ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಬೆಳ್ತಂಗಡಿ ವಲಯ ಭೇಟಿ ನಾವು ನಿರ್ಗುಣದಿಂದ ಸದ್ಗುಣ ಪಥದತ್ತ ನಡೆಯಬೇಕು

Advt_NewsUnder_1
Advt_NewsUnder_1
Advt_NewsUnder_1

dattananda saraswathi swamiji belthangady betiಬೆಳ್ತಂಗಡಿ : ನಾವು ದೇವರ ದಾಸನಾಗಬೇಕು. ಹೇಗೆ ಆಹಾರ ಸೇವಿಸುವಾಗ, ಉಡುಗೆ ತೊಡುವಾಗ ಒಳ್ಳೆಯದನ್ನು ಬಯಸುತ್ತೇವೆಯೋ ಹಾಗೆ ದೇವರನ್ನು ಪೂಜಿಸುವಾಗ, ಧ್ಯಾನ, ಜಪ ಮಾಡುವಾಗ ಒಳ್ಳೆಯ ಮನಸ್ಸಿನಿಂದ, ಸಮಚಿತ್ತದಿಂದ ಮಾಡಿದರೆ ಭಗವಂತನ ದಯೆ ಪ್ರಾಪ್ತಿಯಾಗುವುದು.
ನಾವು ಯಾವಾಗಲೂ ನಿರ್‍ಗುಣದಿಂದ ಸದ್ಗುಣದ ಪಥದತ್ತ ನಡೆಯಬೇಕು. ಎಂದು ದಾಭೋಳಿ ಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಮೇ 24ರಂದು ಪುಂಜಾಲಕಟ್ಟೆಯ ನಂದಗೋಕುಲ ಸಭಾಭವನದಲ್ಲಿ ಬೆಳ್ತಂಗಡಿ ವಲಯದ ಕುಡಾಳ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಮಾಜದ ಬಾಂಧವರಿಗೆ ಆಶೀರ್ವಚನ ನೀಡಿ ಮಾತನಾಡಿದರು. ಬೆಳಿಗ್ಗೆ 9 ಗಂಟೆಗೆ ಮಂಗಳೂರಿನಿಂದ ಆಗಮಿಸಿದ ಶ್ರೀಗಳನ್ನು ಪುಂಜಾಲಕಟ್ಟೆಯ ದೈಕಿನಕಟ್ಟೆಯಿಂದ ವಾಹನ ಜಾಥಾದ ಮೂಲಕ ಕರೆತಂದು ಪೂರ್ಣಕುಂಭ ಸ್ವಾಗತ ನೀಡಲಾಯಿತು. ತದನಂತರ ಸಾಮೂಹಿಕ ಪಾದುಕಾ ಪೂಜನ, ಗುರುಗಳ ಆಶೀರ್ವಚನ, ಭಜನಾ ಕಾರ್ಯಕ್ರಮ, ಗುರು ಸಮಾರಾಧನೆ ಮುಂತಾದ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಬೆಳ್ತಂಗಡಿ ವಲಯದ ಸ್ವಾಗತ ಸಮಿತಿಯ ಅಧ್ಯಕ್ಷ ದಯಾನಂದ ನಾಯಕ್, ಕಾರ್ಯಾದ್ಯಕ್ಷ ಪ್ರಭಾಕರ ಪ್ರಭು ವೇಣೂರು, ಗೌರವಾಧ್ಯಕ್ಷ ದೇವಣ್ಣ ಪ್ರಭು, ಪ್ರಧಾನ ಕಾರ್ಯದರ್ಶಿ ಯೋಗೀಶ್ ನಾಯಕ್, ಉಪಾಧ್ಯಕ್ಷರು ಗಳಾದ ವಿಶ್ವನಾಥ ಶೆಣೈ, ಪ್ರಭಾಕರ ಭಟ್ ಇಡ್ಯ, ಸತೀಶ್ ಪ್ರಭು, ಸುಧಾಕರ ಪ್ರಭು, ನಂದನ್ ಶೆಣೈ ಪೆರ್ಮರೋಡಿ, ದೇವಿ ಪ್ರಸಾದ್, ಶ್ರೀಮತಿ ತಾರಾ ಪ್ರಭು, ಯಶವಂತ ನಾಯಕ್, ಗೌರವ ಸಲಹೆಗಾರರಾದ ಬಾಲಕೃಷ್ಣ ಶೆಣೈ , ಮೋಹನ್ ಪ್ರಭು, ಸದಾಶಿವ ಪ್ರಭು ನೈನಾಡು, ಕಾರ್‍ಯದರ್ಶಿಗಳಾದ ರಮೇಶ್ ನಾಯಕ್ ಉಜಿರೆ, ಗೋವಿಂದ ಸಾಮಂತ್, ಸುರೇಶ್ ನಾಯಕ್, ಪ್ರದೀಪ್ ನಾಯಕ್,
ವತ್ಸಲಾ ನಾಯಕ್, ಸುಮಂಗಲಾ ಪ್ರಭು , ಮಾಲತಿ ಪ್ರಭು, ವೀಣಾ ನಾಯಕ್, ಪ್ರಭಾಕರ ಪ್ರಭು
ಸದಸ್ಯರಾದ ವಿನೋದ್ ಶೆಣೈ, ಸುಬ್ರಹ್ಮಣ್ಯ ನಾಯಕ್, ಜಗದೀಶ್ ನಾಯಕ್, ಹರೀಶ್ ನಾಯಕ್, ವಿನಾಯಕ ನಾಯಕ್, ರಾಘವೇಂದ್ರ ನಾಯಕ್, ಸಂಜೀವಿ ಪ್ರಭು, ಯತೀಶ್ ಪ್ರಭು, ನಾರಾಯಣ ಶೆಣೈ, ದಕ್ಷಿಣ ಕನ್ನಡ ಜಿಲ್ಲಾ ಸ್ವಾಗತ ಸಮಿತಿಯ ಅಧ್ಯಕ್ಷ ರಮೇಶ್ ನಾಯಕ್ ಮೈರ, ಗೌರವಾಧ್ಯಕ್ಷರಾದ ಎಂ. ಎಂ. ಪ್ರಭು, ಗಣಪತಿ ಶೆಣೈ, ಕಾರ್ಯದರ್ಶಿ ಡಾ. ವಿಜಯಲಕ್ಷ್ಮಿ ನಾಯಕ್ ಮುಂತಾದ ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜಾ ಆಗಮಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.