ರಾಜ್‌ಕೇಸರಿ ಹುಣ್ಸೆಕಟ್ಟೆ ಪ್ರಥಮ ವಾರ್ಷಿಕೋತ್ಸವ

Advt_NewsUnder_1
Advt_NewsUnder_1
Advt_NewsUnder_1

rajkesri varshikothsava copyಬೆಳ್ತಂಗಡಿ : ರಾಜ್‌ಕೇಸರಿ ಹುಣ್ಸೆಕಟ್ಟೆ ಇದರ ಪ್ರಥಮ ವಾರ್ಷಿಕೋತ್ಸವ ಮತ್ತು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಎ. 15 ರಂದು ಹುಣ್ಸೆಕಟ್ಟೆ ಶಾಲಾ ಮೈದಾನದಲ್ಲಿ ಅದ್ದೂರಿಯಾಗಿ ಜರುಗಿತು. ತಿಮರೋಡಿ ಬೀಡಿನ ಧರ್ಮಾಧಿಕಾರಿ ಮಹೇಶ್ ಶೆಟ್ಟಿ ತಿಮರೋಡಿ ಕಾರ್ಯಕ್ರಮ ಉದ್ಘಾಟಿಸಿದರು. ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆ, ಡೇಸಾ ಎಂಟರ್‌ಪ್ರೈಸಸ್ ಮಾಲಕ ಜರ್ಮಿ ಡೇಸಾ, ಸುದ್ದಿ ಬಿಡುಗಡೆ ವರದಿಗಾರ ಅಶ್ರಫ್ ಮುಂಡಾಜೆ, ವಾಮದಪದವು ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರವಿ ಎಂ. ಎನ್, ಪಪ್ಪು ಸೌಂಡ್ಸ್ ಮಾಲಕ ಶಬೀರ್, ಗಣೇಶ್ ಟ್ರೇಡರ‍್ಸ್ ಮಾಲಕ ಸತೀಶ್ ರೈ ಪುಂಡಿಕುಕ್ಕು, ಹುಣ್ಸೆಕಟ್ಟೆ ಶಾಲಾ ಶಿಕ್ಷಕ ಕರಿಯಪ್ಪ ಇವರುಗಳು ಮುಖ್ಯ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ರಾಜ್‌ಕೇಸರಿ ಹುಣ್ಸೆಕಟ್ಟೆ ಸ್ಥಾಪಕಾಧ್ಯಕ್ಷ ದೀಪಕ್ ಜಿ, ಪ್ರಸ್ತುತ ಅಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಅಭಿಲಾಷ್, ಕೋಶಾಧಿಕಾರಿ ನಿತಿನ್ ಡಿ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಸಹಾಯಧನ ಹಸ್ತಾಂತರ: ಎಂಡೋ ಸಲ್ಫಾನ್ ಪೀಡಿತ ಇಬ್ಬರು ಫಲಾನುಭವಿಗಳಿಗೆ ಮತ್ತು ವಿಕಲಾಂಗ ಅಸಹಾಯಕರೊಬ್ಬರಿಗೆ ಆರ್ಥಿಕ ಸಹಾಯಧನವನ್ನು ವೇದಿಕೆಯಲ್ಲೇ ವಿತರಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ ಸ್ಥಳೀಯ ಶಾಲಾ ಮಕ್ಕಳಿಂದ ಮತ್ತು ಊರವರಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಭಾ ಕಾರ್ಯಕ್ರಮದ ಬಳಿಕ ಪೃಥ್ವಿ ಸಂಗೀತ ಲಹರಿ ಮುಂಡಾಜೆ ಅರ್ಪಿಸುವ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಸಂಗೀತ ರಸಮಂಜರಿ, ಮಿಮಿಕ್ರಿ, ಹಾಸ್ಯ ಲಾಸ್ಯ ಹಾಗೂ ನೃತ್ಯ ವೈಭವ ಕಾರ್ಯಕ್ರಮಗಳು ನಡೆದವು. ತಾ| ಸಂಚಾಲಕ ಪ್ರದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.