ವೀರಕೇಸರಿ: ಸಾರ್ವಜನಿಕ ಶ್ರೀ ಶನೈಶ್ಚರ ಪೂಜೋತ್ಸವ – ಸಾಧಕರಿಗೆ ಸನ್ಮಾನ

Veerakesari shaneeshwara pooje sabhe 1 copyಯುವ ಸಮುದಾಯದಿಂದ ಧರ್ಮ-ಸಂಸ್ಕೃತಿಯ ಸಂರಕ್ಷಣಾ ಕಾರ್ಯ ನಡೆಯಲಿ: ಸುಬ್ರಹ್ಮಣ್ಯ ಶ್ರೀ

ವಿವಿಧ ಕ್ಷೇತ್ರಗಳ 13 ಮಂದಿ ಸಾಧಕರಿಗೆ ಸನ್ಮಾನ
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ೧೩ ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಸಿ.ಜೆ. ಪ್ರಭಾಕರ್‌ರವರಿಗೆ ‘ಬಡವರ ಬಂಧು’, ವಿನಾಯಕ ರಾವ್‌ರಿಗೆ ‘ಸಮಾಜ ಸೇವಾ ರತ್ನ’, ಡಾ| ನಾರಾಯಣ ಪ್ರಭುರವರಿಗೆ ‘ವೈದ್ಯಕೀಯ ರತ್ನ’, ಶ್ರೀಮತಿ ವನಜ ಕುಮಾರಿಯವರಿಗೆ ‘ಶಿಕ್ಷಣ ರತ್ನ’, ರಮೇಶ್ ಕಾರಂತರಿಗೆ ‘ಸರಸ್ವತಿ ಸನ್ಮಾನ್’, ಹರೀಶ್ ಭಟ್ ನಾಳರವರಿಗೆ ‘ಕಲಾಶ್ರೀ’, ಅರುಣ್ ಜೆ. ರೆಬೆಲ್ಲೋರವರಿಗೆ ‘ಸಮಾಜ ಸೇವಾ ರತ್ನ’, ನಿತೀಶ್ ಕನ್ಯಾಡಿಯವರಿಗೆ ‘ಕುಂಚಶ್ರೀ’, ವಿಜಯಕುಮಾರ್ ಜೈನ್‌ರವರಿಗೆ ‘ಸಾಂಸ್ಕೃತಿಕ ರಾಯಬಾರಿ’, ಹಿತೇಶ್ ಕಾಪಿನಡ್ಕರವರಿಗೆ ‘ಸಾಂಸ್ಕೃತಿಕ ಯುವ ಸಾಧಕ’, ಶೇಖರ ಬೆಳಾಲುರವರಿಗೆ ‘ಸಾಂಸ್ಕೃತಿಕ ರಾಯಬಾರಿ’, ಜಗದೀಶ್ ಪೂಜಾರಿಯವರಿಗೆ ‘ಸರ್ವೋತ್ತಮ ಸಾಧಕ’, ಆನಂದ ಡಿ.ಎಸ್ ರವರಿಗೆ ‘ಯುವ ಸಾಧಕ’ ಪ್ರಶಸ್ತಿ ನೀಡಿ ವೀರಕೇಸರಿ ವತಿಯಿಂದ ವೇದಿಕೆಯಲ್ಲಿದ್ದ ಗಣ್ಯ ಅತಿಥಿಗಳು ಸಮ್ಮಾನಿಸಿದರು.

ಕನ್ಯಾಡಿ || : ಭಗವಂತ ಮನುಷ್ಯನಿಗೆ ನಿಯತ್ತಿನ ಬದುಕನ್ನು ಕೊಟ್ಟಿದ್ದಾನೆ. ಈ ಬದುಕಿನಲ್ಲಿ ಸತ್ಕಾರ್ಯಗಳನ್ನು ಮಾಡಬೇಕು, ಯುವ ಸಂಪತ್ತು ಯಾವುದೇ ಪ್ರಭಾವಗಳಿಗೆ ಒಳಗಾಗದೇ ನಮ್ಮ ಧರ್ಮ, ಸಂಸ್ಕೃತಿಯನ್ನು ಸಂರಕ್ಷಿಸುವ ಕಾರ್ಯ ನಡೆಸಬೇಕು, ಇದಕ್ಕೆ ವೀರಕೇಸರಿ ಧರ್ಮಸ್ಥಳ-ಬೆಳ್ತಂಗಡಿ ಸಂಘಟನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ವೀರಕೇಸರಿ ಧರ್ಮಸ್ಥಳ ಬೆಳ್ತಂಗಡಿ ಹಾಗೂ ಶ್ರೀ ಶನೈಶ್ಚರ ಪೂಜಾ ಸಮಿತಿ ಕನ್ಯಾಡಿ || ಇದರ ಸಹಯೋಗದೊಂದಿಗೆ 6ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೋತ್ಸವ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಎ.15ರಂದು ಹಿ.ಪ್ರಾ ಶಾಲಾ ಮೈದಾನ ಕನ್ಯಾಡಿ || ಇಲ್ಲಿ ಜರುಗಿತು.
ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಭೂಷಣ ಸ್ವಾಮೀಜಿಯವರು ಆಶೀರ್ವಚನ ನೀಡಿ, ಇತರ ಎಲ್ಲಾ ಜೀವಿಗಳಿಗಿಂತ ಭಗವಂತ ಮನುಷ್ಯನಿಗೆ ಎಲ್ಲಾ ಅವಕಾಶಗಳನ್ನು ಕೊಟ್ಟಿದ್ದಾನೆ. ನಾವು ಯವ್ವನ, ಸಂಪತ್ತು, ಅಧಿಕಾರ, ಅವಿವೇಕದಿಂದ ನಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು, ಯಾವುದೋ ಪ್ರಭಾವಕ್ಕೆ ಒಳಗಾಗಿ ಸಂಕಷ್ಟಕ್ಕೆ ಒಳಗಾಗಬಾರದು, ನಮ್ಮ ದೇಶದ ಯುವ ಸಂಪತ್ತನ್ನು ಸಂಪೂರ್ಣ ನಾಶ ಮಾಡಲು ಬೇರೆ, ಬೇರೆ ರೀತಿಯಲ್ಲಿ ವಿದೇಶಿ ಶಕ್ತಿಗಳು ಪಿತೂರಿ ನಡೆಸುತ್ತಿದೆ. ಯುವಕ-ಯುವತಿಯರು ಇಂತಹ ಪ್ರಭಾವಗಳಿಗೆ ಒಳಗಾಗದೇ ತಮ್ಮನ್ನು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಭವ್ಯ ಸಮಾಜದ ನಿರ್ಮಾಣದಲ್ಲಿ ತಾವು ಸಹಭಾಗಿಗಳಾಗಬೇಕು, ವೀರಕೇಸರಿ ಸಂಘಟನೆಯವರು ಮಾಡುತ್ತಿರುವ ಇಂತಹ ಪುಣ್ಯ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ಯುವ ಬ್ರಿಗೇಡ್ ಮಂಗಳೂರಿನ ಶ್ರೀ ಕೃಷ್ಣ ಉಪಾಧ್ಯಾಯ ಧಾರ್ಮಿಕ ಉಪನ್ಯಾಸ ಮಾಡಿ ವೀರಕೇಸರಿ ತಂಡ ಪರೋಪಕಾರದ ಅದ್ಭುತ ಕೆಲಸ ಮಾಡಿದೆ. ತರುಣ ಪಡೆ ಸಮಾಜಕ್ಕಾಗಿ ಎದ್ದುನಿಂತಿದೆ, ತರುಣರು ಅಧಿಕವಾಗಿರುವ ಗ್ರಾಮ, ದೇಶ ಸಂಪದ್ಭರಿತವಾಗುತ್ತದೆ. ಕೇಸರಿ ತಂಡ ಬೆಳ್ತಂಗಡಿ ತಾಲೂಕಿನ ಸಂಪತ್ತು ಎಂದರು.
ನಾವು ದೇವಸ್ಥಾನಗಳಲ್ಲಿ ಪೂಜೆ, ಅನ್ನದಾನ ಮಾತ್ರ ಮಾಡಿದರೆ ಸಾಲದು ಜ್ಞಾನ ದಾನದ ಕೆಲಸಗಳು ನಡೆಯಬೇಕು, ರಾಮಾಯಾಣ, ಮಹಾಭಾರತ, ವೇದ, ಉಪನಿಷತ್ ಮೊದಲಾದ ಹಿಂದೂ ಧಾರ್ಮಿಕ ಗ್ರಂಥಗಳ ಬಗ್ಗೆ ಮಕ್ಕಳಿಗೆ ಕಲಿಸುವ ಕಾರ್ಯಗಳು ನಡೆಯಬೇಕು, ನಮ್ಮ ಸಾಂಸ್ಕೃತಿಕ ಪೂಜ್ಯ ಭಾವನೆ ಉದ್ದೀಪನ ಗೊಳಿಸುವ ಕೆಲಸ ನಡೆಯಬೇಕು ಎಂದು ಸಲಹೆಯಿತ್ತರು.
ಭೂತಾರಾಧನೆಗೂ ಒಂದು ಸಂವಿಧಾನ ಇದೆ. ಭೂತ ಕಟ್ಟುವ ನರ್ತಕರಿಗೆ ಪಾಡ್ದನಗಳು ಮರೆತು ಹೋಗುತ್ತಿದೆ. ಅವರಲ್ಲಿ ಕೇಳಿದರೆ, ನರ್ತನ ಸೇವೆ ಬೇಗ ಮುಗಿಯಬೇಕು ಎಂದು ಹೇಳುತ್ತಾರೆ ಎಂಬ ಕಾರಣ ದೊರೆಯುತ್ತದೆ. ಆದುದರಿಂದ ಇಂತಹ ಪಾಡ್ದಗಳ ದಾಖಲಿಕರಣವಾಗಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಧನಂಜಯ ರಾವ್ ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ ಸೇವೆಯ ಮತ್ತೊಂದು ಪ್ರತಿರೂಪವೇ ವೀರಕೇಸರಿ, ಈ ಯುವಕರ ತಂಡದೊಂದಿಗೆ ಸ್ವಲ್ಪ ಸಮಯವನ್ನು ಕಳೆಯುವ ಭಾಗ್ಯ ದೊರೆತಿರುವುದು ನನಗೆ ಧನ್ಯತೆಯನ್ನು ಉಂಟು ಮಾಡಿದೆ. ಸೇವೆ ಎಂದರೆ ಧನ ಸಹಾಯ ಮಾಡುವುದು ಒಂದೇ ಅಲ್ಲ, ಬದುಕಿನಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿರುವವರ ಮುಖದಲ್ಲಿ ನಗು ತುಂಬುವ ಸಣ್ಣ ಸಣ್ಣ ಸೇವೆಯೂ ನಿಜವಾದ ಸೇವೆಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿಜೆಪಿ ಯುವ ಮೋರ್ಚಾ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಮಾತನಾಡಿ ಸಮಾಜದಲ್ಲಿ ಬೇಧ, ಭಾವ ಮರೆತು ಎಲ್ಲಾ ಜಾತಿ, ಮತದವರಿಗೆ ವಿವಿಧ ರೀತಿಯಲ್ಲಿ ಸೇವೆ ಮಾಡುತ್ತಿರುವ ವೀರ ಕೇಸರಿ ಸಮಾಜಕ್ಕೆ ಮಾದರಿ ಸಂಘಟನೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸೇವೆ ಮಾಡುವ ಈ ಸಂಘಟನೆಯ ಕಾರ್ಯ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮ ಎಲ್ಲರಿಗೂ ಪ್ರೇರಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾ.ಜ.ಪ ತಾಲೂಕು ಅಧ್ಯಕ್ಷ ರಂಜನ್ ಜಿ. ಗೌಡ, ಉಜಿರೆ ಉದ್ಯಮಿ ಸುರೇಂದ್ರ ಕುಡ್ವ, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸಂಪತ್ ಸುವರ್ಣ, ಗುತ್ತಿಗೆದಾರ ಪ್ರಕಾಶ್ ಟಿ. ಪಿಲಿಕಬೆ ಅರಸಿನಮಕ್ಕಿ, ಉದ್ಯಮಿ ಶ್ರೀನಿವಾಸ್ ಪಟ್ರಮೆ, ಧರ್ಮ ಜಾಗರಣ ಸಮನ್ವಯ ವಿಭಾಗ ಸಂಯೋಜಕ ದಿನಕರ್ ಆದೇಲು, ಕನ್ಯಾಡಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸೂರ್ಯಪ್ರಕಾಶ್, ಧರ್ಮಸ್ಥಳ ಗ್ರಾ.ಪಂ. ಸದಸ್ಯ ಸುಧಾಕರ್ ಗೌಡ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಶನೈಶ್ಚರ ಪೂಜಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಬರಮೇಲು, ಗೌರವಾಧ್ಯಕ್ಷ ಸುರೇಶ್ ಹೆಗ್ಡೆ ದುಬೈ, ಪ್ರಧಾನ ಕಾರ್ಯದರ್ಶಿ ದಿವಾಕರ್ ಕೆ., ವೀರಕೇಸರಿ ಶಾಖೆ ಧರ್ಮಸ್ಥಳದ ಸಂಚಾಲಕ ಅನುರಾಜ್ ಕೂಟದಕಲ್ಲು, ಬೆಳ್ತಂಗಡಿ ಶಾಖಾ ಸಂಚಾಲಕ ಸತೀಶ್ ಶೆಟ್ಟಿ, ಉದ್ಯಮಿ ಹರಿಶ್ಚಂದ್ರ ಪೈ ಉಪಸ್ಥಿತರಿದ್ದರು.
ಕು| ಪ್ರತೀಕ್ಷಾ ಇವರ ಪ್ರಾರ್ಥನೆ ಬಳಿಕ ಕಾರ್ತಿಕ್ ಜೋಡುಸ್ತಾನ ಸ್ವಾಗತಿಸಿದರು. ಚಂದ್ರಹಾಸ ಬಳೆಂಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಶನೈಶ್ಚರ ಪೂಜೆ: ಬೆಳಗ್ಗೆ 6.30ಕ್ಕೆ ಗಣಹೋಮ ಸಂಕಲ್ಪ, ಸಂಜೆ 4.30ಕ್ಕೆ ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮ ಆರಂಭಗೊಂಡು ಸಂಜೆ 7.30ಕ್ಕೆ ಮಹಾ ಪೂಜೆಯೊಂದಿಗೆ ಮುಕ್ತಾಯಗೊಂಡಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ, ಬಲೆತೆಲಿಪಾವ ಸಾಂಸ್ಕೃತಿಕ ಕಾರ್ಯಕ್ರಮ, ಬಳಿಕ ಹೊನಲು ಬೆಳಕಿನ ತಾಲೂಕು ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.