ಸೌತಡ್ಕ ವ್ಯವಸ್ಥಾಪನಾ ಸಮಿತಿಯವರು ಡಾ. ಹೆಗ್ಗಡೆ ಭೇಟಿ

dharmsthala beti sowthadka copyಕೊಕ್ಕಡ : ಕೊಕ್ಕಡದ ಶ್ರೀ ಕ್ಷೇತ್ರ ಸೌತಡ್ಕ ಶ್ರೀ ಮಹಾಗಣಪತಿ ದೇವಳಕ್ಕೆ ನೂತನ ವ್ಯವಸ್ಥಾಪನಾ ಸಮಿತಿಯು ಧಾರ್ಮಿಕ ದತ್ತಿ ಇಲಾಖೆಯಿಂದ ಆಯ್ಕೆಗೊಂಡಿದ್ದು ಸಮಿತಿಯ ಸದಸ್ಯರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಎ.15 ರಂದು ಭೇಟಿ ಮಾಡಿದರು.
ಮುಂದಿನ ಆಡಳಿತಾವಧಿಯಲ್ಲಿ ಕ್ಷೇತ್ರದ ನಿರ್ವಹಣೆಗೆ ಶ್ರೀ ಧರ್ಮಸ್ಥಳ ಕ್ಷೇತ್ರದಿಂದ ಸಲಹೆ ಸೂಚನೆಗಳನ್ನು ಮತ್ತು ಸಹಕಾರಗಳನ್ನು ನೀಡಬೇಕೆಂದು ಸೌತಡ್ಕದ ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳು ಹೆಗ್ಗಡೆಯವರಲ್ಲಿ ವಿನಂತಿಸಿಕೊಂಡರು.
ಈ ಸಂದರ್ಭ ಧರ್ಮಾಧಿಕಾರಿಯವರು ಮಾತನಾಡಿ ಕ್ಷೇತ್ರದಿಂದ ಸಂಪೂರ್ಣ ಸಹಕಾರ ನೀಡುವುದಾಗಿಯೂ ಮತ್ತು ಉತ್ತಮ ರೀತಿಯಲ್ಲಿ ಕ್ಷೇತ್ರವನ್ನು ಮುನ್ನಡೆಸಲು ಎಲ್ಲಾ ಸದಸ್ಯ ಪದಾಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.
ತಂಡದಲ್ಲಿ ಶ್ರೀ ಕ್ಷೇತ್ರ ಸೌತಡ್ಕದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ, ಸದಸ್ಯರಾದ ವಿಶ್ವನಾಥ ಕೊಲ್ಲಾಜೆ, ಪ್ರಶಾಂತ ರೈ ಅರಂತಬೈಲು, ಪಿ. ವಿಶ್ವನಾಥ ಶೆಟ್ಟಿ, ಗಣೇಶ್ ಪಿ.ಕೆ., ಕ್ಷೇತ್ರದ ಸಿಬ್ಬಂದಿ ಕೇಶವ ಶಬರಾಯ, ಸಮಿತಿಯ ಆಯ್ಕೆಗೆ ಸಹಕರಿಸಿದ ಬೆಳ್ತಂಗಡಿಯ ಕೆ.ಎಸ್ ಯೋಗೀಶ್ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.