ವೀರಕೇಸರಿಯಿಂದ ಇಬ್ಬರ ಚಿಕಿತ್ಸೆಗೆ ರೂ.30 ಸಾವಿರ ಸಹಾಯ

Advt_NewsUnder_1
Advt_NewsUnder_1
Advt_NewsUnder_1

Veerakesari sahayadana copyಕನ್ಯಾಡಿ ||: ವೀರಕೇಸರಿ ಧರ್ಮಸ್ಥಳ ಬೆಳ್ತಂಗಡಿ ಹಾಗೂ ಶ್ರೀ ಶನೈಶ್ಚರ ಪೂಜಾ ಸಮಿತಿ ಕನ್ಯಾಡಿ || ಇದರ ಸಹಯೋಗದೊಂದಿಗೆ ಎ.15ರಂದು ಹಿ.ಪ್ರಾ ಶಾಲಾ ಮೈದಾನ ಕನ್ಯಾಡಿ || ಇಲ್ಲಿ ಜರುಗಿದ 6ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೋತ್ಸವ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ 27ನೇ ಸೇವಾಯೋಜನೆಯಾಗಿ ನಿಡ್ಲೆ ಸ.ಹಿ.ಪ್ರಾ. ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪದ್ಮರಾಜ್ ಇವರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ರೂ. 15 ಸಾವಿರದ ಚೆಕ್ಕನ್ನು ಆತನ ತಾಯಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ 28ನೇ ಯೋಜನೆಯಾಗಿ ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡಿರುವ ಪೂರ್ಣೇಶ ಅವರ ಚಿಕಿತ್ಸೆಗೆ 15ಸಾವಿರ ರೂಗಳ ಚೆಕ್ಕನ್ನು ನೀಡಲಾಯಿತು. ವೀರಕೇಸರಿ ಬೆಳ್ತಂಗಡಿಯ ಮಾಸಿಕ ಸೇವಾ ಯೋಜನೆಯಂತೆ ಎಪ್ರಿಲ್ ತಿಂಗಳಲ್ಲಿ ಎರಡು ಸೇವಾ ಯೋಜನೆಯನ್ನು ಯಶಸ್ವಿಯಾಗಿ ತಲುಪಿದ್ದು 11 ತಿಂಗಳಲ್ಲಿ 28 ಸೇವಾ ಯೋಜನೆ ಮೂಲಕ 28 ಕುಟುಂಬಗಳಿಗೆ ಆಸರೆಯಾಗಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಇದೀಗ ತಾಲೂಕಿನ ದೊಡ್ಡ ಸಂಘಟನೆಯಾಗಿ ಬೆಳೆದಿರುವ ವೀರಕೇಸರಿ ತಂಡ ಪ್ರತಿಯೊಬ್ಬ ಸದಸ್ಯನ ನೆರವಿನಿಂದ ಪ್ರತಿ ತಿಂಗಳು ಸೇವಾಯೋಜನೆಗಳನ್ನು ಮಾಡಿ ಸಮಾಜಸೇವೆಯಲ್ಲಿ ಅಗ್ರಮಾನ್ಯ ಸಂಘಟನೆಯಾಗಿ ಮುನ್ನುಗ್ಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.