ಉಜಿರೆ : ಜೂ 1 ರಿಂದ 8ರ ವರೆಗೆ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಮಾನ್‌ಸೂನ್ ಸೇಲ್

Advt_NewsUnder_1
Advt_NewsUnder_1
Advt_NewsUnder_1

Durga textile copyಉಜಿರೆ : ಬೆಳೆಯುತ್ತಿರುವ ವಾಣಿಜ್ಯ ನಗರಿ ಉಜಿರೆಯಲ್ಲಿ ಕಳೆದ 2 ವರ್ಷದಿಂದ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ಸಂಸ್ಥೆಯು ಗ್ರಾಹಕರಿಗೆ ನಿರಂತರ ಸೇವೆಗಳನ್ನು ನೀಡುವ ಮೂಲಕ ಎಲ್ಲರ ಮನೆ ಮಾತಾಗಿದೆ.
ಸಂಸ್ಥೆಯಲ್ಲಿ ಪ್ರಖ್ಯಾತ ನಗರಗಳಾಗಿರುವ ಬಾಂಬೆ, ಕಲ್ಕತ್ತ, ಸೂರತ್, ನಾಗ್ಪುರ, ಹಾಗೂ ಅಹಮ್ಮದಾಬಾದ್ ಬ್ರ್ಯಾಂಡೆಡ್ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ ಗ್ರಾಹಕರಿಗೆ ಅತೀ ಕಡಿಮೆ ಬೆಲೆಯಲ್ಲಿ ನೀಡುವುದಕ್ಕಾಗಿ ಅಣಿಯಾಗಿರುತ್ತದೆ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್, 2 ವರ್ಷಗಳಿಂದ ಉಜಿರೆಯ ಗ್ರಾಹಕರ ಪ್ರಶಂಸೆಗೆ ಪಾತ್ರವಾಗಿ ಯೋಗ್ಯಕಾಲಕ್ಕೆ ಯೋಗ್ಯ ರೀತಿಯ ಉತ್ತಮ ಗುಣಮಟ್ಟದ ಡ್ರೆಸ್‌ಗಳನ್ನು ಒದಗಿಸಿ ಡ್ರೆಸ್ ಉದ್ಯಮದಲ್ಲಿ ಪಾರದರ್ಶಕತೆ ಮೈಗೂಡಿಸಿಕೊಂಡು ಗ್ರಾಹಕರನ್ನು ಸಂತೃಪ್ತಿಗೊಳಿಸುತ್ತಿದೆ.
ಸಂಸ್ಥೆ 3ನೇ ವರ್ಷಕ್ಕೆ ಪಾದಾರ್ಪಣೆಗೊಂಡಿರುವ ಈ ಸಂದರ್ಭದಲ್ಲಿ ಗ್ರಾಹಕರಿಗೆ ಜೂ 1 ರಿಂದ 8ರ ವರೆಗೆ ವಿಶೇಷವಾಗಿ ಡಿಸ್ಕೌಂಟ್ ಬೆಲೆಯಲ್ಲಿ ಮಾನ್‌ಸೂನ್ ಸೇಲ್‌ನಲ್ಲಿ ಆರಂಭಿಸಿದೆ ಎಂದು ಸಂಸ್ಥೆಯ ಮಾಲಕ ಮೋಹನ್ ಚೌದರಿ ತಿಳಿಸಿದ್ದಾರೆ.
ಮಹಿಳೆಯರ ಅಂದ ಚಂದದ ಸಿದ್ದ ಉಡುಪುಗಳು, ಮಕ್ಕಳ ವಿವಿಧ ಮಾದರಿಯ ಫ್ಯಾಶನ್ ಬಟ್ಟೆಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಹಾಗೂ ಫ್ಯಾಶನ್ ವಸ್ತ್ರಗಳನ್ನು ಹೊಂದಿ ವಿಶೇಷ ರಿಯಾಯಿತಿ ಹಾಗೂ ದರ ಕಡಿತ ಮಾರಾಟ ಮಾನ್‌ಸೂನ್ ಸೇಲ್‌ನಲ್ಲಿ ಲಭ್ಯವಿದೆ, ಸಿಂಥೆಟಿಕ್ ಡ್ರೆಸ್ ಮೆಟೀರಿಯಲ್ ರೂ-149ರಿಂದ, ಕಾಟನ್ ಡ್ರೆಸ್ ಮೆಟೀರಿಯಲ್ ರೂ-199ರಿಂದ, ಜಯ್‌ಪುರ್ ಕಾಟನ್ ಮೆಟೀರಿಯಲ್ ರೂ- 299ರಿಂದ, ಚಂದೇರಿ ಸಿಲ್ಕ್ ಡ್ರೆಸ್ ಮೆಟೀರಿಯಲ್ ರೂ-349ರಿಂದ ಹಾಗೂ ಫ್ಯಾನ್ಸಿ ಸೀರೆ ರೂ-125ರಿಂದ, ಕಾಟನ್ ಸೀರೆ 175ರಿಂದ, ಜಯ್‌ಪುರ್ ಕಾಟನ್ ಸೀರೆಗಳು 200ರಿಂದ, ಕಾಟನ್ ಸಿಲ್ಕ್ ಸೀರೆಗಳು ರೂ-299ರಿಂದ, ಬೆಳಗಾಂ ಸಿಲ್ಕ್ ಸೀರೆಗಳು ರೂ-499ರಿಂದ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಪುರುಷರ ಕಾಟನ್ ಪ್ಯಾಂಟ್ ರೂ-250ರಿಂದ. ಜೀನ್ಸ್ ಪ್ಯಾಂಟ್ ರೂ-250ರಿಂದ, ಶರ್ಟ್ ರೂ-175ರಿಂದ ಹಾಗೂ ಕಾಲರ್ ಟೀ ಶರ್ಟ್ ರೂ-100ರಿಂದ ದೊರೆಯಲಿದೆ. ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಬಹುದು ಎಂದು ಅವರು ಹೇಳಿಕೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.