HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಅಳದಂಗಡಿ: ಜೂ.4: ಉಚಿತ ಪುಸ್ತಕ ವಿತರಣೆ-ಪ್ರತಿಭಾ ಪುರಸ್ಕಾರ ವೀರಪ್ಪ ಮೊಲಿ, ಸುಕೇಶ್ ಹೆಗ್ಡೆ ಅಳದಂಗಡಿಗೆ

suddi COLORpdf BLDY.p65ಅಳದಂಗಡಿ : ಶ್ರೀ ಸತ್ಯದೇವತೆ(ಕಲ್ಲುರ್ಟಿ) ದೈವಸ್ಥಾನ ಅಳದಂಗಡಿ ಇದರ ವತಿಯಿಂದ 13ನೇ ವರ್ಷದ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಜೂ.4 ರಂದು 11 ಗಂಟೆಗೆ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಆಡಳಿತದಾರ ಶಿವಪ್ರಸಾದ ಅಜಿಲ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಮಾಜಿ ಮುಖ್ಯ ಮಂತ್ರಿ ಎಂ. ವೀರಪ್ಪ ಮೊಲಿ ಅವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ವಹಿಸಲಿದ್ದಾರೆ. ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ.ವಸಂತ ಬಂಗೇರ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಭಾರತೀಯ ಕಬಡ್ಡಿ ತಂಡದ ಖ್ಯಾತ ಆಟಗಾರ ಸುಕೇಶ್ ಹೆಗ್ಡೆ, ಕೆ.ಎಂ.ಸಿ ಸಮೂಹ ಸಂಸ್ಥೆಗಳ ಅಧೀಕ್ಷಕರಾದ ಡಾ| ಆನಂದ ವೇಣುಗೋಪಾಲ್, ಶಿಕ್ಷಣ ಕ್ಷೇತ್ರದ ಹರಿಕಾರ ಪ್ರಕಾಶ್ ಅಂಚನ್ ಭಾಗವಹಿಸಲಿದ್ದಾರೆ. ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ತಾ.ಪಂ ಸದಸ್ಯೆ ವಿನೂಷ ಪ್ರಕಾಶ್, ಅಳದಂಗಡಿ ಗ್ರಾ.ಪಂ ಅಧ್ಯಕ್ಷ ಸತೀಶ್‌ಕುಮಾರ್ ಮಿತ್ತಮಾರ್, ಸುಲ್ಕೇರಿ ಗ್ರಾ.ಪಂ ಅಧ್ಯಕ್ಷೆ ಯಶೋದಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಆರೋಗ್ಯ ತಪಾಸಣೆ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.