ವೇಣೂರು: ಧಾರ್ಮಿಕ-ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಶಿಬಿರಗಳಲ್ಲಿ ಆಧ್ಯಾತ್ಮಿಕ ಚಿಂತನೆ ನಡೆಯಲಿ: ಚಾರುಕೀರ್ತಿ ಶ್ರೀ

Advt_NewsUnder_1
Advt_NewsUnder_1
Advt_NewsUnder_1

venur vikasana shibira samaropa copyವೇಣೂರು: ಶಿಬಿರಗಳಲ್ಲಿ ತತ್ವ ಸಿದ್ದಾಂತ ಮುಖ್ಯ. ಆದ್ಯಾತ್ಮಿಕ ಚಿಂತನೆಯನ್ನು ವಿಕಸನಗೊಳಿಸುವುದು ಇದರ ಮೂಲ ಧ್ಯೇಯವಾಗಬೇಕೆ ಹೊರತು ಮನೋರಂಜನೆ ಆಗಬಾರದು. ಇಂತಹ ಧಾರ್ಮಿಕ ಶಿಬಿರಗಳಲ್ಲಿ ಮಠ, ಮಠಾಧೀಶರ ಪರಿಚಯ ಮೂಡಿಸುವುದ ಜೊತೆಗೆ ಅಲ್ಲಿಗೆ ಭೇಟಿ ನೀಡುವುದಕ್ಕೆ ಪ್ರೇರಣೆಯಾಗಲಿ ಎಂದು ಮೂಡಬಿದಿರೆ ಜೈನ ಮಠದ ಭಾರತ ಭೂಷಣ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ನುಡಿದರು.
ಅವರು ಎ.16 ರಂದು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಇಲ್ಲಿಯ ಬಾಹುಬಲಿ ಯುವಜನ ಸಂಘ ಮತ್ತು ಶ್ರೀ ದಿಗಂಬರ ತೀರ್ಥ ಕ್ಷೇತ್ರ ಸಮಿತಿ ಆಶ್ರಯದಲ್ಲಿ ಜರಗಿದ ಜೈನ ಬಾಲಕ-ಬಾಲಕಿಯರ 17ನೇ ವರ್ಷದ ಧಾರ್ಮಿಕ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮಠಗಳ ಬಗ್ಗೆ ಗುರು ಹಾಗೂ ಪರಂಪರೆಯನ್ನು ವಿರೋಧ ಕಟ್ಟಿಕೊಂಡು ಅಂತರ್ಜಾಲಗಳಲ್ಲಿ ಚರ್ಚೆ ನಡೆಯುತ್ತಿರುವುದು ಬೇಸರ ಸಂಗತಿ. ಮಕ್ಕಳಿಗೆ ಮಠ, ಮಠಾಧೀಶರ ಪರಿಚಯ ಮಾಡಿಸಬೇಕು. ಇದು ಅವರು ಧರ್ಮ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಎನ್. ದಿನೇಶ್ ಚೌಟ ಮಾತನಾಡಿ, ಭಾಷೆಯ ಬಗ್ಗೆ ಸಂವಹನಶೀಲತೆ ಬೆಳೆಸಿ ಕೊಂಡವರಿಗೆ ಸಮಾಜದಲ್ಲಿ ಮಾನ್ಯತೆ ಜಾಸ್ತಿ. ಅದು ಇಂತಹ ಶಿಬಿರಗಳು ತಿಳಿಸುತ್ತದೆ. ಇಂದು ಜೈನ ಧರ್ಮೀಯರು ಬೇರೆ ಧರ್ಮದತ್ತ ವಾಲುತ್ತಿದ್ದಾರೆ. ಇದಕ್ಕಾಗಿ ಮಕ್ಕಳಿರುವಾಗಲೇ ಅವರಿಗೆ ಜೈನ ಧರ್ಮ ತತ್ವ ಸಿದ್ದಾಂತಗಳನ್ನು ಮೂಡಿಸಬೇಕಾಗಿದೆ ಎಂದರು.
ಶಿಬಿರದ ನಿರ್ವಾಹಕ ಮುನಿರಾಜ ರೇಂಜಾಳ ಮಾತನಾಡಿ, ಜೈನರ ಬಗೆಗಿನ ತತ್ವ ಸಿದ್ದಾಂತಗಳನ್ನು ಇಂತಹ ಧಾರ್ಮಿಕ ಶಿಬಿರಗಳಿಂದ ಮಾತ್ರ ಕಲಿಯಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಮಾಣಿ ಶ್ರೀ ಮಹಾವೀರ ಇಂಡಸ್ಟ್ರೀಸ್‌ನ ಮಹಾವೀರ ಪ್ರಸಾದ್, ಮೂಡಬಿದಿರೆ ಪಂಡಿತ್ ರೆಸಾರ್ಟ್‌ನ ರಜನಿಲಾಲ್ ಗೋಯಲ್ ಜೈನ್, ಶಿಬಿರದ ಸಂಚಾಲಕ ಜ್ಞಾನಚಂದ್ರ, ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ, ಶ್ರೀ ಬಾಹುಬಲಿ ಯುವಜನ ಸಂಘದ ಅಧ್ಯಕ್ಷ ಶರ್ಮಿತ್ ಕುಮಾರ್ ವೇದಿಕೆಯಲ್ಲಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಯೋಗರಾಜ ಶಾಸ್ತ್ರಿ ಕಾರ್ಕಳ, ನವೀನ್ ಕುಮಾರ್ ಜೈನ್, ಉದಯ ಕುಮಾರ್, ಮಂಜುಳಾ, ಅಜಿತ್ ಕುಮಾರ್, ನಿರಂಜನ ಎ., ಶಾಂತಿರಾಜ ಜೈನ್, ಮಹಾವೀರ ಜೈನ್, ಕು| ಅಶ್ವಿನಿ ಜೈನ್ ಶಿಬಿರವನ್ನು ನಡೆಸಿಕೊಟ್ಟರು. ೪ ದಿನಗಳ ಕಾಲ ಜರಗಿದ ಶಿಬಿರದಲ್ಲಿ ೭೨ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಕು| ಪೂರ್ಣಿಮಾ ಬಳಗ ಪ್ರಾರ್ಥಿಸಿ ಪ್ರಮೋದ್ ಕುಮಾರ್ ಬಜಿರೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಿರಂಜನ ಅಳಿಯೂರು ಕಾರ್ಯಕ್ರಮ ನಿರೂಪಿಸಿ, ಸುಧೀರ್ ಕುಮಾರ್ ಬಜಿರೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.