ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಮತ್ತು ಯುವ ವೇದಿಕೆ ಉದ್ಘಾಟನಾ ಸಮಾರಂಭ

kaliya gowdara sanga sanmanaಕಳಿಯ : ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕಳಿಯ ಗ್ರಾಮ ಸಮಿತಿ ಮತ್ತು ಯುವ ವೇದಿಕೆ ಇದರ ಉದ್ಘಾಟನಾ ಸಮಾರಂಭವು ಮೇ. 17ರಂದು ಹೀರ್ಯ ಕೂಸಪ್ಪ ಗೌಡರ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಸೋಮೇಗೌಡ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಳಿಯ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಹೀರ್ಯ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸುಳ್ಯ ನೆಹರು ಸ್ಮಾರಕ ಕಾಲೇಜು ಸಹ ಪ್ರಾಧ್ಯಾಪಕ ಡಾ| ಪೂವಪ್ಪ ಗೌಡ ಕಣಿಯೂರು ಮಾತನಾಡಿ ಯುವ ಪೀಳಿಗೆ ನೈತಿಕ ಮೌಲ್ಯದ ಉನ್ನತ ಶಿಕ್ಷಣ ಪಡೆದು ದುಶ್ಚಟಗಳನ್ನು ಮೈಗೂಡಿಸಿಕೊಳ್ಳದೇ ಆತ್ಮವಿಶ್ವಾಸದಿಂದ ಜೀವನ ನಡೆಸಿದಾಗ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವುದರ ಮೂಲಕ ನಮ್ಮ ಸಮುದಾಯದ ಏಳಿಗೆ ಸಾಧ್ಯ ಎಂದರು.
ಸಮಾಜ ಎನ್ನುವುದು ಯಾವುದೇ ಒಂದು ಜಾತಿಯಿಂದ ಆಗುವುದಿಲ್ಲ. ಹತ್ತು ಸಮುದಾಯ ಸೇರಿ ಒಂದು ಸಮಾಜ ಆಗುವುದು ಯಾವುದೇ ಸಮುದಾಯವು ಸಂಘಟನೆಗಳನ್ನು ಸ್ಥಾಪಿಸುವುದು ಇನ್ನೊಂದು ಸಮುದಾಯ್ವರ ಜೊತೆ ಸಹಬಾಳ್ವೆಯಿಂದಿರುವುದೇ ಸಂಘಟನೆಯ ಉದ್ದೇಶ. ಆಗ ಮಾತ್ರ ಸಂಘಟನೆಗೆ ಬಲ ಬರುವುದು. ಸಮುದಾಯದ ಸ್ಥಾನಮಾನವನ್ನು ಉಳಿಸಿ ಬೆಳೆಸಿ ಕಾರ್‍ಯರೂಪಕ್ಕೆ ತಂದಾಗ ಮಾತ್ರ ಅದರ ಮಹತ್ವ ತಿಳಿಯುವುದು ಎಂದು ತಿಳಿಸಿದರು. ಸತೀಶ್ ಗೌಡ ಓಡಲ ಕೃಷಿಕರಿಗೆ ಸಿಗುವ ಸವಲತ್ತುಗಳ ಕುರಿತಾಗಿ ಮಾಹಿತಿ ನೀಡಿದರು. ಅತಿಥಿಗಳಾಗಿ ಬೆಳ್ತಂಗಡಿ ಯುವ ವೇದಿಕೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಟಿ. ಜಯಾನಂದ ಗೌಡ, ಬೆಳ್ತಂಗಡಿ ಮಹಿಳಾ ವೇದಿಕೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಕಾರ್‍ಯದರ್ಶಿ ಶ್ರೀಮತಿ ಉಮಾವತಿ ಗೌಡ, ಕಳಿಯ ಕ್ಷೇತ್ರ ತಾ.ಪಂ ಸದಸ್ಯ ಪ್ರವೀಣ್ ಗೌಡ ಮಾವಿನಕಟ್ಟೆ, ಕಳಿಯ ಗ್ರಾ.ಪಂ ಸದಸ್ಯೆ ಶ್ರೀಮತಿ ಮೋಹಿನಿ ಪರಮೇಶ್ವರ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಸ್ತುತ ಜಮ್ಮುಕಾಶ್ಮಿರದಲ್ಲಿ ಕಾರ್‍ಯನಿರ್ವಹಿ ಸುತ್ತಿರುವ ಯೋಧ ಬೇಬಿ ಗೌಡ ಪೇರಾಜೆ ಹಾಗೂ ವಿಕಲಚೇತನರ ಆಟೋಟ ಸ್ಪರ್ಧೆಯಲ್ಲಿ ಜಾವೆಲಿನ್ ಮತ್ತು ಗುಂಡು ಎಸೆತ ಸ್ಪರ್ಧೆಯಲ್ಲಿ ಬಾಗವಹಿಸಿದ ಯತೀಶ್ ಗೌಡ ಸಂಬೊಳ್ಳಿ ರವರನ್ನು ಸನ್ಮಾನಿಸಲಾಯಿತು. ಕಳಿಯ ಗ್ರಾಮದಲ್ಲಿ ಮಹಿಳಾ ಸಂಘಟನಾ ಸಮಿತಿ ರಚನೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಶ್ರೀಮತಿ ಸುಭಾಷಿಣಿ ಜನಾರ್ಧನ ಗೌಡ ಕುಳಾಯಿ, ಕಾರ್ಯದರ್ಶಿಯಾಗಿ ಕು| ನಳಿನಿ ಕಲ್ಕುರ್ಣಿ ಆಯ್ಕೆಯಾಗಿರುತ್ತಾರೆ. ಡಾಕಯ್ಯ ಗೌಡ ಎಚ್. ಕಾರ್‍ಯಕ್ರಮ ನಿರೂಪಿಸಿ, ಸಂಘದ ಕಾರ್‍ಯದರ್ಶಿ ಕೆ.ಎನ್ ಗೌಡ ಕಲಾತೊಟ್ಟು ಸ್ವಾಗತಿಸಿ ವರದಿ ವಾಚಿಸಿದರು. ಬಾಲಕೃಷ್ಣ ಗೌಡ ಬಿರ್ಮೊಟ್ಟು ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.