ಮಿಯಾರು ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1

vanadurgaparameshwari amantrana patrike bidugade copyಧರ್ಮಸ್ಥಳ: ಮೇ 7ರಿಂದ 12ರ ವರೆಗೆ ಇತಿಹಾಸ ಪ್ರಸಿದ್ಧ ಮಿಯಾರು ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನ ಪುದುವೆಟ್ಟಿನಲ್ಲಿ ನಡೆಯಲಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಎ.14ರಂದು ಧರ್ಮಸ್ಥಳ ಬೀಡಿನಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಯು. ರಮೇಶ್ ಪ್ರಭು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಾಂಜೀಲು ಶ್ರೀಪತಿ ಹೆಬ್ಬಾರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಗರ್ಡಾಡಿ ಹರೀಶ್ ಪೂಂಜ ಹಾಗೂ ಸಮಿತಿಯ ಸದಸ್ಯರುಗಳಾದ ಮುದ್ರಣ ಮತ್ತು ಆಮಂತ್ರಣ ಪತ್ರಿಕೆ ಸಂಚಾಲಕ ಯಧುಪತಿ ಗೌಡ, ಅಜಿತ್ ಪ್ರಸಾದ್, ಮಠ ಬೊಮ್ಮಣ್ಣ ಗೌಡ, ಸುಕುಮಾರನ್ ಮೇರ್ಲ, ರಾಧಾಕೃಷ್ಣ ಕರಂಬಾರು, ಯಶವಂತ, ಶಶಿಕುಮಾರನ್, ಧ.ಗ್ರಾ. ಯೋ. ಧರ್ಮಸ್ಥಳ ವಲಯ ಮೇಲ್ವಿಚಾರಕ ಮಾಧವ, ಸುಂದರ ಪೂಜಾರಿ, ದಿನೇಶ, ಪುಷ್ಪಕರ, ಧನ್ಯಕುಮಾರ್, ಮಠ ಗಂಗಾಧರ, ದಾಮೋದರ ಗೌಡ, ಗೋಪಿದಾಸ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.