ಮಠ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಕಡಿರುದ್ಯಾವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ರಂಜನ್ ಜಿ. ಗೌಡ, ಕಾರ್ಯಾಧ್ಯಕ್ಷರಾಗಿ ಅಶೋಕ್ ಕುಮಾರ್ ಮಠ

suddi blt   19  page color copyಕಡಿರುದ್ಯಾವರ: ಮಠ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಕಡಿರುದ್ಯಾವರ ಇದರ ಸುವರ್ಣ ಮಹೋತ್ಸವ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷರು, ಯುವ ಉದ್ಯಮಿ ಹಾಗೂ ಪ್ರಸನ್ನ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿಯೂ ಆಗಿರುವ ರಂಜನ್ ಜಿ ಗೌಡ ಅವರು ಆಯ್ಕೆಯಾಗಿದ್ದಾರೆ. ಎ. 13 ರಂದು ಶ್ರೀ ಕ್ಷೇತ್ರದ ಸಭಾಭವನದಲ್ಲಿ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರರು ಹಾಗೂ ಊರ ಗಣ್ಯರ ಸಮ್ಮುಖದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆಯನ್ನು ಪ್ರಕಟಿಸಲಾಯಿತು. ಅಂತೆಯೇ ಗೌರವಾಧ್ಯಕ್ಷರಾಗಿ ಉಜಿರೆಯ ಹಿರಿಯ ಉದ್ಯಮಿ ಹಾಗೂ ಸಾಮಾಜಿಕ ಮುಂದಾಳು ಸುಬ್ರಾಯ ಶೆಣೈ, ಕಾರ್ಯಾಧ್ಯಕ್ಷರಾಗಿ ಅಶೋಕ್ ಕುಮಾರ್ ಮಠ, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಗಣೇಶ್ ಗೌಡ ಬರಮೇಲು, ಜೊತೆ ಕಾರ್ಯದರ್ಶಿಯಾಗಿ ಸುಧೀರ್ ವಳಂಬ್ರ, ಕೋಶಾಧಿಕಾರಿಯಾಗಿ ಆನಂದ ಗೌಡ ಬಿ. ಎ ಬರಮೇಲು ಇವರು ಆಯ್ಕೆಯಾಗಿ ದ್ದಾರೆ. ಸಮಿತಿಯಲ್ಲಿ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಕಿಶೋರ್ ಕುಮಾರ್ ವಳಂಬ್ರ ಅವರು ಇರಲಿದ್ದಾರೆ.  ಸಮಿತಿಯ ಉಪಾಧ್ಯಕ್ಷರುಗಳಾಗಿ ಸೂರಜ್ ಅಡೂರು, ಸೂರಜ್ ಕುಮಾರ್ ವಳಂಬ್ರ, ಸತೀಶ್ ಕಾಮತ್ ಕಡಿರುದ್ಯಾವರ, ಯೋಗೀಶ್ ಕುಮಾರ್ ಸಿರಿಬೈಲು, ವಿನಾಯಕ ಪ್ರಭು ಆಲಂದಡ್ಕ, ಸತೀಶ್ ಗೌಡ ಬೆದ್ರಬೆಟ್ಟು, ವಾಸುದೇವ ರಾವ್ ಕಕ್ಕೆನೇಜಿ, ಮುರಳೀಧರ ನಾಯಕ್ ಹೇಡ್ಯ, ಜಯರಾಜ್ ಸಾಲಿಯಾನ್ ಕಾನರ್ಪ, ಜಲಜಾಕ್ಷಿ ಅಗರಿಮಾರು. ಸಂದೀಪ್, ಗೋವಿಂದ ನಾಯ್ಕ ಅರಮನೆಹಿತ್ಲು, ಸಂಜೀವ ಗೌಡ ವಳಂಬ್ರ, ಉಷಾಲಕ್ಷ್ಮಣ ಗೌಡ ವಳಂಬ್ರ, ಟಿ. ಜಿ ಮುಡೂರು ಪಂಜ, ಬಿ. ಕೆ ಸುಬ್ಬರಾವ್ ಕುದ್ರೋಳಿ, ಬಾಲಕೃಷ್ಣ ಗೌಡ ಮಾವಿನಕಟ್ಟೆ, ಬಿ. ಎಲ್ ಲೋಹಿತ್ ಗೌಡ ಬಿದರಹಳ್ಳಿ, ಅಚ್ಚುತ ಗೌಡ ಮುಂಡೋಡಿ, ಹರಿಪ್ರಸಾದ್ ಅಡ್ತಲೆ, ಗೌರವ ಸಲಹೆಗಾರರಾಗಿ ಎಸ್.ಎಂ ಪ್ರಸಾದ್ ಮುನಿಯಂಗಳ (ವಾಸ್ತು ಸಲಹೆಗಾರರು), ಚಿತ್ತರಂಜನ್ ಮೇಲ್ವಿಚಾರಕರು ಗ್ರಾ. ಯೋ ಚಾರ್ಮಾಡಿ ವಲಯ, ಮಂಜುನಾಥ ಕಾಮತ್ ಕಡಿರುದ್ಯಾವರ, ಗೋಪಾಲ ಗೌಡ ಕಿನ್ನಿಮಜಲು, ಬಾಬು ನಾಯ್ಕ ಕಂಚಲ್‌ಗದ್ದೆ, ಡೊಂಬ ಗೌಡ ಅಡ್ಕದಕರೆ, ರಾಧಾಕೃಷ್ಣ ವಳಂಬ್ರ, ಗುಮ್ಮಣ್ಣ ಗೌಡ ಶೆಟ್ಟಿಹಿತ್ಲು, ಬಾಬು ಗೌಡ ಕೊಲ್ಪೆ, ಅಣ್ಣು ಗೌಡ ಕೊಂದೋಡಿ, ಶೀನಪ್ಪ ಗೌಡ ಕುಕ್ಕುದಡಿ ಮತ್ತು ಐತಪ್ಪ ಮಲೆಕುಡಿಯ ಮಲ್ಲಡ್ಕ ಇವರು ಆಯ್ಕೆಯಾಗಿದ್ದಾರೆ. ಆರ್ಥಿಕ ಸಮಿತಿ ಅಧ್ಯಕ್ಷರಾಗಿ ಸುಧೀರ್ ವಳಂಬ್ರ, ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಮಠ, ಮೋಹನ ಗೌಡ ಬಾಯ್ತ್ಯಾರು, ಗೋಪಾಲ ಗೌಡ ಉದ್ದಾರ, ನಾರಾಯಣ ಗೌಡ ದೇವಸ್ಯ,ಮತ್ತು ಶ್ರೀನಿವಾಸ ಗೌಡ ವಳಂಬ್ರ ಇವನ್ನು ಆರಿಸಲಾಯಿತು. ಉಳಿದಂತೆ ವಿವಿಧ ಉಪಸಮಿತಿಗಳನ್ನು ಆರಿಸಿ ಅದಕ್ಕೆ ಒಬ್ಬರಂತೆ ಸಂಚಾಲಕರನ್ನಾಗಿ ಗುರುತಿಸಲಾಯಿತು.  ಈಗಾಗಲೇ ಅಸ್ತಿತ್ವಕ್ಕೆ ಬಂದಿರುವ ಜೀರ್ಣೋದ್ದಾರ ಸಮಿತಿಯು ತನ್ನ ಜವಾಬ್ಧಾರಿಯನ್ನು ನಿರ್ವಹಿಸುತ್ತಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.