ ಸರ್ವಾಂಗೀಣ ಗ್ರಾಮೀಣಾಭಿವೃದ್ಧಿ ಜೊತೆಗೆ ಜನತೆಗೆ ತಮ್ಮ ಸುಂದರ ಸುಸ್ಥಿರ ಬದುಕನ್ನು ಕಟ್ಟಿಕೊಳ್ಳಲು ಆಗುತ್ತಿದೆ ಎಂಬುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವೈಭವ ಶ್ರೀ ಕಾರ್ಯಶಾಲಾ ಎಂಬ ಕಾರ್ಯಕ್ರಮ ದಡಿಯಲ್ಲಿ, ರಾಷ್ಟ್ರೀಯ ಸೇವಾ ಭಾರತಿ ಸಂಸ್ಥೆ, ನವದೆಹಲಿ ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ.30 ಮತ್ತು ಜೂ.1 ರಂದು ಆಯೋಜಿಸಿದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಚತುರ್ದಾನ ಪರಂಪರೆ ಹಾಗೂ ಕ್ಷೇತ್ರದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಪ್ರಾರಂಭಿಸಿದ ರುಡ್‌ಸೆಟ್ ಸಂಸ್ಥೆಯು ಸ್ವ-ಉದ್ಯೋಗ ತರಬೇತಿಗಳನ್ನು ನೀಡುವ ಮೂಲಕ ಲಕ್ಷಾಂತರ ನಿರುದ್ಯೋಗಿಗಳ ಪಾಲಿಗೆ ವರವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಭಾರತಿ ಸಂಸ್ಥೆಯ ರಾಷ್ಟ್ರೀಯಪ್ರಧಾನ ಸಂಘಟನಾ ಕಾರ್ಯದರ್ಶಿ ಗುರುಶರಣ್ ಪ್ರಸಾದ್, ರಾಷ್ಟ್ರೀಯಜಂಟಿ ಸಂಘಟನಾ ಕಾರ್ಯದರ್ಶಿ ರಾಕೇಶ್ ಜೈನ್, ರಾಷ್ಟ್ರೀಯ ಸಂಯೋಜಕ ಸುಂದರ್ ಲಕ್ಷ್ಮಣ್, ಯೋಜನೆಯ ಹಣಕಾಸು ನಿರ್ದೇಶಕ ಶಾಂತಾರಾಮ್ ಪೈ ಉಪಸ್ಥಿತರಿದ್ದರು.
ಜನತೆಯ ಜೊತೆಗೆ ಕೆಲಸ ಮಾಡುವಾಗ ಅವರ ಕಷ್ಠ ಸುಖಗಳಿಗೆ ಸ್ಪಂದಿಸಿ, ಸಮಸ್ಯೆಗಳನ್ನು ಬಗೆಹರಿಸಿದಾಗ ಮಾತ್ರ ನಾವು ಯಶಗಳಿಸಲು ಸಾಧ್ಯ. ಹಾಗೂ ಜನತೆಗೆ ಅಭಿವೃಧ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಸಂದರ್ಭ ಅವರ ಸುಸ್ಥಿರತೆಯ ಜೊತೆಗೆ ಕಾರ್ಯಕ್ರಮವು ಸುಸ್ಥಿರವಾದಲ್ಲಿ ಹೆಚ್ಚೆಚ್ಚು ಜನರನ್ನು ನಾವು ತಲುಪಲು ಸಾಧ್ಯ ಎಂದು ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ವಿಶೇಷ ಮಾಹಿತಿ ನೀಡಿದರು ಹಾಗೂ ಸ್ವ ಸಹಾಯ ಸಂಘಗಳ ಸಬಲೀಕರಣಕ್ಕೆ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.
ವಿವಿಧ ರಾಜ್ಯಗಳ ಸುಮಾರು 35 ರಾಷ್ಟ್ರೀಯ ಪ್ರಮುಖರು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಮೂರು ದಿನಗಳ ಕಾರ್ಯಕ್ರಮದಲ್ಲಿ ಯೋಜನೆಯ ಸಾಮಾಜಿಕ, ಆರ್ಥಿಕ ಹಾಗೂ ಅಭಿವೃಧ್ಧಿ ಕಾರ್ಯಕ್ರಮ ಗಳು, ಸ್ವ-ಸಹಾಯ ಸಂಘಗಳು, ಪ್ರಗತಿ ಬಂಧು ತಂಡಗಳ ಮಾದರಿ, ಸಿರಿ ಗ್ರಾಮೋದ್ಯೋಗ ಸಂಸ್ಥೆಯನ್ನು ಅಧ್ಯಯನ ಮಾಡಿದರು. ವೈಭವ ಶ್ರೀ ಎಂಬ ಸ್ವ ಸಹಾಯ ಸಂಘಗಳ ರಚನೆಯನ್ನು ಈ ಸಂಸ್ಥೆಯು ಮಾಡುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿಯಲ್ಲಿ ಅನುಷ್ಠಾನ ಮಾಡುವುದಾಗಿ ಅಭಿಪ್ರಾಯಪಟ್ಟಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.