ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಬಜಿಲುಮಾರುನಲ್ಲಿ ಮಹಿಳೆಯರಿಂದಲೇ ಕಿಂಡಿಅಣೆಕಟ್ಟು ನಿರ್ಮಾಣ : ಕಾಮಗಾರಿಗೆ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Charmadi kindi anekattu shilanyasaಚಾರ್ಮಾಡಿ : ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಬಜಿಲುಮಾರು ಎಂಬಲ್ಲಿ ರೂ.5 ಲಕ್ಷ ವೆಚ್ಚದಲ್ಲಿ ಊರಿನ ಮಹಿಳೆಯರೇ ಒಟ್ಟು ಸೇರಿ ಕಿಂಡಿಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದ್ದು, ಮೇ 18ರಂದು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ 2ನೇ ವಾರ್ಡ್‌ನಲ್ಲಿರುವ ಬಜಿಲುಮಾರ್ ತೋಡಿಗೆ ಈ ಕಿಂಡಿಅಣೆಕಟ್ಟು ನಿರ್ಮಾಣವಾಗಲಿದ್ದು, ಸಮಾರು 2 ಕಿ.ಮೀ ದೂರದವರೆಗೆ ಇದರ ನೀರು ಸಂಗ್ರಹವಾಗಲಿದೆ. ಸುಮಾರು 100 ಎಕರೆ ಕೃಷಿ ಪ್ರದೇಶಕ್ಕೆ ಇದರ ನೀರು ಉಪಯೋಗವಾಗಲಿದೆ ಎಂದು ಅಂದಾಜಿಸಲಾಗಿದೆ.
ಇದರ ವಿಶೇಷ ಎಂದರೆ ಊರಿನ ಮಹಿಳೆಯರೇ ಒಟ್ಟು ಸೇರಿ ಕಾಮಗಾರಿಯನ್ನು ನಿರ್ವಹಿಸಲಿದ್ದಾರೆ. ಜಿ.ಪಂ ಸದಸ್ಯೆ ನಮಿತಾ ತೆಂಗಿನ ಕಾಯಿ ಒಡೆಯುವ ಮೂಲಕ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಶುಭ ಕೋರಿದರು.
ಈ ಸಂದರ್ಭ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಎಂ.ಆರ್. ರವಿ ಅವರು ಮಾತನಾಡಿ, ಮಹಿಳೆಯರಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಲು ಜಿಲ್ಲೆಯಲ್ಲಿ ನಾಲ್ಕೈದು ಕಡೆಗಳಲ್ಲಿ ಮಹಿಳೆಯರಿಂದಲೇ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.
ಇದರಲ್ಲಿ ಚಾರ್ಮಾಡಿಯ ಈ ಕಿಂಡಿಅಣೆಕಟ್ಟು ಸೇರಿದೆ. ಭೂಮಿಗೆ ನೀರು ಇಂಗಿಸುವುದು, ಕೃಷಿ ಹಾಗೂ ಜಾನುವಾರು ಬಳಕೆಗೆ ಇದರ ಉಪಯೋಗವಾಗಬೇಕು, ಕಿಂಡಿಅಣೆಕಟ್ಟು ನಿರ್ಮಾಣಕ್ಕೆ ರೂ.5 ಲಕ್ಷ ನೀಡಲಾಗಿದೆ. ತಡೆಗೋಡೆಗೆ ಪ್ರತ್ಯೇಕ ಅನುದಾನ ನೀಡಲಾಗುವುದು. ಕಿಂಡಿಅಣೆಕಟ್ಟಿನ ಮೇಲೆ ಸಂಪರ್ಕಕ್ಕೆ ಅನುಕೂಲವಾಗಬೇಕು, ಕಾಮಗಾರಿ ಯಲ್ಲಿ ಗುಣಮಟ್ಟ ಕಾಯ್ದಕೊಳ್ಳಬೇಕು ಎಂದು ಸಲಹೆ ನೀಡಿದರು. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಸ್ವಸಹಾಯ ಸಂಘದ ಮೂಲಕ ವ್ಯಾಪಾರ, ವ್ಯವಹಾರ ನಡೆಸುವುದಾದರೆ ಜಿ.ಪಂ.ದಿಂದ ವರ್ಕ್ ಶೆಡ್ ನಿರ್ಮಾಣಕ್ಕೆ ರೂ.13ಲಕ್ಷ ಅನುದಾನ ಮಂಜೂರು ಗೊಳಿಸುವುದಾಗಿ ಭರವಸೆಯಿತ್ತರು.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಕೊರಗಪ್ಪ ಗೌಡ, ಗ್ರಾ.ಪಂ. ಅಧ್ಯಕ್ಷೆ ಶೈಲಜಾ, ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ಉಮೇಶ್ ಗೌಡ, ರವಿ ಪೂಜಾರಿ, ಕೇಶವತಿ, ಗೋಪಾಲಕೃಷ್ಣ, ಸುರೇಶ್ ಗೌಡ, ಜಿ.ಪಂ. ಉಪಕಾರ್ಯದರ್ಶಿ ಉಮೇಶ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ, ವಿಭಾಗೀಯ ಅಭಿಯಂತರ ರವೀಂದ್ರ ಕಿಣಿ, ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ್, ಡಿಹೆಚ್‌ಒ ಡಾ| ರಾಮಕೃಷ್ಣ, ಯೋಜನಾ ಸಮನ್ವಯಾಧಿಕಾರಿ ಸುಂದರ ಪೂಜಾರಿ, ತಾ.ಪಂ. ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ಮಹಿಳೆಯರು, ಊರಿನ ನಾಗರಿಕರು ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.