ಮಲೆಕುಡಿಯರ ಯುವ ವೇದಿಕೆಯ ವಾರ್ಷಿಕ ಸಮಾವೇಶ

malekudiya 1

malekudiyaಉಜಿರೆ : ಮಲೆಕುಡಿಯರ ಯುವ ವೇದಿಕೆಯ ವಾರ್ಷಿಕ ಸಮಾವೇಶ, ಯೋಧರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಹಾಗೂ ಸಹಾಯಧನ ವಿತರಣಾ ಕಾರ್ಯಕ್ರಮವು ಜೂ. ೪ರಂದು ಉಜಿರೆ ಶಾರದ ಮಂಟಪದಲ್ಲಿ ನಡೆಯಿತು. ಶ್ರೀಕ್ಷೇತ್ರ ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿಯವರು ಆಶೀರ್ವಚನ ನೀಡಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಮಾಜಿ ಅಧ್ಯಕ್ಷ ಉಳಿರ್ ಸುಂದರ ಗೌಡ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಲೆಕುಡಿಯ ಸಮುದಾಯದ ಆರು ಮಂದಿ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು. ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು. ವಿವಿಧ ರಂಗಗಳಲ್ಲಿ ಸಾಧನೆಗೈದ ಮಹನೀಯರನ್ನು ಇದೇ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಹಾಗೂ ನಾರಾವಿ ಗ್ರಾಮದ ಬಾಬು ಇವರು ಇತ್ತೀಚೆಗೆ ಆಕಸ್ಮಿಕವಾಗಿ ಮ್ರತಪಟ್ಟಿದ್ದು ಅವರ ಪತ್ನಿ ಬೇಬಿ ಇವರಿಗೆ ಸಾಂತ್ವನಧನ ವಿತರಿಸಲಾಯಿತು. ವೇದಿಕೆಯಲ್ಲಿ ಜಿ.ಪಂ ಮಾಜಿ ಸದಸ್ಯ ನಾರಾಯಣ ಮಲೆಕುಡಿಯ, ನಿವೃತ್ತ ಸೈನಿಕ ದೇವಪ್ಪ ಹೆರ್ಮುಂಡೆ, ಯುವವೇದಿಕೆಯ ಅಧ್ಯಕ್ಷೆ ಶ್ರೀಮತಿ ವಸಂತಿ ಬೈರಕಟ್ಟಾ, ಬಳ್ಪ ಗ್ರಾ.ಪಂ. ಪ್ರಭಾರ ಅಭಿವೃದ್ಧಿ ಅಧಿಕಾರಿ ಗಂಗಯ್ಯ ಮಲೆಕುಡಿಯ, ನಿವೃತ್ತ ಎನ್.ಎಂ.ಪಿ.ಟಿ ಅಧಿಕಾರಿ ರಾಜ್ ಕಿರಣ್ ಉಪಸ್ಥಿತರಿದ್ದರು. ಗಣೇಶ್ ಸ್ವಾಗತಿಸಿದರು. ಶ್ರೀಮತಿ ದಮಯಂತಿ ಪ್ರಾರ್ಥಿಸಿದರು. ಕಾರ್ಯದರ್ಶಿ ಪುರುಷೋತ್ತಮ್ ಗುಂಡ್ಯ ವರದಿ ವಾಚಿಸಿದರು. ಉಮೇಶ್ ನಾರಾವಿ ಕಾರ್ಯಕ್ರಮ ನಿರ್ವಹಿಸಿದರೆ ಆನಂದ್ ಕಲ್ಗೋಡು ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.