ಅಳದಂಗಡಿ : ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯಕಾರಿಣಿ ಸಭೆ ಬರ ನಿರ್ವಹಣೆಯಲ್ಲಿ ವಿಫಲತೆ ರಾಜ್ಯ ಸರಕಾರದ ಸಾಧನೆ : ಮಠಂದೂರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

aladangady bjp shabe'ಸ್ವಚ್ಛಭಾರತ್, ಶ್ರೇಷ್ಠ ಭಾರತ್ ಘೊಷಣೆಯಡಿಯಲ್ಲಿ ಜಿಲ್ಲೆಯ 1766 ಬೂತ್‌ಗಳ ಪರಿಸರದಲ್ಲಿ ಮುಂದಿನ ಜೂನ್, ಜುಲೈ ತಿಂಗಳಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ಪಕ್ಷದ ವತಿಯಿಂದ ನಡೆಯಲಿದೆ – ಮಠಂದೂರು
ಅಳದಂಗಡಿ : ಭ್ರಷ್ಟಾಚಾರದಲ್ಲಿ ಎರಡನೇ ಸ್ಥಾನ, ಅತಿ ಹೆಚ್ಚು ಸಾಲ, ರೈತರ ಆತ್ಮಹತ್ಯೆ ತಡೆಯುವಲ್ಲಿ ಮತ್ತು ಬರ ನಿರ್ವಹಣೆಯಲ್ಲಿ ವಿಫಲತೆ ಇವು ರಾಜ್ಯ ಸರಕಾರದ ನಾಲ್ಕು ವರ್ಷದ ಸಾಧನಾ ಸಮಾವೇಶದ ನಾಲ್ಕು ಸಾಧನೆಗಳಾಗಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಕಾಂಗ್ರೇಸ್ ಸರಕಾರದ ಕಾರ್ಯವೈಖರಿಯನ್ನು ವಿಶ್ಲೇಷಿಸಿದರು.
ಅವರು ಮೇ.23 ರಂದು ಅಳದಂಗಡಿಯ ಸ್ವರಾಜ್ ಟವರ್‍ಸ್‌ನಲ್ಲಿ ನಡೆದ ಬಿಜೆಪಿ ಬೆಳ್ತಂಗಡಿ ಮಂಡಲ ವಿಶೇಷ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಪಕ್ಷದ ಪದಾಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು.
ಯಡಿಯೂರಪ್ಪನವರು ರಾಜ್ಯವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ದಿದ್ದರೆ ಸಿದ್ದರಾಮಯ್ಯ ಇದಕ್ಕೆ ವ್ಯತಿರಿಕ್ತರಾಗಿದ್ದಾರೆ. ಹದಿಮೂರು ಬಜೆಟ್‌ಗಳನ್ನು ನೀಡಿದ ಸಿದ್ಧರಾಮಯ್ಯ ನವರಿಂದ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಜನತೆ ಈಗ ಪರಿತಪಿಸುವಂತಾಗಿದೆ. ಎಗ್ಗಿಲ್ಲದೆ ಭ್ರಷ್ಟಾಚಾರ, 1 ಲಕ್ಷ 28 ಸಾವಿರ ಕೋಟಿ ರೂ.ಸಾಲ, 2.272 ರೈತರ ಆತ್ಮಹತ್ಯೆ, ಅತಿ ಹೆಚ್ಚು ಬರ ಇವರ ಸಾಧನೆಯಾಗಿದೆ. ಅಸಡ್ಡೆ, ಅಹಂಕಾರ, ಅಕ್ರಮಗಳ ರಾಜ್ಯ ಸರಕಾರವನ್ನು ಕಿತ್ತೊಗೆಯುವ ಕಾಲ ಸನ್ನಿಹಿತವಾಗಿದೆ ಎಂದು ವಾಗ್ದಾಳಿ ನಡೆಸಿದರು. ಮನಮೋಹನ್‌ಸಿಂಗ್ ಅವರು ದೇಶವನ್ನು ಬೆಳಕಿನಿಂದ ಕತ್ತಲೆಡೆಗೆ ಕೊಂಡೊಯ್ದಿದ್ದರು. ನರೇಂದ್ರ ಮೋದಿ ಪ್ರಧಾನ ಮಂತ್ರಿ ಆದ ಮೇಲೆ ದೇಶ ಹೊಸ ಬೆಳಕಿನತ್ತ ಮುನ್ನಡೆಯುತ್ತಿದೆ. ಲಕ್ಷಾಂತರ ಕಾರ್ಯಕರ್ತರ ಪರಿಶ್ರಮದಿಂದ ದೇಶ ಬದಲಾವಣೆಯತ್ತ ಸಾಗುತ್ತಿದೆ.
ಮುದ್ರಾ ಯೋಜನೆಯ ಅನುಷ್ಠಾನದ ಬಗ್ಗೆ ಸ್ಥಳೀಯ ಬ್ಯಾಂಕ್ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರದಿಂದ ಜಿಲ್ಲೆಗೆ 10 ಸಾವಿರ ಕೋಟಿ ರೂ.ಅನುದಾನ ಹರಿದು ಬಂದಿದೆ. ಇದನ್ನು ಸಂಸದ ನಳೀನ್ ಕುಮಾರ್ ಕಟೀಲು ಅವರು ರೈಲ್ವೆ, ರಸ್ತೆ ಮೊದಲಾದ ಅಭಿವೃದ್ಧಿ ಕೆಲಸಗಳಿಗೆ ಸಮರ್ಥವಾಗಿ ಬಳಸಿ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ ನಂ.1 ಸಂಸದರಾಗಿದ್ದಾರೆ ಎಂದು ಶ್ಲಾಘಿಸಿದರು.
ದೇಶವು ಪರಿವರ್ತನೆಯ ಕಾಲಘಟ್ಟದಲ್ಲಿರುವ ಸಂದರ್ಭದಲ್ಲಿ ಸಂಘಟನಾತ್ಮಕ ಕಾರ್ಯಕ್ರಮಗಳ ಮೂಲಕ 2018ರಲ್ಲಿ ಬೆಳ್ತಂಗಡಿಯಲ್ಲಿ ಪಕ್ಷವನ್ನು ನಂ.1 ಮಾಡಬೇಕಾದ ಅಗತ್ಯವಿದೆ. ಪಂ.ನಿಂದ ಪಾರ್ಲಿಮೆಂಟ್ ತನಕ ಒಂದೇ ಒಂದೇ ದೇಶ, ಒಬ್ಬ ನಾಯಕ ಎಂಬ ಗುರಿಇಟ್ಟುಕೊಂಡಿರುವ ನಾವು ಜನರ ಪ್ರೀತಿ ವಿಶ್ವಾಸಗಳಿಸುವ ಕೆಲಸ ಮಾಡಬೇಕಾಗಿದೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು. ಮೇ 27ರಂದು ಕೊಕ್ಕಡದಲ್ಲಿ ನಡೆಯುವ ಎಂಡೋ ಹೋರಾಟಗಾರರ ಅಮರಣಾಂತ ಉಪವಾಸ ಮತ್ತು ಹೋರಾಟಕ್ಕೆ ಮಂಡಲದ ವತಿಯಿಂದ ಬೆಂಬಲ ನೀಡುವುದೆಂದು ನಿರ್ಣಯಿಸಲಾಯಿತು.
ಅಧ್ಯಕ್ಷತೆಯನ್ನು ಮಂಡಲಾಧ್ಯಕ್ಷ ರಂಜನ್ ಜಿ. ಗೌಡ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಪಕ್ಷದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಮಂಡ ಸಹ ಪ್ರಭಾರಿ ಭಾಗೀರಥಿ ಮುರುಳ್ಯ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಮಂಡಲ ಕಾರ್ಯದರ್ಶಿ ಸೀತಾರಾಮ ಬಿ.ಎಸ್. ಉಪಸ್ಥಿತರಿದ್ದರು. ಅಗಲಿದ ಅನಿಲ್ ನಾಯ್ಗ ಹಾಗೂ ಮತ್ತಿತರ ಪಕ್ಷದ ಕಾರ್ಯಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗಾಯತ್ರಿ ಆಠವಳೆ ವಂದೇ ಮಾತರಂ ಹಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿಉಪ್ಪಡ್ಕ ಸ್ವಾಗತಿಸಿದರು. ಜಯಂತ್ ಕೋಟ್ಯಾನ್ ವಂದಿಸಿದರು. ಭಾಸ್ಕರ ಸಾಲಿಯಾನ್ ಕಾರ್ಯಕ್ರಮ ನಿರ್ವಹಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.