ಎತ್ತಿನ ಹೊಳೆ ನೀರಿಗಾಗಿ ಸಹಕಾರ ಕೋರಿದ ಮಧುಗಿರಿ ನಾಗರಿಕರು ಧರ್ಮಸ್ಥಳದಲ್ಲಿ ಡಾ. ಹೆಗ್ಗಡೆಯವರಿಗೆ ಮನವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Ettinahole 1 copy

Ettinahole 2 copyಧರ್ಮಸ್ಥಳ: ತುಮಕೂರು ಜಿಲ್ಲೆಯ ಮಧುಗಿರಿ, ಕೊರಟಗೆರೆ ಹಾಗೂ ಕೋಲಾರ ಸೇರಿದಂತೆ ಬರಪೀಡಿತ ಪ್ರದೇಶಗಳಿಗೆ ಎತ್ತಿನಹೊಳೆ ನೀರು ಹರಿಸಲು ಸಹಕರಿಸಬೇಕೆಂದು ಕೋರಿ ಶಾಸಕ ಕೆ.ಎನ್. ರಾಜಣ್ಣ ನೇತೃತ್ವದಲ್ಲಿ ಬಂದ ತಂಡ ಎ.12ರಂದು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಬೇಟಿ ಮಾಡಿ ಮನವಿ ಸಲ್ಲಿಸಿತು.
ಜನರು ಹಾಗೂ ಜಾನುವಾರುಗಳಿಗೆ ಕುಡಿಯಲು ಕೂಡಾ ನೀರಿನ ಕೊರತೆಯಾಗಿದೆ. ಆದುದರಿಂದ ಎತ್ತಿನ ಹೊಳೆ ನೀರು ಹರಿಸಲು ಸಹಕಾರ ಕೋರಿದರು. ಮನವಿ ಸ್ವೀಕರಿಸಿದ ಹೆಗ್ಗಡೆಯವರು ಮಾತನಾಡಿ ನೀರಿನ ಬಳಕೆ ಅತಿಯಾಗಿರುವುದಲ್ಲದೆ, ಕಡಿಮೆ ಮಳೆ ಹಾಗೂ ನೀರಿನ ಮರುಪೂರಣ ವ್ಯವಸ್ಥೆಯ ಕೊರತೆಯಿಂದಾಗಿ ಸಹಜವಾಗಿ ನೀರಿನ ಅಭಾವ ತಲೆದೋರಿದೆ. ಜನರು ಪ್ರಕೃತಿಗೆ ವಿರುದ್ಧವಾಗಿ ವರ್ತಿಸಿದ ಪರಿಣಾಮ ಇದಾಗಿದೆ ಎಂದರು.
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ರಾಜ್ಯದಲ್ಲಿ ಈಗಾಗಲೆ ನೂರು ಕೆರೆಗಳ ಹೂಳೆತ್ತುವ ಕಾರ್ಯ ಭರದಿಂದ ಸಾಗುತ್ತಿದೆ. ರೈತರಿಂದಲೂ ಉತ್ತಮ ಸ್ಪಂದನೆ ದೊರಕಿದೆ. ಮುಂದಿನ ವರ್ಷ ಮಧುಗಿರಿ ಪರಿಸರದಲ್ಲಿಯೂ ಕೆರೆಗಳ ಹೂಳೆತ್ತುವ ಕಾರ್ಯ ಆರಂಭಿಸುವುದಾಗಿ ಹೆಗ್ಗಡೆಯವರು ಪ್ರಕಟಿಸಿದರು.
ತಂಡದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಜಿ.ಟಿ. ರಾಜಣ್ಣ, ರಘು ಯಾದವ್ ಮತ್ತು ಪರಶುರಾಮ, ಪುರಸಭಾಧ್ಯಕ್ಷ ಎಂ.ಕೆ. ನಂಜುಂಡಯ್ಯ, ಎಂ.ಎಸ್. ಮಲಿಕಾರ್ಜುನ, ರಾಜಗೋಪಾಲ ಮೊದಲಾದವರು ಇದ್ದರು.
ಎತ್ತಿನ ಹೊಳೆ ಕಾಮಗಾರಿ ವೀಕ್ಷಣೆ :
ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್. ರಾಜಣ್ಣ ನೇತೃತ್ವದಲ್ಲಿ ಸುಮಾರು 3 ಸಾವಿರ ಮಂದಿ 280 ವಾಹನಗಳಲ್ಲಿ ಎ.11ರಂದು ಮಧುಗಿರಿಯಿಂದ ಸಕಲೇಶಪುರದ ಬಳಿ ನಿರ್ಮಾಣವಾಗುತ್ತಿರುವ ಎತ್ತಿನ ಹೊಳೆ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು.
ಧರ್ಮಸ್ಥಳ ಕ್ಷೇತ್ರ ಭೇಟಿ:
ಅಲ್ಲಿಂದ 3.30ಕ್ಕೆ ಹೊರಟ ತಂಡ ಸಂಜೆ ಧರ್ಮಸ್ಥಳಕ್ಕೆ ಆಗಮಿಸಿದರು. ಮಾಧ್ಯಮದವರ ಜೊತೆ ಮಾತನಾಡಿದ ನಗರ ಸಭಾ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ ನಮ್ಮಲ್ಲಿ ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ, ಇಲ್ಲಿ ಮಳೆಗಾಲದಲ್ಲಿ ಹರಿದು ಸಮುದ್ರ ಸೇರುವ ನೀರನ್ನಷ್ಟೇ ನಮಗೆ ಕೊಡಿ ಎಂದು ಕೇಳುತ್ತಿದ್ದೇವೆ ಎಂದರು. ಇಲ್ಲಿ ನೀರಿನ ಸಮಸ್ಯೆ ಇದೆ, ಮಳೆ ಕೊರತೆ ಬಗ್ಗೆ ನಮಗೂ ಅರಿವಿದೆ ಆದರೂ ನೀರು ಒದಗಿಸುವ ಬಗ್ಗೆ ಸಹಕಾರ ನೀಡಿ ಎಂದರು.
ಹೋರಾಟ ಸಮಿತಿ ಭೇಟಿ:
ಎತ್ತಿನ ಹೊಳೆ ಹೋರಾಟ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಶಶಿಕಿರಣ್ ಜೈನ್, ಹರೀಶ್ ಪೂಂಜ, ಕಿರಣ್ ಶೆಟ್ಟಿ ಮಧುಗಿರಿಯಿಂದ ಆಗಮಿಸಿದ ನಿಯೋಗದೊಂದಿಗೆ ಸೌಹಾರ್ದ ಭೇಟಿ ಮಾಡಿ ನೇತ್ರಾವತಿಯಲ್ಲಿ ನೀರಿನ ಕೊರತೆ ಹಾಗೂ ಇಲ್ಲದ ನೀರಿಗಾಗಿ ಸರಕಾರ ಕೋಟ್ಯಾಂತರ ರೂ. ಖರ್ಚು ಮಾಡಿ ಹಣ ಪೋಲು ಮಾಡುತ್ತಿರುವ ಬಗ್ಗೆ ಮನವರಿಕೆ ಮಾಡಿದರು.
ಪೊಲೀಸ್ ಬಂದೋಬಸ್ತ್:
ಮುಂಜಾಗರುಕತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಡಿವೈಎಸ್‌ಪಿ ರವೀಶ್ ಸಿ.ಆರ್, ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವ ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.