ಪೆರಣಮಂಜ ಶ್ರೀ ಮೂಜಿಲ್ನಾಯ ಬ್ರಹ್ಮ ದೈವಸ್ಥಾನ ಬ್ರಹ್ಮಕಲಶೋತ್ಸವ ಶ್ರದ್ಧಾ ಕೇಂದ್ರಗಳಿಂದ ಆತ್ಮ ಶಕ್ತಿಯ ಜಾಗೃತಿ: ಪ್ರತಾಪಸಿಂಹ ನಾಯಕ್

Peranamanja sabhe prathapasimha copyಪಡಂಗಡಿ : ಮನಸ್ಸು ಸ್ಥಿರವಾದಾಗ ಜಗತ್ತಿನ ಸತ್ಯ ಅರಿವಾಗುತ್ತದೆ. ಇದಕ್ಕಾಗಿ ನಮ್ಮ ಹಿರಿಯರು ಇಂತಹ ಶ್ರದ್ಧಾಕೇಂದ್ರಗಳನ್ನು ನಿರ್ಮಿಸಿದ್ದಾರೆ. ಆತ್ಮ ಶಕ್ತಿಯನ್ನು ಜಾಗೃತ ಮಾಡುವ ಸ್ಥಳಗಳೇ ದೇವಸ್ಥಾನ, ದೈವಸ್ಥಾನಗಳಾಗಿವೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಎ.13ರಂದು ಪಡಂಗಡಿ ಗ್ರಾಮದ ಪೆರಣಮಂಜು ಶ್ರೀ ಮೂಜಿಲ್ನಾಯ ಬ್ರಹ್ಮ ದೈವಸ್ಥಾನ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನುಷ್ಯನಿಗೆ ಭೌತಿಕ ಸುಖ ಮುಖ್ಯವಲ್ಲ, ಆಧ್ಯಾತ್ಮಿಕ ಸುಖ ಮಾತ್ರ ನಮ್ಮನ್ನು ಮೋಕ್ಷದೆಡೆಗೆ ಸಾಗಿಸಬಹುದು. ಅಂತಹ ಸುಖವನ್ನು ನೀಡುವ ದೈವ, ದೇವರ ನಾಡಾದ ಭಾರತ ಒಂದು ದಿನ ಜಗತ್ತಿಗೆ ವಿಶ್ವಗುರುವಾಗಿ ನಿಲ್ಲಲಿದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇದ್ದ ಯೋಗ ಇಂದು ವಿಶ್ವದೆಲ್ಲೇಡೆ ಪಸರಿಸಿದೆ. ಭಗವಂತನ ಸಾಕ್ಷಾತ್ಕಾರಕ್ಕೆ ಯೋಗ ಸುಲಭ ಮಾರ್ಗವಾಗಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಮೈಸೂರು ಮಾನಸ ಗಂಗೋತ್ರಿಯ ಪ್ರೊ| ಸುರೇಶ್ ಪಡಿವಾಳ್ ಮನಸ್ಸು, ವಚನ, ಕಾಯಗಳ ಜೊತೆ ಆತ್ಮ ಸಂಯೋಜನೆಗೊಂಡು ನಮ್ಮ ದೇಹದ ಚೇತನ ಕ್ರಿಯೆ ನಡೆದಾಗ ನಾವು ತಿಳಿಯುವ, ನೋಡುವ ಕ್ರಿಯೆ ನಡೆಯುತ್ತದೆ. ನಮ್ಮಲ್ಲಿರುವ ಅರಿಷಡ್ವರ್ಗಗಳು ನಿವಾರಣೆಯಾಗಲು ಇಂತಹ ಧಾರ್ಮಿಕ ಕೇಂದ್ರಗಳಿಗೆ ಬಂದು, ಧರ್ಮ ಕ್ರಿಯೆ ಮೂಲಕ ಆತ್ಮೋನ್ನತಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ ಬೆಳ್ತಂಗಡಿ ವಿನಾಯಕ ರೈಸ್‌ಮಿಲ್‌ನ ಮಾಲಕ ರೋ| ಶ್ರೀಕಾಂತ ಕಾಮತ್ ಮಾತನಾಡಿ, ಊರಿನ ದೇವಸ್ಥಾನ, ದೈವಸ್ಥಾನಗಳು ಜೀರ್ಣೋದ್ಧಾರ ಹೊಂದಿದಾಗ ಊರಿನ ಅಭಿವೃದ್ಧಿಯ ಜೊತೆ ಸಮಾಜದ ಪ್ರಗತಿಯಾಗುತ್ತದೆ. ನಾವು ನಂಬಿಕೊಂಡು ಬಂದಂತಹ ಶ್ರದ್ಧಾಕೇಂದ್ರಗಳು ಅವನತಿಗೊಂಡಾಗ ನಮ್ಮ ಜೀವನದ ಮೇಲೂ ಪರಿಣಾಮಗಳಾಗುತ್ತದೆ. ಅವುಗಳ ಪ್ರಗತಿಯಾದಾಗ ನಮ್ಮ ಜೀವನದಲ್ಲೂ ಉನ್ನತಿಯನ್ನು ಕಾಣಬಹುದು ಎಂದು ತಿಳಿಸಿದರು.
ಉದ್ಯಮಿ ಉದಯ ಶೆಟ್ಟಿ ಕಾಂತವರ ಮಾತನಾಡಿ ಇಂದಿನ ವೈಜ್ಞಾನಿಕ ಯುಗದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳ ಅರಿವು ಮೂಡಿಸುವುದು ಅವಶ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕ್ಷೇತ್ರ ನಿರ್ಮಾಣಕ್ಕೆ ಸಹಕಾರ ನೀಡಿದ ಸ್ವಸ್ತಿಕ್ ಪಡಂಗಡಿಯ ಸಂಪತ್ ಕುಮಾರ್ ಕುಟುಂಬಸ್ಥರನ್ನು ಹಾಗೂ ನವೀನ್‌ಚಂದ್ ಬಲ್ಲಾಳ್, ಉದಯ ಶೆಟ್ಟಿ ಕಾಂತಾವರ ಇವರನ್ನು ದೇವಸ್ಥಾನದ ವತಿಯಿಂದ ಅಭಿನಂದಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್ ನಡಿಬೆಟ್ಟುಗುತ್ತು ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಆಡಳಿತ ಮೊಕ್ತೇಸರ ನೇಮಿರಾಜ್ ಶೆಟ್ಟಿ ನಡಿಬೆಟ್ಟು ಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎಸ್. ಜಯರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಾಂತಿರಾಜ ಜೈನ್ ಅಮೃತ, ಕಾರ್ಯದರ್ಶಿ ಜಗದೀಶ್ ಪೈ ಮೂಜುರು, ಕೋಶಾಧಿಕಾರಿ ವಾiನ ಬಾಳಿಗ ಉಪಿಸ್ಥಿತರಿದ್ದರು. ಸಂಜನಾ ಎಸ್.ಜೈನ್ ಇವರ ಪ್ರಾರ್ಥನೆ ಬಳಿಕ ಶ್ರೀಮತಿ ಉಷಾರಾಣಿ ನಡಿಬೆಟ್ಟುಗುತ್ತು ಸ್ವಾಗತಿಸಿದರು. ಪುಂಜಾಲಕಟ್ಟೆ ಶಾಲಾ ಶಿಕ್ಷಕ ಲ| ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರೂಪಿಸಿ, ಎಸ್‌ಕೆಡಿಆರ್‌ಡಿಪಿ ತುಮಕೂರಿನ ಯೋಜನಾಧಿಕಾರಿ ಪ್ರಶಾಂತ್ ಗೌಡ ವಂದಿಸಿದರು. ಬಳಿಕ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ‘ಗೀತ ಸಾಹಿತ್ಯ ಸಂಭ್ರಮ’ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.