ಎಸ್ಸೆಸ್ಸೆಲ್ಸಿ ಸಾಧಕರಿಗೆ ಅಭಿನಂದನೆ ಶಿಕ್ಷಕ ವರ್ಗದ ಸಂಘಟಿತ ಪರಿಶ್ರಮವೇ ವಿದ್ಯಾರ್ಥಿಗಳ ಯಶಸ್ಸಿನ ಮೂಲ : ವಾಲ್ಟರ್ ಡಿಮೆಲ್ಲೋ

Advt_NewsUnder_1
Advt_NewsUnder_1

vani school abinandana prgmಬೆಳ್ತಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ ಇವರ ಆಶ್ರಯದಲ್ಲಿ 2016-17ನೇ ಸಾಲಿನ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ವಾಣಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಮೇ.23 ರಂದು ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ ರವರು ಮಾತನಾಡಿ ತಾಲೂಕಿನ ಹಾಗೂ ಜಿಲ್ಲೆಯ ಉತ್ತಮ ಫಲಿತಾಂಶಕ್ಕೆ ಶಿಕ್ಷಕರ ಸಂಘಟಿತ ಪರಿಶ್ರಮವೇ ಕಾರಣ ಎಂದು ಹೇಳುತ್ತಾ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಇನ್ನೋರ್ವ ಮುಖ್ಯ ಅತಿಥಿ ಉಪನಿರ್ಧೇಶಕರ ಕಚೇರಿಯ ವಿಷಯ ಪರಿವೀಕ್ಷಕ ಶಂಕರಪ್ಪ ಮುದ್ನಾಳ್ ರವರು ಸಾಧಕರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು
ಉತ್ತಮ ಫಲಿತಾಂಶ ಪಡೆದ ಶಾಲಾ ಶಿಕ್ಷಕರಾದ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣ ಕೆ, ಪ್ರಶಾಂತ್ ಎಲ್ ಮುಖ್ಯ ಶಿಕ್ಷಕರು ಸ.ಪ್ರೌ.ಶಾಲೆ ಸವಣಾಲು, ಲಿಲ್ಲಿ ಪಾಯಸ್ ಹಿರಿಯ ಶಿಕ್ಷಕಿ ಅನುದಾನಿತ ಪ್ರೌ.ಶಾಲೆ ನಾರಾವಿ ಹಾಗೂ ಸಾಧಕ ವಿದ್ಯಾರ್ಥಿಗಳಾದ ಕಾಶಿಪಟ್ಣ ಪ್ರೌಢ ಶಾಲೆಯ ಪ್ರಜೇಶ್, ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಜೊಯಾಲ್ ಆಂಟನಿ ಹಾಗೂ ಅಧಿತಿ ಪ್ರಭು, ನಾರಾವಿ ಪ್ರೌಢ ಶಾಲೆಯ ಸ್ವಾತಿ ಪಿ ಹೆಗಡೆ ತಮ್ಮ ತಮ್ಮ ಸಾಧನೆಗೆ ಕಾರಣವಾದ ಅನುಭವಗಳ ಬಗ್ಗೆ ಮಾತನಾಡಿದರು.
ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್ ಅಧ್ಯಕ್ಷತೆ ವಹಿಸಿ ಸ್ಥಾನದಿಂದ ಮಾತನಾಡಿ ಮುಂದಿನ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸುವ ಭರವಸೆಯನ್ನು ನೀಡಿದರು, ನೋಡಲ್ ಅಧಿಕಾರಿ ರಮೇಶ್ ಇಲಾಖಾ ಮಾಹಿತಿ ನೀಡುವುದರೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಾಜ್‌ಗುರು ಹೆಬ್ಬಾರ್ ಹಾಗೂ ಸಹಶಿಕ್ಷಕ ಸಂಘದ ಅಧ್ಯಕ್ಷ ರಮೇಶ್ ಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾಣಿ ಪ್ರೌಢ ಶಾಲಾ ವಿದ್ಯಾರ್ಥಿನಿಯರಾದ ಕು.ಗ್ರೀಷ್ಮ ಹಾಗೂ ಕು.ಮಿತ ರವರ ಪ್ರಾರ್ಥನೆ ಬಳಿಕ ಲಕ್ಷ್ಮೀನಾರಾಯಣ ಸ್ವಾಗತಿಸಿ, ಎಸ್.ಡಿ.ಎಂ ಪ್ರೌಢ ಶಾಲೆ ಬೆಳಾಲಿನ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಧನ್ಯವಾದ ಸಮರ್ಪಿಸಿದರು. ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಮೋಹನಾಂಗಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.