ಪುದುವೆಟ್ಟು ಶ್ರೀ ವನದುರ್ಗಾ ಪರಮೇಶ್ವರೀ ಕ್ಷೇತ್ರದಲ್ಲಿ ಚಪ್ಪರ ಮೂಹೂರ್ತ

puduvettu

puduvettu1ಪುದುವೆಟ್ಟು : ಪುದುವೆಟ್ಟು ಗ್ರಾಮದ ಮಿಯಾರು ಶ್ರೀ ವನದುರ್ಗಾಪರಮೇಶ್ವರೀ ಕ್ಷೇತ್ರವು ನವೀಕರಣ ಪುನರ್‌ಪ್ರತಿಷ್ಠಾ, ಬ್ರಹ್ಮಕಲಶೋತ್ಸವವು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಸಹಕಾರ, ಮಾರ್ಗದರ್ಶನ, ಆಶೀರ್ವಾದದೊಂದಿಗೆ ಮೇ. 7 ರಿಂದ 12ರವರೆಗೆ ನಡೆಯಲಿದೆ.
ಇದರ ಅಂಗವಾಗಿ ಎ. 13ರಂದು ಚಪ್ಪರ ಮೂಹೂರ್ತವು ವೇ| ಮೂ| ಗುರು ಪ್ರಸಾದ್ ಭಟ್‌ರ ವೈದಿಕ ಕಾರ್ಯಕ್ರಮದೊಂದಿಗೆ ಊರಿನ ಗಣ್ಯರ ಹಾಗೂ ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿಗಳ ಮುಖ್ಯಸ್ಥರ ನೇತೃತ್ವದಲ್ಲಿ ನಡೆಯಿತು.
ಚಪ್ಪರ ಸಮಿತಿ ಸಂಚಾಲಕ ಕಾಯರಂಡ ಕೆ. ನಾರಾಯಣ ಪೂಜಾರಿ ಕಂಬ ನೆಡುವುದರೊಂದಿಗೆ ಚಪ್ಪರ ಕೆಲಸಕ್ಕೆ ಚಾಲನೆ ನೀಡಿದರು. ಸಹಸಂಚಾಲಕ ಕೊರೆಜಿ ತಿಮ್ಮಪ್ಪ ಗೌಡ, ಆಡಳಿತ ಸಮಿತಿ ಅಧ್ಯಕ್ಷ ಯು. ರಮೇಶ್ ಪ್ರಭು, ಕಾರ್ಯದರ್ಶಿ ಶೇಖರ ಎಂ.ಕೆ. ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ, ಅಜಿತ್ ಪ್ರಸಾದ್, ಕೋಶಾಧಿಕಾರಿ ಮಠ ಬೊಮ್ಮಣ್ಣ ಗೌಡ, ಡೆಚ್ಚಾರು ಯಶವಂತ ಗೌಡ, ಮೇರ್ಲ ಸುಕುಮಾರ್, ನಿತ್ಯಾನಂದ ಗೌಡ, ಮಠ ಸಂಜೀವ ಗೌಡ, ಮಠ ಗಂಗಾಧರ, ಮಠ ರಾಧಾಕೃಷ್ಣ, ಮಠ ಬಾಬಣ್ಣ, ಬಾರಾಳಿ ಅಶೋಕನ್, ರಾಮೇಂದ್ರ, ಡೆಚ್ಚಾರು ಯಧುಪತಿ ಗೌಡ, ಬ್ರಹ್ಮಕಲಶೋತ್ಸವ ಪ್ರಧಾನ ಕಾರ್ಯದರ್ಶಿ ಗಣೇಶ್, ಕಾರ್ಯದರ್ಶಿ ಕರಂಬಾರು ರಾಧಕೃಷ್ಣ, ಕೋಶಾಧಿಕಾರಿ ಪಿ. ಚಂದ್ರಶೇಖರ ಭಟ್, ಮೂಜಾರು ದಡ್ಡು ದಾಮೋದರ ಗೌಡ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.