ಬಿಎಸ್‌ಎನ್‌ಎಲ್ ಉದ್ಯೋಗಿಯನ್ನು ಕಡಿದು ಕೊಲೆ

  chandrashekhar

ಆರೋಪಿ ಚಂದ್ರಶೇಖರ

thimmappa 1

pujari 1

ಕೊಲೆಯಾದ ತಿಮ್ಮಪ್ಪ ಪೂಜಾರಿ

ಬೆಳ್ತಂಗಡಿ : ಇಲ್ಲಿಯ ಸಂತೆಕಟ್ಟೆಯ ಬಿಎಸ್‌ಎನ್‌ಎಲ್ ಕಚೇರಿಯ ಉದ್ಯೋಗಿ ತಿಮ್ಮಪ್ಪ ಪೂಜಾರಿ(52ವ) ಎಂಬವರನ್ನು ವಿದ್ಯಾರ್ಥಿಯೋರ್ವ ಕತ್ತಿಯಿಂದ ಕಡಿದು ಕೊಲೆಗೈದ ಘಟನೆ ಜೂ. 2 ರಂದು ಸಂಜೆ ನಡೆದಿದೆ.
ಕೊಲೆಗೈದ ಆರೋಪಿಯನ್ನು ವಿದ್ಯಾರ್ಥಿ ಚಂದ್ರಶೇಖರ(20ವ) ಎಂದು ಗುರುತಿಸಲಾಗಿದೆ.
ಉಜಿರೆ ಕಾಲೇಜಿನ ವಿದ್ಯಾರ್ಥಿ ಚಂದ್ರಶೇಖರ ಹಾಗೂ ಮೃತ ತಿಮ್ಮಪ್ಪ ಪೂಜಾರಿ ಒಂದೇ ಕಟ್ಟಡದಲ್ಲಿ ಅಕ್ಕಪಕ್ಕದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದು, ಹಲವು ದಿನಗಳಿಂದ ನೀರಿನ ವಿಚಾರವಾಗಿ ಮೃತ ತಿಮ್ಮಪ್ಪ ಹಾಗೂ ಚಂದ್ರಶೇಖರನ ಅಮ್ಮನ ನಡುವೆ ಜಗಳವಾಗಿದ್ದೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಕೊಲೆಗೈದ ನಂತರ  ಆರೋಪಿ ಚಂದ್ರಶೇಖರ್ ಬೆಳ್ತಂಗಡಿ ಪೋಲಿಸ್ ಠಾಣೆಗೆ ಶರಣಾಗಿದ್ದಾನೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.