ರಬ್ಬರ್ ಉತ್ಪಾದಕರ ಸೊಸೈಟಿಯ ಸಮಾವೇಶ

Advt_NewsUnder_1
Advt_NewsUnder_1
Advt_NewsUnder_1

  rubber society samavesha copyಬೆಳ್ತಂಗಡಿ : ವೈಜ್ಞಾನಿಕವಾಗಿ ರಬ್ಬರ್ ಬೆಳೆಯುವುದರಿಂದ ಅಧಿಕ ಬೆಳೆಯನ್ನು ಪಡೆಯಬಹುದು ಎಂದು ಕೇಂದ್ರ ರಬ್ಬರ್ ಬೋರ್ಡ್‌ನ ಡೆಪ್ಯುಟಿ ಪ್ರೊಡಕ್ಷನ್ ಕಮಿಷನರ್ ಬಾಲಕೃಷ್ಣ ಎಸ್. ಹೇಳಿದರು.
ಅವರು ಸಂತೆಕಟ್ಟೆ ಸುವರ್ಣ ಆರ್ಕೆಡ್‌ನಲ್ಲಿ ಬೆಳ್ತಂಗಡಿ ತಾಲೂಕು ರಬ್ಬರು ಉತ್ಪಾದಕರ ಸೊಸೈಟಿಗಳ ಯೂನಿಯನ್ ವತಿಯಿಂದ ಆಯೋಜಿಸಲಾದ ರಬ್ಬರ್ ಮೀಟ್ 2017ನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ 15 ಲಕ್ಷ ಟನ್ ರಬ್ಬರ್‌ಗೆ ಬೇಡಿಕೆ ಇದೆ. 11 ಲಕ್ಷ ಟನ್ ನೈಸರ್ಗಿಕ ರಬ್ಬರ್ ಬೇಕು. ಆದರೆ 5-6ಲಕ್ಷ ಟನ್ ಮಾತ್ರ ಉತ್ಪಾದನೆಯಾಗುತ್ತಿದೆ. ಉಳಿದ ರಬ್ಬರ್ ವಿದೇಶದಿಂದ ಆಮದಾಗುತ್ತಿದೆ ಎಂದರು.
ರಬ್ಬರ್ ಕೃಷಿ ನೂತನ ಯುಗದಲ್ಲಿ ಅತ್ಯಂತ ಅವಶ್ಯ. 60ಸಾವಿರ ವಸ್ತುಗಳನ್ನು ರಬ್ಬರ್‌ನಿಂದ ಉತ್ಪಾದಿಸುತ್ತಾರೆ. ನೀರು ಬೇಡದ ಲಾಭದಾಯಕ ಕೃಷಿ ಇದು. ರಬ್ಬರ್ ಉತ್ಪಾದನೆಯಲ್ಲಿ ಜಿಲ್ಲೆಯಲ್ಲಿ ಸುಳ್ಯ ಪ್ರಥಮ, ಬೆಳ್ತಂಗಡಿ ದ್ವಿತೀಯ ಸ್ಥಾನದಲ್ಲಿದೆ. ಬೆಳ್ತಂಗಡಿಯಲ್ಲಿ 10 ಸಾವಿರ ಹೆಕ್ಟೇರ್ ರಬ್ಬರ್ ಬೆಳೆ ಇದೆ. ಕರ್ನಾಟಕದಲ್ಲಿ 85 ರಬ್ಬರ್ ಉತ್ಪಾದಕರ ಸಂಘಗಳಿದ್ದು ಮಂಗಳೂರು ವ್ಯಾಪ್ತಿಯಲ್ಲಿ 29 ಇದೆ. ಬೆಳ್ತಂಗಡಿಯಲ್ಲಿ 15 ಇದೆ. ತೋಟತ್ತಾಡಿ ಸಂಘದವರು 33 ಸೆಂಟ್ಸ್ ಜಾಗ ಹೊಂದಿದ್ದು ಅಲ್ಲಿ ಟ್ಯಾಪಿಂಗ್ ತರಬೇತಿ ನಡೆಸಲಾಗುವುದು. ಬೆಳ್ತಂಗಡಿ ಪ್ರಾದೇಶಿಕ ಕಚೇರಿಯನ್ನು ಮಾದರಿ ಕ್ಷೇತ್ರ ಕಚೇರಿಯಾಗಿ ಪರಿವರ್ತಿಸಲಾಗುವುದು ಎಂದು ಬಾಲಕೃಷ್ಣ ಹೇಳಿದರು.
ಅಧ್ಯಕ್ಷತೆಯನ್ನು ರಬ್ಬರ್ ಉತ್ಪಾದಕರ ಸಂಘದ ತಾಲೂಕು ಯೂನಿಯನ್ ಅಧ್ಯಕ್ಷ ಕೆ.ಎಫ್. ಮಾಥ್ಯೂ ವಹಿಸಿದ್ದರು. ಶಾಸಕ ಕೆ. ವಸಂತ ಬಂಗೇರ ಸಭೆಗೆ ಮುನ್ನ ಭೇಟಿ ನೀಡಿದರು.
ಬೆಳ್ತಂಗಡಿ ಫಾರ್ಮಸ್ ಕ್ಲಬ್ ಅಧ್ಯಕ್ಷ ಸಿ.ಎಂ. ಥಾಮಸ್, ರಬ್ಬರ್ ಮಂಡಳಿಯ ಕ್ಷೇತ್ರೀಯ ಅಧಿಕಾರಿ ರಮಾ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ವಿ.ಟಿ ಸೆಬ್ಯಾಸ್ಟಿಯನ್ ಉಪಸ್ಥಿತರಿದ್ದರು.
ಕಸ್ತೂರಿರಂಗನ್ ವರದಿ ಕುರಿತು ಮಾಹಿತಿ ನೀಡಲಾಯಿತು. 76 ವರ್ಷದ ಟ್ಯಾಪರ್ ಜೋಸೆಫ್ ಹಾಗೂ ತಾ.ಪಂ ಸದಸ್ಯರಾಗಿ ಆಯ್ಕೆಯಾದ ವಿ.ಟಿ ಸೆಬಾಸ್ಟಿಯನ್ ರವರನ್ನು ಸನ್ಮಾನಿಸಲಾಯಿತು. ಕೃಷಿ ನಷ್ಟವಾದ ಸಿ.ಜೆ ಜೋಸೆಫ್ ಹಾಗೂ ಕೂಲಿ ನಷ್ಟವಾದ ಸಂಸ್ಥೆಗೆ ಪರಿಹಾರ ಧನ ನೀಡಲಾಯಿತು. ವಿದ್ಯಾರ್ಥಿ ವೇತನ ವಿತರಿಸಲಾಯಿತು. ಜೋಸೆಫ್ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.