ಎಸ್‌ಡಿಎಂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಾಧನೆ ಅಡಿಕೆ ಮರ ಹತ್ತುವ ಮತ್ತು ಔಷಧಿ ಸಿಂಪಡಿಸುವ ಯಂತ್ರ ಆವಿಷ್ಕಾರ

Advt_NewsUnder_1
Advt_NewsUnder_1
Advt_NewsUnder_1

adike mara yanthra copyಉಜಿರೆ: ಇಲ್ಲಿನ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಕೃಷಿ ಕೆಲಸಕ್ಕೆ ಪೂರಕವಾಗಿರುವ ಮತ್ತು ಅತ್ಯಂತ ಕಡಿಮೆ ದರದಲ್ಲಿ ಬಳಕೆ ಮಾಡಬಹುದಾದ ರೀತಿಯ ಕೆಲವೊಂದು ಯಂತ್ರೋಪಕರಣಗಳನ್ನು ತಮ್ಮದೇ ಕಲ್ಪನೆಯಲ್ಲಿ ಆವಿಷ್ಕರಿಸಿದ್ದು ಉತ್ತಮ ಮಾರುಕಟ್ಟೆ ಕೇಂದ್ರೀಕರಿಸುವ ಎಲ್ಲಾ ಅರ್ಹತೆಗಳನ್ನು ಪಡೆದುಕೊಂಡಿದೆ.
ವಿದ್ಯಾರ್ಥಿಗಳು ತಯಾರುಗೊಳಿಸಿದ ಕೆಲವೊಂದು ಆವಿಷ್ಕಾರಗಳಲ್ಲಿ ಅಡಿಕೆ ಮರಕ್ಕೆ ಹತ್ತುವ ಮತ್ತು ಔಷಧಿ ಸಿಂಪಡಿಸುವ ಯಂತ್ರವೂ ಒಂದು.
ಈ ಪ್ರಾಜೆಕ್ಟ್‌ಗೆ ಕೇವಲ 10 ಸಾವಿರ ರೂ. ಗಳು ಮಾತ್ರ ಖರ್ಚು ತಗುಲಲಿದೆ.
ಆವಿಷ್ಕಾರ ತಂಡದ ಸದಸ್ಯ ವಿದ್ಯಾರ್ಥಿಗಳು ಯಾರ‍್ಯಾರು?
ಭರತ್ ಎಚ್, ಅಕಾಶ್ ಕೆ, ಅಶ್ವಿನಿ, ದರ್ಶನ್ ಕುಮಾರ್, ದಿವ್ಯಾ ಎಸ್, ಮತ್ತು ಉತ್ತಮ್ ಎನ್ ಇವರ ತಂಡ ಈ ಆವಿಷ್ಕಾರ ನಡೆಸಿ ಯಶಸ್ಸು ಸಾಧಿಸಿದೆ. ಇವರಿಗೆ ಅವನೀಶ್ ಅವರು ಮಾರ್ಗದರ್ಶನ ನೀಡಿದ್ದಾರೆ. ಈ ಯಂತ್ರವು ಸುಲಭವಾಗಿ ಅಡಿಕೆ ಮರ ಹತ್ತಲು ಮತ್ತು ಅಡಿಕೆ ಬೆಳೆಗೆ ಕೀಟ ನಾಶಕ ಸಿಂಪಡಿಸಲು ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ.
ಉಪಯೋಗಗಳು:
ಇಂದಿನ ದಿನಗಳಲ್ಲಿ ಅಡಿಕೆ ಮರಕ್ಕೆ ಮದ್ದನ್ನು ಸಿಂಪಡಿಸುವುದು ಕಷ್ಟವಾಗಿದೆ. ಅದನ್ನು ಅರಿತು ಈ ಯಂತ್ರ ಸಿದ್ದಪಡಿಸಲಾಗಿದೆ. 12 ವೋಲ್ಟ್ ವೈಪರ್ ಮೋಟಾರು ಬಳಸಿಕೊಂಡು ಮೇಲಕ್ಕೆ ಹತ್ತುವ ಅತ್ಯಂತ ಸರಳ ಮಾದರಿಯಿಂದ ರೂಪಿತವಾಗಿದೆ. ಕೇಲವ ಎರಡೇ ನಿಮಿಷದಲ್ಲಿ ಅಡಿಕೆ ಮರ ಏರುವ ಸಾಮರ್ಥ್ಯ ಹೊಂದಿರುವ ಈ ಯಂತ್ರ ಡಿ.ಸಿ ಮೋಟರನ್ನು ಬಳಸಿ ಲಂಬವಾಗಿ ಮತ್ತು ಅಡ್ಡವಾಗಿ, ಒಂದು ಅಡಿಕೆ ಮರ ಕೇಂದ್ರೀಕರಿಸಿ ಪಕ್ಕದ 7-8 ಮರಗಳಿಗೆ ಕೀಟನಾಶಕ ಸಿಂಪಡಿಸುವ ಸಾಮರ್ಥ್ಯ ಹೊಂದಿದೆ.
ಸೆಲ್ಫ್ ಲುಕ್ಕಿಂಗ್ ನಿಯಮದ ಪ್ರಕಾರ ಕಾರ್ಯನಿರ್ವಹಿಸುವ ಈ ಯಂತ್ರವು ಪರಿಸರ ಸ್ನೇಹಿಯಾಗಿದ್ದು 12 ವೋಲ್ಟೇಜ್ ಬ್ಯಾಟರಿ ಮೂಲಕವೂ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ. ಕೇವಲ ಎರಡೇ ಸೆಕುಂಡುಗಳಲ್ಲಿ ಮರಕ್ಕೆ ಯಂತ್ರವನ್ನು ಅಳವಡಿಸಬಹುದಾಗಿದೆ. ಯಂತ್ರಕ್ಕೆ ನೆಲದಿಂದ ಕೀಟ ನಾಶಕವನ್ನು ಪವರ್ ಸ್ಪ್ರೇಯರ್ ಅಥವಾ ಗಟರ್ ಪಂಪ್‌ನ ಮೂಲಕ ಪೈಪ್‌ಮೂಲಕ ಕಳುಹಿಸಿಕೊಡಬಹುದಾಗಿದೆ. ಇದರ ನಿಯಂತ್ರಣವನ್ನು ಕೇವಲ ಒಬ್ಬನೇ ವ್ಯಕ್ತಿ ಮಾಡಬಹುದಾಗಿದ್ದು, ಅಡಿಕೆ ಕೃಷಿ ಕ್ಷೇತ್ರದಲ್ಲಿ ಬಹಳ ಬೇಡಿಕೆಯ ಕೂಲಿ ಕಾರ್ಮಿಕರ ಕೊರತೆಯ ಜಾಗವನ್ನು ಈ ಯಂತ್ರ ತುಂಬುವುದರಲ್ಲಿ ಸಂದೇಹವಿಲ್ಲ.
ಇದೇ ಯಂತ್ರದ ಮೂಲಕ ಮುಂದಕ್ಕೆ ಗೊನೆ ಕೀಳುವುದು ಮತ್ತು ಕಂಪ್ಯೂಟರೀಕೃತವಾಗಿ ಅಭಿವೃದ್ಧಿ ಪಡಿಸುವ ಉದ್ಧೇಶವಿದೆ ಎಂದು ಪ್ರಾಧ್ಯಾಪಕರಾದ ಅವನೀಶ್ ಅವರು ತಿಳಿಸುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.