ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಜಾತ್ರೋತ್ಸವ ಸಂಪನ್ನ

Surya jathre copyಸುರ್ಯ: ಇತಿಹಾಸ ಪ್ರಸಿದ್ಧ ಮಣ್ಣಿನ ಹರಕೆಯ ಪ್ರಖ್ಯಾತ ಕ್ಷೇತ್ರ ಶ್ರೀ ಸದಾಶಿವರುದ್ರ ದೇವಸ್ಥಾನ ಸುರ್ಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ವರ್ಷಾವಧಿ ಜಾತ್ರೆ ಎ.4 ರಿಂದ ಎ.9ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಎ.4ರಂದು ಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ ಎ.5ರಂದು ಬೆಳಗ್ಗೆ ಗಣಪತಿ ಹೋಮ, ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ, ನಿತ್ಯಬಲಿ ಎ.6ರಂದು ನಿತ್ಯಬಲಿ, ಸಂಜೆ ಸುರ್ಯಗುತ್ತು ಮನೆಯಿಂದ ದೈವಗಳ ಭಂಡಾರದ ಕ್ಷೇತ್ರಕ್ಕೆ ತರುವುದು, ಬಳಿಕ ದೇವರ ಉತ್ಸವ ವಸಂತಕಟ್ಟೆ ಪೂಜೆ, ಮಹಾಪೂಜೆ ಜರುಗಿತು.
ಎ.7ರಂದು ಸೊಡರ ಬಲಿ ಉತ್ಸವ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಉತ್ಸವ, ಕೆರೆಕಟ್ಟೆ ಪೂಜೆ, ಎ.8ರಂದು ಬೆಳಗ್ಗೆ ದರ್ಶನ ಬಲಿ ಉತ್ಸವ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಉತ್ಸವ ಹೊರಟು ನೃತ್ಯಬಲಿ ಉತ್ಸವ, ರಥಕಟ್ಟೆ ಪೂಜೆ, ಮಹಾಪೂಜೆ ಶಯನೋತ್ಸವ, ಎ.9ರಂದು ಕವಾಟೋದ್ಘಾಟನೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಯಾತ್ರಾ ಹೋಮ, ಅವಭೃತ ಸ್ನಾನ, ಧ್ವಜಾವರೋಹಣ, ಬಳಿಕ ರಾತ್ರಿ ದೈವಗಳ ನೇಮ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎ.6ರಂದು ರಾತ್ರಿ ರಾಜ್ಯ ಪ್ರಶಸ್ತಿ ವಿಜೇತ ತೆಲಿಕೆದ ಬೊಳ್ಳಿ ಲ| ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ‘ಕೊಡೆ ಬುಡ್ಪಾಲೆ’ ತುಳು ನಾಟಕ, ಎ.7ರಂದು ಶ್ರೀ ಸದಾಶಿವ ಅಂಗನವಾಡಿ ಕೇಂದ್ರ ಹಾಗೂ ಹಿ.ಪ್ರಾ ಶಾಲಾ ಮಕ್ಕಳಿಂದ ‘ನೃತ್ಯವೈವಿಧ್ಯ ಕಾರ್ಯಕ್ರಮ’ ಎ.8ರಂದು ರಾತ್ರಿ ಸಂಗಮ ಕಲಾವಿದರು ಉಜಿರೆ ಇವರಿಂದ ಗಿರೀಶ್ ಹೊಳ್ಳ ನಿರ್ದೇಶನದಲ್ಲಿ ‘ದಾಯೆ ಇಂಚ ಮಲ್ತ’ ಹಾಸ್ಯಮಯ ನಾಟಕ ಜರುಗಿತು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಸುರ್ಯಗುತ್ತು, ಸತೀಶ್ಚಂದ್ರ ಸುರ್ಯಗುತ್ತು, ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ, ಬಿ. ಮುನಿರಾಜ ಅಜ್ರಿ, ಊರ ಹಾಗೂ ಪರವೂರ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.