ವೇಣೂರು ಪೊಲೀಸ್ ಠಾಣೆ : ಶಾಂತಿಸಭೆ

venurವೇಣೂರು: ಮುಂಬರುವ ರಂಝಾನ್ ಹಬ್ಬದ ಹಿನ್ನೆಲೆಯಲ್ಲಿ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ವೇಣೂರು ಪೊಲೀಸ್ ಠಾಣೆ ವತಿಯಿಂದ ಶಾತಿಸಭೆಯು ಠಾಣಾ ಸಭಾಂಗಣದಲ್ಲಿ ಮೇ 26ರಂದು ಜರಗಿತು. ಠಾಣೆಯ ಪೊಲೀಸ್ ಉಪನಿರೀಕ್ಷಕ ಲೋಲಾಕ್ಷ ಕೆ.ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಭೆಯನ್ನು ನಡೆಸಿಕೊಟ್ಟರು. ಸಭೆಯಲ್ಲಿ ಬೀಟ್ ಪೊಲೀಸರ ಕಾರ್ಯಚಟುವಟಿಕೆ ಹಾಗೂ ಪೊಲೀಸರು ಮತ್ತು ಜನರ ಮಧ್ಯೆ ಉತ್ತಮ ಭಾಂದವ್ಯವನ್ನು ರೂಪಿಸುವ ಜನಸ್ನೇಹಿ ಪೋಲೀಸ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಲೋಲಾಕ್ಷ ಕೆ.ಯವರು ನೀಡಿದರು. ಗ್ರಾಮ ಗ್ರಾಮಗಳಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಲು ಮತ್ತು ಮಾಹಿತಿಯನ್ನು ಪಡೆದುಕೊಳ್ಳಲು ಪ್ರತೀ ಗ್ರಾಮದಿಂದ 50 ಮಂದಿ ಪ್ರಮುಖರ ಫೊಟೋ ಸಹಿತ ವಿಳಾಸವನ್ನು ಠಾಣೆಗೆ ನೀಡುವಂತೆ ಅವರು ವಿನಂತಿಸಿದರು. ಸಭೆಯಲ್ಲಿ ಠಾಣಾ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ವಿವಿಧ ಸಂಘಟನೆಗಳ ಮುಖಂಡರು, ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಪೊಲೀಸ್ ಸಿಬ್ಬಂದಿ ವಿಜಯ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ರೋಹಿನಾಥ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.