ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಪಿಡಿಒ ಗಳಿಗೆ ಮಂಗಳೂರು ರಾಮಕೃಷ್ಣ ಮಠದಲ್ಲಿ ಸ್ವಚ್ಚ ಗ್ರಾಮ- ಸ್ವಚ್ಚ ಮನಸ್ಸು ವಿಚಾರ ಸಂಕಿರಣ

Advt_NewsUnder_1
Advt_NewsUnder_1
Advt_NewsUnder_1

ramakrishna swachatheಸ್ವಚ್ಚ ಗ್ರಾಮ ಸ್ವಚ್ಚ ಮನಸ್ಸು ಅಭಿಯಾನಕ್ಕೆ ಸುದ್ದಿಯಿಂದ ಬೆಂಬಲ ಸಂತೋಷ ತಂದಿದೆ : ಸ್ವಾಮೀಜಿ ಏಕಗಮ್ಯಾನಂದಜಿ

ಸ್ವಚ್ಚ ಗ್ರಾಮ ವಿಚಾರ ಸಂಕಿರಣದ ಆಶಯ ಭಾಷಣ ಮಾಡಿದ ರಾಮಕೃಷ್ಣ ಮಿಷನ್‌ನ ಸ್ವಾಮೀಜಿ ಏಕಗಮ್ಯಾನಂದಜಿ ಅವರು ಮಾತನಾಡಿ, ಸುಳ್ಯ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕಿನಲ್ಲಿ ಅತ್ಯಧಿಕ ಪ್ರಸಾರವುಳ್ಳ ಸುದ್ದಿ ಬಿಡುಗಡೆ ಪತ್ರಿಕೆ ಸಂಪಾದಕ ಡಾ| ಯು.ಪಿ ಶಿವಾನಂದ ಅವರು ನಮ್ಮ ಆಂದೋಲನವನ್ನು ಅವರ ವ್ಯಾಪ್ತಿಯ ತಾಲೂಕುಗಳಿಗೂ ಕೊಂಡೊಯ್ಯುವ ಭರವಸೆ ನೀಡಿದ್ದೂ ಮಾತ್ರವಲ್ಲದೆ ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ವಿಚಾರ ಸಂಕಿರಣದಲ್ಲಿ ಮೂರೂ ತಾಲೂಕುಗಳ ಪ್ರಮುಖ ಸಿಬ್ಬಂದಿಗಳ ಜೊತೆ ಅವರೂ ಖುದ್ದು ಭಾಗಿಯಾಗಿರುವುದು ಸಂತಸ ತಂದಿದೆ. ಸ್ವಚ್ಚ ಮನಸ್ಸಿನ ಕುರಿತ ಅವರ ಕಲ್ಪನೆ ಮತ್ತು ಆಸಕ್ತಿ ಮೆಚ್ಚುವಂತದ್ದು ಎಂದು ತಿಳಿಸಿದರು.
ವಿಚಾರ ಸಂಕಿರಣದಲ್ಲಿ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಸ್ವಚ್ಚತೆ ಮತ್ತು ಸ್ವಚ್ಚ ಮನಸ್ಸು ಪರಿಕಲ್ಪನೆಯೊಂದಿಗೆ ಜಾಗೃತಿ ಮೂಡಿಸುವ ಆಂದೋಲನವಾಗಿ ಕೈಗೆತ್ತಿಕೊಂಡಿರುವ ಸುದ್ದಿ ಸಂಪಾಕದ ಡಾ| ಯು.ಪಿ ಶಿವಾನಂದ ಅವರ ಕಾಳಜಿ ಅಭಿನಂದನಾರ್ಹ, ಶೇ. 95 ರಷ್ಟು ಸಾಂಕ್ರಾಮಿಕ ರೋಗಗಳು ಸ್ವಚ್ಚತೆಯ ಅರಿವಿನ ಕೊರತೆಯಿಂದಲೇ ಬರುತ್ತದೆ ಎಂಬ ಅವರ ಅಭಿಪ್ರಾಯಕ್ಕೆ ಒಬ್ಬ ವೈದ್ಯರಾಗಿ ಮನ್ನಣೆ ಇದೆ ಎಂದು ತಿಳಿಸಿದರು. ಆ ಮೂಲಕ ಸುದ್ದಿ ಸಂಪಾದಕರನ್ನು ಉಲ್ಲೇಖಿಸಿ ಸಭೆಗೆ ಅವರನ್ನು ಪರಿಚಯಿಸಿದರು.

ರಾಮಕೃಷ್ಣ ಮಠ ಮಂಗಳೂರು ಇವರು ಹಮ್ಮಿಕೊಂಡಿರುವ ಮಹತ್ತರ ಯೋಜನೆ ಸ್ವಚ್ಚ ಮಂಗಳೂರು ಇದರಂಗವಾಗಿ 400ನೇ ಕಾರ್ಯಕ್ರಮವಾಗಿ ಮೇ 28 ರಂದು ಆಶ್ರಮದ ಶ್ರೀ ವಿವೇಕಾನಂದ ಸಭಾಂಗಣದಲ್ಲಿ ಸ್ವಚ್ಚ ಗ್ರಾಮ ವಿಚಾರವಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳ ಪಂಚಾಯತ್ ಅಧ್ಯಕ್ಷ- ಉಪಾಧ್ಯಕ್ಷ, ಪಿಡಿಒ ಗಳಿಗೆ ವಿಶೇಷ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಮಂಗಳಾದೇವಿ ಮಂಗಳೂರು ಇಲ್ಲಿನ ರಾಮಕೃಷ್ಣ ಮಿಷನ್ ಕೇಂದ್ರ ಸರಕಾರದ ಕೋರಿಕೆ ಮೇರೆಗೆ ಈ ಕಾರ್ಯಕ್ರಮ ಅನುಷ್ಠಾನಿಸುತ್ತಿದೆ.
ಮೇ 28 ರಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರಕ್ಕೂ ಮುನ್ನ ಸ್ವಚ್ಚ ಮಂಗಳೂರು 400ನೇ ಕಾರ್ಯಕ್ರಮ ನಡೆಯಿತು. ಸ್ವಚ್ಚ ಮಂಗಳೂರು ಕಾರ್ಯಕ್ರಮದ ಸಕ್ರೀಯ ಸದಸ್ಯ, ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅವರು ಆಶಯ ಭಾಷಣ ಮಂಡಿಸಿದರು. ಕಾರ್ಯಕ್ರಮವನ್ನು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಪರವಾಗಿ ಮೈಸೂರಿನ ಅಬ್ದುಲ್ ನಝೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಪ್ರಾಣೇಶ್ ರಾವ್, ಎಂಆರ್‌ಪಿಎಲ್ ಮತ್ತು ಒಎನ್‌ಜಿಸಿ ಸಂಸ್ಥೆಯ ಹಣಕಾಸು ವಿಭಾಗದ ನಿರ್ದೇಶಕ ಎ.ಕೆ. ಶಾಹು, ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯದ ಚೇರ್‌ಮೆನ್ ಮಂಜುನಾಥ ಭಂಡಾರಿ ಮುಖ್ಯ ಅತಿಥಿಗಳಾಗಿದ್ದು ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀ ರಾಮಕೃಷ್ಣ ಮಠದ ಸ್ವಾಮೀಜಿ ಏಕಗಮ್ಯಾನಂದಜಿ, ದಿಲ್‌ರಾಜ್ ಆಳ್ವ, ಉಮಾನಾಥ ಎಕ್ಕಾರು ಕಾರ್ಯಕ್ರಮ ಸಂಯೋಜನೆಯಲ್ಲಿ ಪಾತ್ರ ವಹಿಸಿದ್ದರು.
ವಿಚಾರ ಸಂಕಿರಣ :ಸಮಾರಂಭದ ಚಹಾ ವಿರಾಮದ ಬಳಿಕ ನಡೆದ ವಿಚಾರ ಸಂಕಿರಣದಲ್ಲಿ ಸ್ವಚ್ಚ ಮಂಗಳೂರು ಒಂದು ಪ್ರಯೋಗ ವಿಷಯದಲ್ಲಿ ಸ್ವಾಮಿ ಏಕಗಮ್ಯಾನಂದಜಿ, ಸ್ವಚ್ಚ ಮನಸ್ಸು ಮತ್ತು ಸ್ವಚ್ಚ ಭಾರತ ವಿಷಯದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸ್ವಚ್ಚ ಗ್ರಾಮ ಕಲ್ಪನೆ ವಿಷಯದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸ್ಚಚ್ಚತೆ ಎಂಬ ಮೌಲ್ಯ ವಿಷಯದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ. ಆರ್. ರವಿ ಉಪನ್ಯಾಸ ನೀಡಿದರು. ಪ್ರಶ್ನೋತ್ತರಗ ಳಿಗೂ ಅವಕಾಶ ಕಲ್ಪಿಸಲಾಗಿತ್ತು.
ಬೆಳ್ತಂಗಡಿ ತಾಲೂಕಿನಿಂದ ಭಾಗಿ:
ಕಳಿಯ ಗ್ರಾ.ಪಂ ಪಿಡಿಒ ಕುಂಞ ಕೆ, ಹೊಸಂಗಡಿ ಗ್ರಾ.ಪಂ. ಕಾರ್ಯದರ್ಶಿ ವಿಜಯಲಕ್ಷ್ಮೀ, ಇಂದಬೆಟ್ಟು ಪಿಡಿಒ ಚಂದ್ರಶೇಖರ ಪಿ.ಜಿ, ಕುವೆಟ್ಟು ಗ್ರಾ.ಪಂ. ಪಿಡಿಒ ರವೀಂದ್ರ ನಾಯಕ್, ಮುಂಡಾಜೆ ಗ್ರಾ.ಪಂ. ಅಧ್ಯಕ್ಷ ಶಾಲಿನಿ ವಿಜಯ ಕುಮಾರ್, ಉಪಾಧ್ಯಕ್ಷೆ ವಸಂತಿ ರಾಜ್‌ಗೋಪಾಲ್, ಸಿಬ್ಬಂದಿ ನಾರಾಯಣ ನಾಯ್ಕ, ಧರ್ಮಸ್ಥಳ ಗ್ರಾ.ಪಂ. ಸಿಬ್ಬಂದಿ ದಿನೇಶ್, ಆರಂಬೋಡಿ -ಹೊಸಂಗಡಿ ಗ್ರಾ.ಪಂ. ಪಿಡಿಒ ಗಣೇಶ್ ಶೆಟ್ಟಿ, ಕಲ್ಮಂಜ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ, ಉಪಾಧ್ಯಕ್ಷ ದಿನೇಶ್ ಗೌಡ, ಪಿಡಿಒ ತಾರಾನಾಥ ನಾಯ್ಕ, ಲಾಯಿಲ ಗ್ರಾ.ಪಂ. ಕಾರ್ಯದರ್ಶಿ ಶೇಖರ ಎಂ, ಬಳೆಂಜ ಗ್ರಾ.ಪಂ. ಅಧ್ಯಕ್ಷೆ ದೇವಕಿ ಕೆ, ಬಳೆಂಜ ಗ್ರಾ.ಪಂ. ಪಿಡಿಒ ಸುಧಾಮಣಿ ಜಿ, ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ, ಉಪಾಧ್ಯಕ್ಷೆ ಜಯಂತಿ ಪಿ, ನಡ ಗ್ರಾ.ಪಂ. ಉಪಾಧ್ಯಕ್ಷ ಸುಂದರ, ಕೊಕ್ಕಡ- ನಡ ಗ್ರಾ.ಪಂ. ಪಿಡಿಒ ರಾಜೀವಿ ಕೆ ಶೆಟ್ಟಿ, ನಡ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ, ಸಂಪನ್ಮೂಲ ವ್ಯಕ್ತಿ ಅಜಿತ್ ಕುಮಾರ್ ಆರಿಗಾ, ಮಚ್ಚಿನ ಗ್ರಾ.ಪಂ. ಪಿಡಿಒ ರೇಷ್ಮಾ ಗಂಜಿಗಟ್ಟಿ, ನಾರಾವಿ ಗ್ರಾ.ಪಂ. ಕಾರ್ಯದರ್ಶಿ ಮಧು, ಅರಸಿನಮಕ್ಕಿ ಗ್ರಾ.ಪಂ. ಪಿಡಿಒ ಬಿ ಶೇಖರ್ ಇವರುಗಳು ವಿಚಾರ ಸಂಕಿರಣದಲ್ಲಿ ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.